399 ರೂಪಾಯಿಗೆ ಅರೆ ನಗ್ನ ವಿಡಿಯೋ, ಪೋಟೋಗಳು: ತೆಲುಗು ಆಂಕರ್ ವಿಷ್ಣು ಪ್ರಿಯಾ ಮುಖವಾಡ ಬಯಲು!

ಟಾಲಿವುಡ್ ಆಂಕರ್ ವಿಷ್ಣು ಪ್ರಿಯಾ ಹೆಸರು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂದು ಆಂಕರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
Vishnupriya
ವಿಷ್ಣುಪ್ರಿಯಾ
Updated on

ಟಾಲಿವುಡ್ ಆಂಕರ್ ವಿಷ್ಣು ಪ್ರಿಯಾ ಹೆಸರು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂದು ಆಂಕರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ವಿಜಯವಾಡ ಸೈಬರ್ ಕ್ರೈಮ್ ಪೊಲೀಸರು ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುವ ಅಸಭ್ಯ ಫೋಟೋಗಳು ಮತ್ತು ಅರೆನಗ್ನ ವೀಡಿಯೊಗಳ ವಿಷಯ ಪ್ರಸ್ತುತ ಟಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ.

ಸದ್ಯ ವಿಷ್ಣು ಪ್ರಿಯಾಗೆ ಸಂಬಂಧಿಸಿದ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಾಧ್ಯಮಗಳು ಈ ವಿಷಯದ ಬಗ್ಗೆ ಅವರನ್ನು ಪ್ರಶ್ನಿಸಲು ಪ್ರಯತ್ನಿಸಿದರು. ಈ ವೇಳೆ ಆಕೆ ತಮ್ಮ ಮುಖವನ್ನು ಮುಚ್ಚಿಕೊಂಡು ಅಲ್ಲಿಂದ ಹೊರಟು ಹೋದರು. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Vishnupriya
ನನ್ನ ಬೋಲ್ಡ್ ಬಿಕಿನಿ ನೋಡಿ Ranveer Singh ಗಾಬರಿಗೊಂಡಿದ್ದರು, ತುಂಬಾ ನಾಚಿಕೆ ಸ್ವಾಭಾವ: ನಟಿ ಸೋನಾಲಿ, Video!

ಇನ್‌ಸ್ಟಾಗ್ರಾಮ್‌ನಲ್ಲಿ ಚಂದಾದಾರಿಕೆ ಎಂಬ ಆಯ್ಕೆಯನ್ನು ಕೆಲವು ವರ್ಷಗಳ ಹಿಂದೆ ಪರಿಚಯಿಸಲಾಯಿತು. ಹಲವು ನಾಯಕಿಯರು, ಹಲವು ಮಹಿಳಾ ಪ್ರಭಾವಿಗಳು... ಹಾಟ್ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಲು ನೀವು ಬಯಸಿದರೆ, ನೀವು ರೂ. 399 ಪಾವತಿಸಬೇಕಾಗುತ್ತದೆ. ಇತ್ತೀಚೆಗೆ, ವಿಷ್ಣುಪ್ರಿಯಾ ತಮ್ಮ ಚಂದಾದಾರರಿಗೆ ತುಂಬಾ ಹಾಟ್ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬ ಕಾಮೆಂಟ್‌ಗಳು ಬಂದಿವೆ. ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಕುತೂಹಲಕಾರಿ ವಿಷಯವೆಂದರೆ, ಈ ವಿವಾದವು ಅವರ ಚಂದಾದಾರರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಕೇವಲ ಎರಡು ದಿನಗಳ ಹಿಂದೆ ಸುಮಾರು 1,800 ಚಂದಾದಾರರನ್ನು ಹೊಂದಿದ್ದು ಪ್ರಕರಣದ ನಂತರ ಆ ಸಂಖ್ಯೆ ಸುಮಾರು 5,000ಕ್ಕೆ ಏರಿಕೆಯಾಗಿದ್ದು ಇದು ಅವರ ಚಂದಾದಾರರ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com