Ramayana Trailer: ಕಲರ್ ಫುಲ್ ಸ್ಯಾರಿ, ಓಪನ್ ಹೇರ್, ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಭಾರಿ ಟ್ರೋಲ್!

ಇದೀಗ ಆಧುನಿಕ ಯುಗದ ಕೈಕೇಯಿ ಪಾತ್ರದ ಬಗ್ಗೆಯೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಲಾರಾ ದತ್ತಾ ಅವರು ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್ ಭಾರೀ ಟ್ರೋಲ್ ಆಗಿದೆ.
Lara dutta
ಲಾರಾ ದತ್ತಾ
Updated on

ದಂಗಲ್ ನಿರ್ದೇಶಕ ನಿತೇಶ್ ತಿವಾರಿ ಅವರ ರಾಮಾಯಣ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಧೂಳ್ಳೆಬ್ಬಿಸುತ್ತಿರುವಂತೆಯೇ ನಾನಾ ರೀತಿಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾವಣನ ಪಾತ್ರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ ರಣಬೀರ್ ಕಪೂರ್ ಅವರ ರಾಮನ ಪಾತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಮಾಡಿದ್ದು ಕೆಟ್ಟ ನಿರ್ಧಾರ ಎಂದು ಹಲವಾರು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

ಇದೀಗ ಆಧುನಿಕ ಯುಗದ ಕೈಕೇಯಿ ಪಾತ್ರದ ಬಗ್ಗೆಯೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಲಾರಾ ದತ್ತಾ ಅವರು ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್ ಭಾರೀ ಟ್ರೋಲ್ ಆಗಿದೆ. ಇದೇ ಕಾರಣಕ್ಕೆ ಗೂಗಲ್ ಟ್ರೆಂಡ್ಸ್‌ನಲ್ಲಿ ಲಾರಾ ದತ್ತಾ ಟ್ರೆಂಡಿಂಗ್‌ನಲ್ಲಿದ್ದಾರೆ.

ರಾಮಾಯಣ' ಟ್ರೈಲರ್‌ನಲ್ಲಿ ಲಾರಾ ದತ್ತಾ ಹಸಿರು ಬಣ್ಣದ ಡಿಸೈನರ್ ಬ್ಲೌಸ್, ಚಿನ್ನದ ಅಂಚು ಹೊಂದಿರುವ ಮರೂನ್ ಬಣ್ಣದ ಸೀರೆ ಧರಿಸಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಸಲೂನ್ ಶೈಲಿಯ ಹೇರ್‌ ಸ್ಟೈಲ್ ಮತ್ತು ಕಡಿಮೆ ಆಭರಣಗಳು ಅವರ ಲುಕ್‌ಗೆ ಆಧುನಿಕ ಸ್ಪರ್ಶ ನೀಡಿವೆ. ಇದೇ ಅಂಶಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿವೆ.

Lara dutta
ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

'ಪೌರಾಣಿಕ ಹಿನ್ನೆಲೆ ಇರುವ 'ರಾಮಾಯಣ' ಚಿತ್ರಕ್ಕೆ ಈ ರೀತಿಯ ಆಧುನಿಕ ಸ್ಟೈಲಿಂಗ್ ಬೇಕಿತ್ತಾ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಾರಾ ದತ್ತಾ ಅವರ ವೇಷಭೂಷಣದ ಕುರಿತು ಅನೇಕ ಪೋಸ್ಟ್‌ಗಳು ವೈರಲ್ ಆಗಿವೆ. ಕೆಲವರು ಯಾವುದೋ ಟಿವಿ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿರುವಂತೆ ಕಾಣುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ತ್ರೇತಾ ಯುಗದ ರಾಣಿಯೊಬ್ಬಳಲ್ಲಿ ನಿರೀಕ್ಷಿಸಲಾಗುವ ಗಾಂಭೀರ್ಯ ಮತ್ತು ಆ ಕಾಲಘಟ್ಟಕ್ಕೆ ತಕ್ಕ ನೈಜತೆ ಈ ಚಿತ್ರಣದಲ್ಲಿ ಇಲ್ಲವೆಂದು ಕೆಲವರು ವಾದಿಸುತ್ತಿದ್ದಾರೆ.

ಏಕ್ತಾ ಕಪೂರ್ ಧಾರಾವಾಹಿಯ ವೈಬ್ ಕೊಡುತ್ತಿದ್ದಾರೆ" ಎಂದು ಓರ್ವ ನೆಟ್ಟಿಗರು ಬರೆದಿದ್ದಾರೆ. ಲಾರಾ ದತ್ತಾ ಲುಕ್‌ ವೈರಲ್ ಆಗುತ್ತಿದ್ದಂತೆಯೇ, ಗೂಗಲ್‌ನಲ್ಲಿ ಅವರ ಬಗ್ಗೆ ಹುಡುಕುವವರ ಸಂಖ್ಯೆ ಸಹ ಅಧಿಕವಾಗಿದ್ದು, ಟ್ರೆಂಡ್ಸ್ ನಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com