ಕೆವಿಎನ್-ಪವನ್ ಒಡೆಯರ್-ಶಿವಣ್ಣ ಕಾಂಬಿನೇಷನ್ ಸಿನಿಮಾದ ಟೈಟಲ್ ರಿವೀಲ್!

ವೆಂಕಟ್ ಕೆ ನಾರಾಯಣ್, ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬೋದ ಈ ಸಿನಿಮಾಗೆ ಬೇಲ್ ಎಂಬ ಟೈಟಲ್ ಇಡಲಾಗಿದೆ. ಮಳೆ‌ಯಲ್ಲಿ ಛತ್ರಿ ಹಿಡಿದು ಶಿವಣ್ಣ‌‌ ನಿಂತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.
pawan odeyar, ShivarajKumar
ಪವನ್ ಒಡೆಯರ್, ಶಿವರಾಜ್ ಕುಮಾರ್
Updated on

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ನಿರ್ದೇಶಕ ಪವನ್‌ ಒಡೆಯರ್‌ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಬಹು ನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ನ್ನು ಅನಾವರಣ ಮಾಡಲಾಗಿದೆ.

ವೆಂಕಟ್ ಕೆ ನಾರಾಯಣ್, ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬೋದ ಈ ಸಿನಿಮಾಗೆ ಬೇಲ್ ಎಂಬ ಟೈಟಲ್ ಇಡಲಾಗಿದೆ. ಮಳೆ‌ಯಲ್ಲಿ ಛತ್ರಿ ಹಿಡಿದು ಶಿವಣ್ಣ‌‌ ನಿಂತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ಈ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ನ್ನು ವೆಂಕಟ್ ಕೆ ನಾರಾಯಣ್ ಅವರು ತಮ್ಮದೇ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ರೇಮೋ ಸೇರಿದಂತೆ ಅನೇಕ‌ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಪವನ್ ಶಿವಣ್ಣಗೆ ಆಕ್ಷನ್ ಕಟ್ ಹೇಳಬೇಕೆಂಬ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಪವನ್ ಒಡೆಯರ್, "ಇದು ನನಗೂ ಮತ್ತು ನಿರ್ಮಾಣ ಸಂಸ್ಥೆಗೂ ಅತ್ಯಂತ ವಿಶೇಷವಾದ ಸಿನಿಮಾವಾಗಲಿದೆ. ನಿಮಗಾಗಿ ನಾವು ಬಹಳಷ್ಟು ಕಾಯ್ದಿರಿಸಿದ್ದೇವೆ ಮತ್ತು ಶೀಘ್ರದಲ್ಲೇ ಟೀಸರ್ ಅನ್ನು ಘೋಷಿಸುತ್ತೇವೆ. ಶಿವಣ್ಣ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸು ನನಸಾಗಿದೆ. ಅವರು ದಶಕಗಳಿಂದ ಐಕಾನ್ ಆಗಿದ್ದಾರೆ ಮತ್ತು ಹಿಂದೆಂದೂ ಮಾಡದ ರೀತಿಯಲ್ಲಿ ಅವರನ್ನು ಪ್ರಸ್ತುತಪಡಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ" ಎಂದರು.

pawan odeyar, ShivarajKumar
ನಟ ಶಿವರಾಜ್ ಕುಮಾರ್ ಮದುವೆ ಆಗುವ ಆಸೆ... ಗಾಸಿಪ್ ಗೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಸುಧಾರಾಣಿ; Video

'ಬೇಲ್' ನಮಗೆ ಬಹಳ ವಿಶೇಷವಾದ ಯೋಜನೆಯಾಗಿದ್ದು, ಪ್ರೇಕ್ಷಕರು ಇಲ್ಲಿಯವರೆಗೆ ನೋಡಿರದ ಹೊಸ ದೃಷ್ಟಿಕೋನದಲ್ಲಿ ಶಿವಣ್ಣ ಅವರನ್ನು ಪ್ರಸ್ತುತಪಡಿಸಲು ನಾವು ವಿಶೇಷವಾಗಿ ಎದುರು ನೋಡುತ್ತಿದ್ದೇವೆ' ವೆಂಕಟ್ ಕೆ‌ ಕೊನಂಕಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com