ತೆಲುಗು ಪ್ರೇಕ್ಷಕರಿಂದ ಬಹಿಷ್ಕಾರ ಬೆದರಿಕೆ; ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1'ಗೆ ಪವನ್ ಕಲ್ಯಾಣ್ ಬೆಂಬಲ

ಸಿನಿಮಾ, ಸಂಗೀತ, ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಭಾಷೆ, ಪ್ರದೇಶ, ಜಾತಿ ಅಥವಾ ಧರ್ಮದ ಮಿತಿಗಳಿಲ್ಲ. ಎಲ್ಲ ವರ್ಗದ ಜನರನ್ನು ರಂಜಿಸುವುದು ಮತ್ತು ಕನೆಕ್ಟ್ ಆಗುವುದು ಅವುಗಳ ಮೂಲ ಉದ್ದೇಶವಾಗಿದೆ.
Pawan Kalyan
ಪವನ್ ಕಲ್ಯಾಣ್
Updated on

ನವದೆಹಲಿ: ಸೆಪ್ಟೆಂಬರ್ 25 ರಂದು ಬಿಡುಗಡೆಯಾದ ಪವನ್ ಕಲ್ಯಾಣ್ ಅವರ 'ದೆ ಕಾಲ್ ಹಿಮ್ ಒಜಿ' ಚಿತ್ರವು ಕರ್ನಾಟಕದಲ್ಲಿ ಟಿಕೆಟ್ ಬೆಲೆ ಏರಿಕೆ ಮತ್ತು ಒಂದು ನಿರ್ದಿಷ್ಟ ಗುಂಪಿನ ಜನರಿಂದ ವಿರೋಧ ಎದುರಿಸಿತು. ಇದಕ್ಕೆ ಪ್ರತಿಯಾಗಿ, ತೆಲುಗು ಪ್ರೇಕ್ಷಕರು ಆಂಧ್ರ ಪ್ರದೇಶದಲ್ಲಿ ಕನ್ನಡ ಚಿತ್ರ ರಿಷಬ್ ಶೆಟ್ಟಿ ಅವರ 'ಕಾಂತಾರ: ಚಾಪ್ಟರ್ 1' ಅನ್ನು ವಿರೋಧಿಸುತ್ತಿದ್ದಾರೆ. ಆದಾಗ್ಯೂ, ತೆಲುಗು ಸೂಪರ್‌ಸ್ಟಾರ್ ಪವನ್ ಕಲ್ಯಾಣ್, ಸೇಡಿನ ಹಾದಿಯಲ್ಲಿ ನಡೆಯಲು ಬಯಸುವುದಿಲ್ಲ ಎಂದಿದ್ದಾರೆ.

'ಸಿನಿಮಾ, ಸಂಗೀತ, ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಭಾಷೆ, ಪ್ರದೇಶ, ಜಾತಿ ಅಥವಾ ಧರ್ಮದ ಮಿತಿಗಳಿಲ್ಲ. ಎಲ್ಲ ವರ್ಗದ ಜನರನ್ನು ರಂಜಿಸುವುದು ಮತ್ತು ಕನೆಕ್ಟ್ ಆಗುವುದು ಅವುಗಳ ಮೂಲ ಉದ್ದೇಶವಾಗಿದೆ. ವೈಯಕ್ತಿಕ ಹಿತಾಸಕ್ತಿಗಳಿಂದ ಕೆಲವು ವ್ಯಕ್ತಿಗಳು ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ OG ಪ್ರದರ್ಶನ ತಡೆಯಲು ಪ್ರಯತ್ನಿಸಿರುವುದು ದುರದೃಷ್ಟಕರ. ಈ ಹಿಂದೆಯೂ ಕೆಲವು ತೆಲುಗು ಚಿತ್ರಗಳು ಇದೇ ರೀತಿಯ ಅಡೆತಡೆಗಳನ್ನು ಎದುರಿಸಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ, ಕಾಂತಾರ ಚಿತ್ರವನ್ನು ನಮ್ಮ ತೆಲುಗು ರಾಜ್ಯಗಳಲ್ಲಿ ನಿರ್ಬಂಧಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಈ ಚಿಂತನೆಯನ್ನು ಬೆಂಬಲಿಸುವುದಿಲ್ಲ' ಎಂದು ಹೇಳಿದರು.

'ಕಲೆ ಮತ್ತು ಸಿನಿಮಾ ಸಂತೋಷವನ್ನು ಹರಡಬೇಕು, ಸಂಸ್ಕೃತಿಗಳನ್ನು ಸೇತುವೆ ಮಾಡಬೇಕು ಮತ್ತು ಜನರನ್ನು ಬೇರ್ಪಡಿಸಬಾರದು, ಒಟ್ಟಿಗೆ ತರಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತಾವು ಇಷ್ಟಪಡುವ ಸಿನಿಮಾ ನೋಡುವ ಹಕ್ಕಿದೆ. ನಿಮಗೆ ಒಂದು ಸಿನಿಮಾ ಇಷ್ಟವಾಗದಿದ್ದರೆ, ನೀವು ಅದನ್ನು ನೋಡದಿರಲು ಆಯ್ಕೆ ಮಾಡಬಹುದು. ಆದರೆ, ವೈಯಕ್ತಿಕ ದ್ವೇಷ ಅಥವಾ ಅಜೆಂಡಾಗಳನ್ನು ಬಳಸಿಕೊಂಡು ಸಿನಿಮಾಗಳನ್ನು ಗುರಿಯಾಗಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಇಂದು, ಭಾರತೀಯ ಸಿನಿಮಾವನ್ನು ಪ್ರಪಂಚದಾದ್ಯಂತ ಎಲ್ಲ ಭಾಷೆಗಳಲ್ಲಿ ಆಚರಿಸಲಾಗುತ್ತಿದೆ. ಇಂತಹ ಸಮಯದಲ್ಲಿ, ಕಲೆಯನ್ನು ಪ್ರಾದೇಶಿಕ ಮಿತಿಯೊಳಗೆ ಸೀಮಿತಗೊಳಿಸುವ ಯಾವುದೇ ಪ್ರಯತ್ನವನ್ನು ಬಲವಾಗಿ ತಿರಸ್ಕರಿಸಬೇಕು. ಒಳ್ಳೆಯ ಸಿನಿಮಾಗಳು ಎಲ್ಲಿಂದ ಬಂದರೂ, ಅವುಗಳನ್ನು ಬೆಂಬಲಿಸೋಣ' ಎಂದು ಪವನ್ ಕಲ್ಯಾಣ್ ಹೇಳಿದರು.

Pawan Kalyan
Kantara: Chapter 1: ತೆಲುಗು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ರಿಷಭ್ ಶೆಟ್ಟಿ ಮಾತು; ಟೀಕೆ, #BoycottKantaraChapter1 ಟ್ರೆಂಡ್

ಬೆಂಗಳೂರಿನಲ್ಲಿ OG ಚಿತ್ರಕ್ಕೆ ಅಡೆತಡೆ

ಬೆಂಗಳೂರು ಪವನ್ ಕಲ್ಯಾಣ್ ಅಭಿಮಾನಿಗಳ ಸಂಘವು ಬಹುನಿರೀಕ್ಷಿತ ಒಜಿ ಚಿತ್ರದ ಆರಂಭಿಕ ಬಿಡುಗಡೆಯನ್ನು ಆಚರಿಸಲು ಮಡಿವಾಳದ ಸಂಧ್ಯಾ ಥಿಯೇಟರ್ ಹೊರಗೆ ವೇದಿಕೆ ಮತ್ತು ಡಿಜೆ ವ್ಯವಸ್ಥೆಯನ್ನು ಏರ್ಪಡಿಸಿತ್ತು.

ಮೂಲಗಳ ಪ್ರಕಾರ, ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ಕಾರ್ಯಕ್ರಮವನ್ನು ನಿಲ್ಲಿಸಿದರು. ವೇದಿಕೆಯನ್ನು ತೆರವುಗೊಳಿಸಿದರು ಮತ್ತು ಯಾವುದೇ ಅಡಚಣೆಯಾಗದಂತೆ ಧ್ವನಿವರ್ಧಕಗಳನ್ನು ಸಹ ವಶಪಡಿಸಿಕೊಂಡರು.

ಘಟನೆ ನಂತರ ಮಡಿವಾಳ ಪೊಲೀಸರು ಕಾರ್ಯಕ್ರಮದ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಪವನ್ ಕಲ್ಯಾಣ್ ಅಭಿಮಾನಿಗಳು ಕರ್ನಾಟಕದ ಹಲವು ಭಾಗಗಳಲ್ಲಿ ಬೀದಿಗಳಲ್ಲಿ ಜಮಾಯಿಸಿ ಡಿಜೆಗಳು, ನೃತ್ಯಗಳು ಮತ್ತು ಪಟಾಕಿಗಳೊಂದಿಗೆ ಆಚರಿಸಿದರು. ಪ್ರತಿಭಟನಾಕಾರರು ಸ್ಥಳಕ್ಕೆ ಪ್ರವೇಶಿಸಿ, ಧ್ವನಿ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ, ಡಿಜೆ ಉಪಕರಣಗಳು ಮತ್ತು ಕ್ಯಾಮೆರಾ ಟ್ರೈಪಾಡ್‌ಗಳನ್ನು ಮುರಿದು ಹಾಕಿದ್ದು ಕಂಡುಬಂದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com