ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಯ 'ಪಟಾಕಿ ಕಿಚನ್' ಉದ್ಘಾಟಿಸಿದ ಮ್ಯೂಟೆಂಟ್ ರಘು! ಏನಿದರ ವಿಶೇಷತೆ? Video ನೋಡಿ..

ರಕ್ಷಿತಾ ಶೆಟ್ಟಿ ಅವರು ಕಾಡಿನ ಮಧ್ಯೆ ಪಟಾಕಿ ಕಿಚನ್ ಎಂಬ ಹೆಸರಿನ ಅಡುಗೆಮನೆ ಅಥವಾ ಗುಡಿಸಲನ್ನು ನಿರ್ಮಿಸಿದ್ದಾರೆ. ಇಲ್ಲಿ ಅವರು ಪ್ರಕೃತಿ ಸ್ನೇಹಿ ಅಡುಗೆ ವಿಡಿಯೋಗಳನ್ನು ತಯಾರಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದಾರೆ.
Mutant Raghu and Rakshita shetty
ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ
Updated on

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ನಾಡಿನಾದ್ಯಂತ ಮನೆ ಮಾತಾಗಿರುವ ರಕ್ಷಿತಾ ಶೆಟ್ಟಿ, ಇದೀಗ ಹೊಸ ಉದ್ಯಮವೊಂದನ್ನು ಆರಂಭಿಸಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಕಾಡಿನ ಮಧ್ಯೆ ಪಟಾಕಿ ಕಿಚನ್ ಎಂಬ ಹೆಸರಿನ ಅಡುಗೆಮನೆ ಅಥವಾ ಗುಡಿಸಲನ್ನು ನಿರ್ಮಿಸಿದ್ದಾರೆ. ಇಲ್ಲಿ ಅವರು ಪ್ರಕೃತಿ ಸ್ನೇಹಿ ಅಡುಗೆ ವಿಡಿಯೋಗಳನ್ನು ತಯಾರಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ಇದು ರಕ್ಷಿತಾ ಶೆಟ್ಟಿ ಅವರು ಕಾಡಿನ ಮಧ್ಯೆ ನಿರ್ಮಿಸಿರುವ ಸುಂದರವಾದ ಅಡುಗೆ ಮನೆಯಾಗಿದ್ದು, ಇದನ್ನು ಅವರು ತಮ್ಮ ಯೂಟ್ಯೂಬ್ ಕಂಟೆಂಟ್ ಸೃಜನೆಗಾಗಿ ಬಳಸಲಿದ್ದಾರೆ. ಇದನ್ನು ಸಂಪೂರ್ಣವಾಗಿ ಹಳ್ಳಿ ಶೈಲಿಯಲ್ಲಿ ನಿರ್ಮಾಣವಾಗಿದ್ದು, ನೈಸರ್ಗಿಕ ಪರಿಸರದಲ್ಲಿ ಸಾಂಪ್ರದಾಯಿಕ ಅಡುಗೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಮತ್ತೊಂದು ವಿಶೇಷ ಏನೆಂದರೆ, ಈ ಪುಟ್ಟ ಪಟಾಕಿ ಕಿಚನ್ ನನ್ನು ರಕ್ಷಿತಾ ಶೆಟ್ಟಿ ಅವರ ಆತ್ಮೀಯ ಅಣ್ಣನಂತಿರುವ ಮ್ಯೂಟೆಂಟ್ ರಘು (Mutant Raghu) ಉದ್ಘಾಟಿಸಿದ್ದಾರೆ. ಈ ವೇಳೆ ಪಟಾಕಿ ರಕ್ಷಿತಾ ಎಂಬ ಬೋರ್ಡ್ ಸಣ್ಣದಾಗಿದೆ ಎಂದು ರಘು ಕಿಚಾಯಿಸಿದ್ದಾರೆ. ಇದನ್ನು ಇನ್ನೂ ದೊಡ್ಡದಾಗಿ ಹಾಕಬೇಕು ಎಂಬ ಸಲಹೆಯನ್ನು ರಕ್ಷಿತಾ ನಗುನಗುತಲೇ ಒಪ್ಪಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಮ್ಯೂಟೆಂಟ್ ರಘು ನಡುವಿನ ಅಣ್ಣ-ತಂಗಿ ಸಂಬಂಧ ನಾಡಿನ ಗಮನ ಸೆಳೆದಿತ್ತು. ಅದು ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೂ ಮುಂದುವರೆದಿದೆ.

ಈ ಹಿಂದೆ ರಘು ಅವರ ಮನೆಗೆ ತೆರಳಿ ರಕ್ಷಿತಾ ಅಡುಗೆ ಮಾಡಿದ್ದರು. ಆ ವಿಡಿಯೋ ರಘು ಅವರ ಹೊಸ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿತ್ತು. ವಿಶೇಷವೆಂದರೆ ಆ ವಿಡಿಯೋ ಅಪ್‌ಲೋಡ್ ಆದ ಕೇವಲ ಒಂದೇ ದಿನದಲ್ಲಿ ಚಾನೆಲ್ ಮಾನಿಟೈಸೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ ದಾಖಲೆ ಬರೆದಿತ್ತು.ಇದೀಗ ರಕ್ಷಿತಾ ಶೆಟ್ಟಿ ಅವರ ಹೊಸ ಉದ್ಯಮಕ್ಕೆ ಮ್ಯೂಟೆಂಟ್ ರಘು ಚಾಲನೆ ನೀಡಿದ್ದು, ಇನ್ಮುಂದೆ ಇಲ್ಲಿಂದಲೇ ವಿಡಿಯೋಗಳು ಹೊರಗೆ ಬರಲಿವೆ.

Mutant Raghu and Rakshita shetty
ಡಾಗ್ ಸತೀಶ್ ಸ್ನೇಹ ಬಿಡು: BiggBoss ಮಾಜಿ ಸ್ಪರ್ಧಿ ರಜತ್ ವಿರುದ್ಧ ಎಫ್ಐಆರ್ ದಾಖಲು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com