ಹಿರಿಯ ನಿರ್ದೇಶಕ ಎಸ್ ಮಹೇಂದರ್ ಮಹಿಳಾ ಕೇಂದ್ರಿತ ಚಿತ್ರವೊಂದಕ್ಕಾಗಿ ನಟಿ ಮೇಘಾ ಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ನಿರ್ಮಾಪಕ ಛಲವಾದಿ ಕುಮಾರ್ (ಸಂಜು ವೆಡ್ಸ್ ಗೀತಾ 2) ಈ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ. ಈ ಚಿತ್ರವು ನಿಜ ಜೀವನದ ಘಟನೆಗಳನ್ನು ಆಧರಿಸಿದ ಆಕರ್ಷಕ ಮಹಿಳಾ ಕೇಂದ್ರಿತ ಕಥೆಯಾಗಿದೆ.
ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ, ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಈಗಾಗಲೇ ಅವರು ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಮತ್ತು ಆಫ್ಟರ್ ಆಪರೇಷನ್ ಲಂಡನ್ ಕೆಫೆ ಚಿತ್ರಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅವರು ಸದ್ಯ ಪ್ರಜ್ವಲ್ ದೇವರಾಜ್ ಅವರೊಂದಿಗೆ ಚೀತಾ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ, ನಟ, ನಿರ್ದೇಶಕ ಮತ್ತು ನಿರ್ಮಾಪಕರು ಹಲವಾರು ಚರ್ಚೆಗಳನ್ನು ನಡೆಸಿದ್ದಾರೆ. ಮಹೇಂದರ್ ಈ ಕಂಟೆಂಟ್ ಬಗ್ಗೆ ಆಕರ್ಷಿತರಾಗಿದ್ದು, ತೆರೆಗೆ ತರಲು ಉತ್ಸುಕರಾಗಿದ್ದಾರೆ. ಕುಟುಂಬ ಆಧಾರಿತ ಮತ್ತು ಮಹಿಳಾ ಕೇಂದ್ರಿತ ಕಥೆಗಳಿಗೆ ಹೆಸರುವಾಸಿಯಾದ ನಿರ್ದೇಶಕರು, ನಿರೂಪಣೆಯನ್ನು ಆಕರ್ಷಕವಾಗಿ ಇರಿಸಿಕೊಂಡು ಸಾಮಾಜಿಕ ವಾಸ್ತವಗಳನ್ನು ಎತ್ತಿ ತೋರಿಸುವ ಸ್ಕ್ರಿಪ್ಟ್ ಅನ್ನು ರೂಪಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕವನ್ನು ಮೀರಿದ ಪ್ರೇಕ್ಷಕರನ್ನು ತಲುಪಲು ತಂಡವು ಬಹುಭಾಷೆಯಲ್ಲಿ ಚಿತ್ರ ಬಿಡುಗಡೆಗೆ ಯೋಜಿಸುತ್ತಿದೆ. ಛಾಯಾಗ್ರಾಹಕ ಕರುಣಾಕರ್ ಈ ಚಿತ್ರಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದ್ದು, ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಲಿದ್ದಾರೆ ಎನ್ನಲಾಗಿದೆ.
ಚಿತ್ರದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
Advertisement