

ಬೆಂಗಳೂರು: ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡ ನಟ ಮಂಜು ಪಾವಗಡ ಅವರು ಸಿನಿಮಾ, ಧಾರಾವಾಹಿಗಳಲ್ಲೂ ನಟಿಸಿದ್ದು, ‘ಬಿಗ್ ಬಾಸ್ ಕನ್ನಡ ಸೀಸನ್ 8’ ವಿನ್ನರ್ ಕೂಡಾ ಆಗಿದ್ದಾರೆ.
2025ರಲ್ಲಿ ಮದುವೆಯಾಗಿ ಇದೀಗ ಗಂಡು ಮಗುವಿನ ತಂದೆಯಾಗಿದ್ದಾರೆ. ಮಗುವಿಗೆ ಈಗಾಗಲೇ ಏಳು ತಿಂಗಳು ತುಂಬಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇಷ್ಟು ದಿನ ಖುಷಿ ಸುದ್ದಿಯನ್ನು ಯಾಕೆ ರಿವೀಲ್ ಮಾಡಿರಲಿಲ್ಲ ಎಂಬ ವಿಷಯವನ್ನು ಕೂಡ ಅವರು ಹೇಳಿಕೊಂಡಿದ್ದಾರೆ.
ಗಂಡು ಮಗು ಜನಿಸಿ ಏಳು ತಿಂಗಳಾಗಿದೆ. ಹೇಳೋಕೆ ಸಮಯ ಸಿಕ್ಕಿರಲಿಲ್ಲ, ಹಾಗಾಗಿ ಹೇಳಿಲ್ಲ. ಆತ ತುಂಬಾ ತರ್ಲೆ ಮಾಡ್ತಾನೆ ಎಂದು ಮಂಜು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಈಗ ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಾ ಇದ್ದಾರೆ.
‘ಅಂತರಪಟ’ ಧಾರಾವಾಹಿಯಲ್ಲಿ ಮಂಜು ನೆಗೆಟಿವ್ ರೋಲ್ ಮಾಡಿದ್ದರು. ಈಗ ಅವರು ‘ಜೆರಾಕ್ಸ್’ ಹೆಸರಿನ ಸರಣಿಯಲ್ಲಿ ನಟಿಸಿದ್ದಾರೆ. ‘ಬ್ಲಿಂಕ್’ ಖ್ಯಾತಿಯ ಶ್ರೀನಿಧಿ ಬೆಂಗಳೂರು ಈ ಸರಣಿಗೆ ನಿರ್ದೇಶನ ಮಾಡಿದ್ದಾರೆ.
Advertisement