
ಕಿಚ್ಚ ಸುದೀಪ್ ನಟನೆಯ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಮಾರ್ಕ್' ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕ್ರಿಸ್‌ಮಸ್ ದಿನದಂದು ಅದ್ದೂರಿ ಬಿಡುಗಡೆಗೆ ಎದುರು ನೋಡುತ್ತಿದೆ. ಮ್ಯಾಕ್ಸ್ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯನ್ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು, ಸತ್ಯ ಜ್ಯೋತಿ ಫಿಲ್ಮ್ಸ್ ಬೆಂಬಲವಿದೆ. ಈ ಯೋಜನೆಯು ಬಹುಭಾಷೆಗಳಲ್ಲಿ ತೆರಕಾಣಲಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಮಾರ್ಕ್ ಚಿತ್ರವು ದಿನದಿಂದ ದಿನಕ್ಕೆ ತೀವ್ರ ನಿರೀಕ್ಷೆ ಹುಟ್ಟುಹಾಕುತ್ತಿದೆ. ಮಾರ್ಕ್ ಚಿತ್ರದಲ್ಲಿ ಸಾಂಪ್ರದಾಯಿಕ ನಾಯಕಿ ಪಾತ್ರ ಇಲ್ಲ ಎಂದು ವರದಿಯಾಗಿದೆ. ಬದಲಾಗಿ, ಇದು ಹಲವಾರು ಮಹಿಳಾ ಪಾತ್ರಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಪಾತ್ರವೂ ಪ್ರಭಾವಶಾಲಿಯಾಗಿದೆ ಎಂದು ಹೇಳಲಾಗುತ್ತದೆ.
ಇತ್ತೀಚೆಗಷ್ಟೇ ನಿಶ್ವಿಕಾ ನಾಯ್ಡು ಮತ್ತು ರೋಶನಿ ಪ್ರಕಾಶ್ ಕೂಡ ಚಿತ್ರತಂಡ ಸೇರಿದ್ದಾರೆ. ಜೊತೆಗೆ ನಟ ನವೀನ್ ಚಂದ್ರ ಮತ್ತು ದೀಪ್‌ಶಿಖಾ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಟಿ ಅರ್ಚನಾ ಕೊಟ್ಟಿಗೆ ಕೂಡ ಅಧಿಕೃತವಾಗಿ ಚಿತ್ರತಂಡ ಸೇರಿದ್ದಾರೆ ಮತ್ತು ಕೆಲವು ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಕಂಟೆಂಟ್ ಆಧರಿತ ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯಕ್ಕೆ ಹೆಸರುವಾಸಿಯಾದ ಅರ್ಚನಾ, ಹೊಂದಿಸಿ ಬರೆಯಿರಿ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಜುಗಲ್ಬಂದಿ ಮತ್ತು ಫಾರೆಸ್ಟ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಕ್ ಚಿತ್ರದ ಮೂಲಕ ಮೊದಲ ಬಾರಿಗೆ ನಟ ಸುದೀಪ್ ಅವರೊಂದಿಗಿನ ತೆರೆಹಂಚಿಕೊಳ್ಳುತ್ತಿದ್ದಾರೆ. ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರಕ್ಕೆ ಅವರ ಮೊದಲ ಹೆಜ್ಜೆಯಾಗಿದೆ. ಅವರ ಪಾತ್ರದ ವಿವರಗಳು ಇನ್ನೂ ಗೌಪ್ಯವಾಗಿದ್ದರೂ, ಒಂದು ಕುತೂಹಲಕಾರಿ ಪಾತ್ರದ ಬಗ್ಗೆ ಸುಳಿವು ನೀಡುತ್ತವೆ.
ಈ ಯೋಜನೆಗೆ ಮ್ಯಾಕ್ಸ್ ಚಿತ್ರದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಒಂದಾಗಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಶೇಖರ್ ಚಂದ್ರು ಛಾಯಾಗ್ರಹಣ ನಿರ್ವಹಿಸುತ್ತಾರೆ.
Advertisement