

ಬೆಂಗಳೂರು: 'ಬಿಗ್ ಬಾಸ್' ಮಾಜಿ ಸ್ಪರ್ಧಿ ರಜತ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಜತ್ ವಿರುದ್ಧ ಗಿರೀಶ್ ಕುಮಾರ್ ಎಂಬುವರು ಬೆಂಗಳೂರಿನ ಕೆಆರ್ ಪುರಂ ಠಾಣೆಯಲ್ಲಿ ದೂರು ನೀಡಿದ್ದರು. ಬೆದರಿಕೆ ಮತ್ತು ನಿಂದನೆ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ. ಮೊಬೈಲ್ ಕರೆಯ ಮೂಲಕ ಬೆದರಿಕೆ ಹಾಕಿರುವುದಾಗಿ ಗಿರೀಶ್ ಕುಮಾರ್ ಆರೋಪಿಸಿದ್ದಾರೆ. ಡಾಗ್ ಸತೀಶ್ ಸ್ನೇಹ ಬಿಡಬೇಕೆಂದು ರಜತ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮೊಬೈಲ್ ಗೆ ದೂರುದಾರರ ಕಾರಿನ ಫೋಟೋ ಕಳುಹಿಸಿ ಮೆಸೇಜ್ ಮೂಲಕ ಬೆದರಿಕೆ ಹಾಕಲಾಗಿದೆ. ನಾನು ರಜತ್ ಕಾಲ್ ಮಾಡುತ್ತಿದ್ದೇನೆ. ವಾಪಸ್ ಕಾಲ್ ಮಾಡ್ತೀರಾ? ಇಲ್ಲ ನಾವೇ ಒಳಗೆ ನುಗ್ಗಬೇಕಾ ಎಂದು ಮೆಸೇಜ್ ಹಾಕಿದ್ದಾರೆ. ಕಾನ್ಫರೆನ್ಸ್ ಕಾಲ್ ನಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರು ನೀಡಲಾಗಿದೆ. ಗಿರೀಶ್ ಕುಮಾರ್ ದೂರಿನ ಮೇರೆಗೆ ರಜತ್ ಮತ್ತು ಕಿರಣ್ ವಿರುದ್ಧ ದೂರು ದಾಖಲಿಸಲಾಗಿದೆ.
Advertisement