ರಿಷಬ್ ಶೆಟ್ಟಿ ನಿರ್ದೇಶನದ 'Kantara: Chapter 1' ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

ಪ್ಯಾನ್-ಇಂಡಿಯಾ ಚಿತ್ರಗಳಿಗೆ ಹೆಸರುವಾಸಿಯಾದ ಹೊಂಬಾಳೆ ಫಿಲ್ಮ್ಸ್, ಚಿತ್ರವನ್ನು ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
Kantara Chapter 1 Poster
ಕಾಂತಾರಾ-ಚಾಪ್ಟರ್ 1 ಪೋಸ್ಟರ್
Updated on

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರದ ಬಹು ನಿರೀಕ್ಷಿತ ಸೀಕ್ವೆಲ್ 'ಕಾಂತಾರ: ಚಾಪ್ಟರ್ 1' ಅಕ್ಟೋಬರ್ 2 ರಂದು ದೇಶದಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಅಕ್ಟೋಬರ್ 1 ರಂದು ಚಿತ್ರತಂಡ ಪೇಯ್ಡ್ ಪ್ರೀಮಿಯರ್‌ಗಳನ್ನು ಆಯೋಜಿಸಿದೆ. ಶುಕ್ರವಾರ, ಕಾಂತಾರ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಕಾಂತಾರ: ಚಾಪ್ಟರ್ 1 ಟ್ರೇಲರ್ ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12.45 ಕ್ಕೆ ಅನಾವರಣಗೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಿಸಿರುವ ಕಾಂತಾರ: ಚಾಪ್ಟರ್ 1 ವೀಕ್ಷಕರನ್ನು 4ನೇ ಶತಮಾನಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತದೆ. ನಿರ್ಮಾಣ ಸಂಸ್ಥೆ ಭಾರತೀಯ ಮತ್ತು ಅಂತರರಾಷ್ಟ್ರೀಯ ತಜ್ಞರ ಸಹಾಯದಿಂದ ದೊಡ್ಡ ಪ್ರಮಾಣದ ಯುದ್ಧದ ದೃಶ್ಯವನ್ನು ರಚಿಸಿದೆ. ಈ ದೃಶ್ಯವು 500ಕ್ಕೂ ಹೆಚ್ಚು ತರಬೇತಿ ಪಡೆದ ಹೋರಾಟಗಾರರು ಮತ್ತು ಒಟ್ಟು 3,000 ಜನರನ್ನು ಒಳಗೊಂಡಿತ್ತು. ಈ ದೃಶ್ಯದ ಚಿತ್ರೀಕರಣವು ಸುಮಾರು 45 ರಿಂದ 50 ದಿನಗಳನ್ನು ತೆಗೆದುಕೊಂಡಿತು.

ಚಿತ್ರದಲ್ಲಿ ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ವಿನೇಶ್ ಬಂಗ್ಲನ್ ಅವರ ನಿರ್ಮಾಣ ವಿನ್ಯಾಸವಿದೆ.

ಚಿತ್ರತಂಡ ಈಗಾಗಲೇ ಪ್ರೈಮ್ ವಿಡಿಯೋ ಜೊತೆ 125 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿಯಾಗಿದೆ.

Kantara Chapter 1 Poster
ಬಿಡುಗಡೆಗೂ ಮುನ್ನವೇ ಕಾಂತಾರ: ಚಾಪ್ಟರ್ 1 ದಾಖಲೆ; 2,500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪೇಯ್ಡ್ ಪ್ರೀಮಿಯರ್!

ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ 7 ಭಾಷೆಗಳಲ್ಲಿ 2500ಕ್ಕೂ ಹೆಚ್ಚು ಪರದೆಗಳಲ್ಲಿ ಕಾಂತಾರ: ಚಾಪ್ಟರ್ 1 ಪೇಯ್ಡ್ ಪ್ರೀಮಿಯರ್ ಕಾಣುತ್ತಿದ್ದು, ಕನ್ನಡ ಚಿತ್ರವೊಂದು ಕಂಡ ಅತಿದೊಡ್ಡ ಪ್ರೀಮಿಯರ್ ಇದಾಗಿದೆ.

ಪ್ಯಾನ್-ಇಂಡಿಯಾ ಚಿತ್ರಗಳಿಗೆ ಹೆಸರುವಾಸಿಯಾದ ಹೊಂಬಾಳೆ ಫಿಲ್ಮ್ಸ್, ಚಿತ್ರವನ್ನು ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಹಿಂದಿ ಭಾಷೆಯಲ್ಲಿ ಎಎ ಫಿಲ್ಮ್ಸ್, ಕೇರಳದಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮೈತ್ರಿ ಮೂವಿ ಮೇಕರ್ಸ್, ಗೀತಾ ಆರ್ಟ್ಸ್, ವಾರಾಹಿ ಚಲನ ಚಿತ್ರಂ, ಥಿಂಕ್ ಸ್ಟುಡಿಯೋಸ್ ಮತ್ತು ಹಲವಾರು ವಿದೇಶಿ ಪಾಲುದಾರರು ಚಿತ್ರ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರವು ಅಕ್ಟೋಬರ್ 2 ರಂದು ಚೀನಾ ಹೊರತುಪಡಿಸಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾಂತಾರವು ಮನುಷ್ಯ, ಭೂಮಿ ಮತ್ತು ಆತ್ಮದ ಘರ್ಷಣೆಯ ಬಗ್ಗೆಯಾಗಿದ್ದರೆ, ಅದರ ಮೂಲವು ಇನ್ನಷ್ಟು ರೋಮಾಂಚಕಾರಿಯಾಗಿರುತ್ತದೆ ಎಂದು ಭರವಸೆ ನೀಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com