ಮುಟ್ಟಿನ ಬಗ್ಗೆ ಮಾತನಾಡಿ ತೀವ್ರ ಟೀಕೆಗೊಳಗಾದ ನಟಿ-ಡಾಕ್ಟರ್ ಶ್ರೀಲೀಲಾ! ಹೇಳಿದ್ದೇನು?

ಕೆಲವೊಮ್ಮೆ ದೈಹಿಕ ಮಿತಿಗಳನ್ನು ಮೀರಬೇಕು ಎಂದು ಹೇಳಿರುವುದು ಟೀಕೆಗಳಿಗೆ ಆಸ್ಪದ ನೀಡಿದೆ.
Sreeleela
ಶ್ರೀಲೀಲಾ
Updated on

ನಟಿ ಶ್ರೀಲೀಲಾ ಇತ್ತೀಚಿಗೆ ಪಿರಿಯಡ್ಸ್ ( Periods) ಬಗ್ಗೆ ಹೇಳಿಕೆ ನೀಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಏನಾಯಿತು? ಇತ್ತೀಚೆಗೆ ಮುಂಬೈನ ಡಿವೈ ಪಾಟೀಲ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿ ಪಡೆದ ಶ್ರೀಲೀಲಾ, ಉಸ್ತಾದ್ ಭಗತ್ ಸಿಂಗ್ ಸಕ್ಸಸ್ ಪಾರ್ಟಿಯಲ್ಲಿ ಮಾತನಾಡುವಾಗ ಕೆಲವೊಮ್ಮೆ ದೈಹಿಕ ಮಿತಿಗಳನ್ನು ಮೀರಬೇಕು ಎಂದು ಹೇಳಿರುವುದು ಟೀಕೆಗಳಿಗೆ ಆಸ್ಪದ ನೀಡಿದೆ.

ಅಷ್ಟಕ್ಕೊ ಶ್ರೀಲೀಲಾ ಏನು ಹೇಳಿದ್ರೆ ಅಂದ್ರೆ, ನನ್ನ ಎಲ್ಲಾ ಹಾಡುಗಳು, ಅವುಗಳಲ್ಲಿ ಹೆಚ್ಚಿನವು ಮೆಚ್ಚುಗೆ ಪಡೆದಿವೆ ಎಂದು ಹೇಳಬಲ್ಲೆ. ನಾನು ಪಿರಿಯಡ್ಸ್ ನಲ್ಲಿ ಇದ್ದಾಗಲೂ ಶೂಟ್ ನಲ್ಲಿ ಪಾಲ್ಗೊಂಡಿದ್ದೇನೆ. ಹೀಗಾಗಿ ಅದೊಂದು ನೆಪವಾಗಿರಬಾರದು (excuse)ನಾವು ಸಮಾನತೆ ಬಗ್ಗೆ ಮಾತನಾಡುವಾಗ ನಾವು ಶಾರೀರಿಕ ಅಡೆತಡೆಗಳನ್ನು ಮೀರಿ ಹೋಗಬೇಕು ಎಂದು ನನಗೆ ಅನಿಸುತ್ತದೆ. ಆದ್ದರಿಂದ ಮಾನಸಿಕ, ಶಾರೀರಿಕ, ಇದೆಲ್ಲವೂ ಕಾರಣವೇನೂ ಅಲ್ಲ ಎಂದು ಹೇಳಿದ್ದಾರೆ.

ನೆಟ್ಟಿಗರ ಕಾಮೆಂಟ್ ಗಳು:

ಶ್ರೀಲೀಲಾ ಹೀಗೆ ಹೇಳುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗಳು ಕೇಳಿಬರುತ್ತಿವೆ. ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಮುಟ್ಟಿನ ಅನುಭವಗಳು ವ್ಯಕ್ತಿಯಿಂದ ವ್ಯಕ್ತಿಗೆ ಗಮನಾರ್ಹವಾಗಿ ಭಿನ್ನವಾಗಿರುತ್ತವೆ ಎಂದು ಹೇಳುತ್ತಿದ್ದಾರೆ. ನೀವು ದೈಹಿಕ ಮೀತಿ ಮೀರಬೇಕು ಎಂದು ಹೇಳಿದರೆ ಇನ್ನೊಬ್ಬರು ಕೂಡಾ ಇದೇ ರೀತಿ ಮಾಡಬೇಕು ಎಂಬರ್ಥವಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ನನಗೂ ಸೇರಿದಂತೆ ಇತ್ತರರಿಗೂ ಪಿರಿಯಡ್ಸ್ ನೋವು ಹೆಚ್ಚಾಗಿರುತ್ತದೆ. ಇಂತಹ ನೋವಿನಲ್ಲೂ ಕೆಲಸಕ್ಕೆ ಹೋಗಬೇಕು. ಮಕ್ಕಳನ್ನು ಬೆಳೆಸಬೇಕು. ಹೀಗಾಗಿ ನಮಗೆ Excuse ಕೊಡುವುದರಲ್ಲಿ ಏನು? ಎಂದಿದ್ದಾರೆ. ಟೀಕೆಗಳಿಗೆ ಶ್ರೀಲೀಲಾ ಇಲ್ಲಿಯವರೆಗೂ ಯಾವುದೇ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ನೀಡಿಲ್ಲ.

Sreeleela
Video: 'ಶ್ರೀಲೀಲಾ ಫೋನ್ ಕೊಟ್ಟಿದ್ರು.. ಹಿಡ್ಕೊಂಡಿದ್ದೆ ಅಷ್ಟೇ.. ಅಲ್ಲೇನೂ ಆಗಿಲ್ಲ.. ನಾನೇನೂ ಮಾಡಿಲ್ಲ..': ನಟನ ಸ್ಪಷ್ಟನೆ

ಕಿಸ್ (2019) ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀಲೀಲಾ ತೆಲುಗಿನ ಪುಷ್ಪ-2 ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದರು. ಅದರಲ್ಲಿ ಅವರು ಅಲ್ಲು ಅರ್ಜುನ್ ಜೊತೆಗೆ ಸಾಂಗ್ ವೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ಅನುರಾಗ್ ಬಸು ಅವರ ಮುಂದಿನ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಧನುಶ್ ಜೊತೆಗೆ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com