Bigg Boss ಖ್ಯಾತಿಯ Aravind KP- Divya uruduga ಬ್ರೇಕಪ್​!; ಜಾಲತಾಣದಲ್ಲಿ ಪರಸ್ಪರ Unfollow; ನಿಜವಾಯ್ತಾ ಜೋತಿಷ್ಯ?

ಬಿಗ್​ಬಾಸ್ ಸೀಸನ್ ​-8 ರ ಖ್ಯಾತ ಜೋಡಿ, ಅರವಿಂದ ಕೆ.ಪಿ ಮತ್ತು ದಿವ್ಯಾ ಉರುಡಗ ನಡುವೆ ಬ್ರೇಕಪ್​ ಆಗಿದೆ ಎನ್ನುವ ಸುದ್ದಿ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.
Divya urudaga- Aravind KP
ದಿವ್ಯ ಉರುಡಗ- ಅರವಿಂದ ಕೆಪಿonline desk
Updated on

ಬಿಗ್ ಬಾಸ್ ನಿಂದ ರಾಜ್ಯಾದ್ಯಂತ ಖ್ಯಾತಿ ಗಳಿಸಿದ್ದ ಜೋಡಿಗಳಾದ ಚಂದನ್ ಶೆಟ್ಟಿ- ನಿವೇದಿತಾ ಗೌಡ ಡಿವೋರ್ಸ್ ಆದ ಬೆನ್ನಲ್ಲೇ ಈಗ ಇಂಥಹದ್ದೇ ಮತ್ತೊಂದು ಜೋಡಿ ದೂರವಾಗಿರೋದರ ಬಗ್ಗೆ ವದಂತಿಗಳು ಹಬ್ಬಿದೆ.

ಬಿಗ್​ಬಾಸ್ ಸೀಸನ್ ​-8 ರ ಖ್ಯಾತ ಜೋಡಿ, ಅರವಿಂದ ಕೆ.ಪಿ ಮತ್ತು ದಿವ್ಯಾ ಉರುಡಗ ನಡುವೆ ಬ್ರೇಕಪ್​ ಆಗಿದೆ ಎನ್ನುವ ಸುದ್ದಿ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಈ ಜೋಡಿ 2021ರಲ್ಲಿ ನಡೆದಿದ್ದ ‘ಬಿಗ್ ಬಾಸ್ ಕನ್ನಡ 8’ ಸೀಸನ್ ನಲ್ಲಿ ಭಾಗಿಯಾಗಿತ್ತು. ‘ಬಿಗ್ ಬಾಸ್’ ಮನೆಯಲ್ಲೇ ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನ ಬಿಚ್ಚಿ ಕೆ.ಪಿ.ಅರವಿಂದ್ ಕೈಬೆರಳಿಗೆ ದಿವ್ಯಾ ಉರುಡುಗ ತೊಡಿಸಿದ್ದರು. ಬಳಿಕ ಇವರ ಪ್ರೀತಿ ಮುಂದುವರೆದಿತ್ತು. ಶೀಘ್ರದಲ್ಲಿಯೇ ಮದುವೆಯಾಗುವುದಾಗಿ ಅರವಿಂದ ಮತ್ತು ಉರುಡಗ ಘೋಷಿಸಿದ್ದರು. ‘ಅರ್ಧಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ಈ ಜೋಡಿ ನಟಿಸಿದೆ.

Divya urudaga- Aravind KP
ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ನಟನೆಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರುಲ್ ಯಾದವ್ ರೀ ಎಂಟ್ರಿ!

ಚಂದನ್ ಶೆಟ್ಟಿ- ನಿವೇದಿತಾ ಗೌಡ ಡಿವೋರ್ಸ್ ಪಡೆದಿದ್ದರೆ, ಈ ಜೋಡಿ ಮದುವೆಗೆ ಮುನ್ನವೇ ಬ್ರೇಕಪ್​ ಆಗಿದೆ ಎಂಬ ಸುದ್ದಿ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ unfollow ಮಾಡಿದ್ದಾರೆ.

ಬಿಗ್​ಬಾಸ್​ನಲ್ಲಿ ಪ್ರೀತಿಸುವ ಜೋಡಿಗಳ ನಡುವೆ ಬ್ರೇಕಪ್​ ಆಗತ್ತೆ ಎಂದು ಈ ಹಿಂದೆ ಖ್ಯಾತ ಗುರೂಜಿ ಒಬ್ಬರು ಭವಿಷ್ಯ ನುಡಿದಿದ್ದು ಈಗ ನಿಜವಾಯ್ತ ಎಂಬ ಚರ್ಚೆಗಳೂ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com