'ನನ್ನ ಅಮ್ಮ ಒಂಥರಾ ಗೂಢಚಾರಿ ಇದ್ದಂತೆ; ಅಪ್ಪ CM ಆಗಿದ್ದು ಐತಿಹಾಸಿಕ ಕ್ಷಣ': ಫಸ್ಟ್ ಟೈಮ್ ಮನಬಿಚ್ಚಿ ಮಾತನಾಡಿದ ವಿಜಯ್ ಪುತ್ರ!

ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ 'ಸಿಗ್ಮಾ' ಬಿಡುಗಡೆಗೆ ಸಜ್ಜಾಗಿದ್ದು, ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ.
TN CM Vijay's son Jason Sanjay reveals dad's career advice, says 'Mom is a spy': 'He never spoon-fed me
ಪತ್ನಿ ಸಂಗೀತಾ, ಸಿಎಂ ವಿಜಯ್ - ಮಗ ಸಂಜಯ್
Updated on

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಮತ್ತು ಮೊದಲ ಬಾರಿಗೆ ನಿರ್ದೇಶಕರಾಗಿರುವ ಜೇಸನ್ ಸಂಜಯ್ ಅವರು ಮೊದಲ ಬಾರಿ ತಮ್ಮ ಕುಟುಂಬದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ತಮ್ಮ ಬಾಲ್ಯದ ನೆನಪುಗಳು ಹಾಗೂ ಅವರ ತಂದೆಯ ವೃತ್ತಿಜೀವನದ ಬಗ್ಗೆ ಹಂಚಿಕೊಂಡಿದ್ದಾರೆ.

ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ 'ಸಿಗ್ಮಾ' ಬಿಡುಗಡೆಗೆ ಸಜ್ಜಾಗಿದ್ದು, ಬಿಹೈಂಡ್‌ವುಡ್ಸ್‌ ಜೊತೆಗಿನ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಜೇಸನ್ ಸಂಜಯ್ ನೀಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಸಂದರ್ಶನದಲ್ಲಿ ಅವರು ತಮ್ಮ ಬಾಲ್ಯದ ನೆನಪುಗಳು, ತಂದೆ ವಿಜಯ್ ಜೊತೆಗಿನ ಬಾಂಧವ್ಯ, ಕುಟುಂಬದ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಹಾಗೂ ತಮ್ಮ ಮೇಲಿರುವ ಜವಾಬ್ದಾರಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

'ಎಂದಿಗೂ ಸ್ಪೂನ್ ಫೀಡಿಂಗ್ ಮಾಡಲಿಲ್ಲ'

ಜೇಸನ್, ತಂದೆ ಮುಖ್ಯಮಂತ್ರಿ ವಿಜಯ್ ಗೆಲುವು ತಮ್ಮ ಕುಟುಂಬಕ್ಕೆ "ಐತಿಹಾಸಿಕ ಕ್ಷಣ". ಇದು ಇಡೀ ಕುಟುಂಬಕ್ಕೆ ಅತ್ಯಂತ ಹೆಮ್ಣೆಯ ವಿಚಾರ ಎಂದು ಹೇಳಿದ್ದು, ಇದು ನನಗೆ, ನನ್ನ ತಂಗಿ ಮತ್ತು ಇಡೀ ಕುಟುಂಬದ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮೊದಲು ತಂದೆ ವಿಜಯ್, ತನಗೆ ನೀಡಿದ ಒಂದು ಸಲಹೆಯನ್ನು ನೆನಪಿಸಿಕೊಂಡ ಜೇಸನ್, ತಂದೆಯ ಮೇಲೆ ಅವಲಂಬಿತರಾಗುವ ಬದಲು ಸ್ವಂತ ಹೆಸರನ್ನು ಮಾಡಬೇಕು ಎಂದು ಹೇಳಿದ್ದರು. "ಅವರು ನನಗೆ ಎಂದಿಗೂ ಸ್ಪೂನ್ ಫೀಡಿಂಗ್ ಮಾಡಲಿಲ್ಲ" ಎಂದು ಜೇಸನ್ ಹೇಳಿದ್ದಾರೆ.

TN CM Vijay's son Jason Sanjay reveals dad's career advice, says 'Mom is a spy': 'He never spoon-fed me
'ಅಪ್ಪನ ಹಾಲಿವುಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಬೇಕು': ಮನದಾಸೆ ಬಿಚ್ಚಿಟ್ಟ ವಿಜಯ್ ಪುತ್ರ ಜೇಸನ್ ಸಂಜಯ್!

ನನ್ನ ಅಮ್ಮ ಒಂಥರಾ ಗೂಢಚಾರಿ ಇದ್ದಂತೆ

ತಂದೆ ವಿಜಯ್ ವೃತ್ತಿಜೀವನದ ಸಲಹೆಯನ್ನು ನೀಡಿದರೆ, ತಾಯಿ ಸಂಗೀತಾ ಮನೆಯಲ್ಲಿ ಒಂಥರಾ ಗೂಢಚಾರಿ ಇದ್ದಂತೆ ಎಂದು ಜೇಸನ್ ನಗುತ್ತಾ ಹೇಳಿದ್ದಾರೆ. "ಒಂಥರಾ ಗೂಢಚಾರಿ ಇದ್ದಂತೆ". ನಾನು ಯಾರಿಗೂ ಹೇಳದೆ ಕುಟುಂಬದ ಕಾರನ್ನು ತೆಗೆದುಕೊಂಡು ಹೊರಗೆ ಹೋದರೆ ತಕ್ಷಣ ಅವರಿಗೆ ಗೊತ್ತಾಗುತ್ತಿತ್ತು. ರಹಸ್ಯವಾಗಿ ಏನೇ ಮಾಡಲು ಹೋದರು, ಯಾರಿಗೂ ಹೇಳದೆ ಸ್ನೇಹಿತರೊಂದಿಗೆ ತಿರುಗಾಡಲು ಹೋದರೂ ಅಮ್ನನಿಗೆ ಗೊತ್ತಾಗಿಬಿಡುತ್ತಿತ್ತು ಎಂದು ಹೇಳಿದ್ದಾರೆ.

ಅಪ್ಪನ ಜೊತೆ ಡ್ಯಾನ್ಸ್

ತಮ್ಮ ತಂದೆ ವಿಜಯ್ ನಟನೆಯ ಸಿನಿಮಾದ ಹಾಡೊಂದರಲ್ಲಿ ಬಾಲ್ಯದಲ್ಲೇ ಅವರ ಜೊತೆ ಡ್ಯಾನ್ಸ್ ಮಾಡಿದ್ದ ಘಟನೆಯನ್ನು ಜೇಸನ್ ಸಂಜಯ್ ನೆನಪಿಸಿಕೊಂಡಿದ್ದಾರೆ. ಆಗ ತಮಗೆ ಸುಮಾರು 8-9 ವರ್ಷ ವಯಸ್ಸಾಗಿತ್ತು ಎಂದು ಅವರು ಹೇಳಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ಸಾಕಷ್ಟು ಜನರನ್ನು ನೋಡಿ ತಾವು ಹೆದರಿದ್ದೆ. ಡ್ಯಾನ್ಸ್‌ಗಾಗಿ ಆ್ಯಕ್ಷನ್ ಹೇಳುತ್ತಿದ್ದಂತೆ ನೇರವಾಗಿ ಅಪ್ಪನ ಬಳಿ ಓಡಿ ಹೋಗಿ ಅವರನ್ನು ತಬ್ಬಿಕೊಂಡಿದ್ದೆ. ಆಗ ತಂದೆ ಧೈರ್ಯ ಹೇಳಿ ತಮ್ಮನ್ನು ಡ್ಯಾನ್ಸ್ ಮಾಡಿಸಿದ್ದರು ಎಂದು ಜೇಸನ್ ಹೇಳಿದ್ದಾರೆ. ಆ ಸಮಯದಲ್ಲಿ ಅದರ ಗಂಭೀರತೆ ಏನು ಎಂಬುದು ತಮಗೆ ಗೊತ್ತಿರಲಿಲ್ಲ. ಅಪ್ಪನ ಜೊತೆ ಸೇರಿ ಮಜಾ ಮಾಡೋಣ ಎಂಬ ಮನಸ್ಥಿತಿಯಲ್ಲಿ ಆ ಹಾಡಿನಲ್ಲಿ ಭಾಗವಹಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ಕುಟುಂಬದ ಬಗ್ಗೆ ಹರಿದಾಡುತ್ತಿರುವುದೆಲ್ಲ ರೂಮರ್ಸ್

ವಿಜಯ್ ಹಾಗೂ ಅವರ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಸುದ್ದಿಗಳ ಕುರಿತು ಮಾತನಾಡಿರುವ ಜೇಸನ್ ಸಂಜಯ್, ಅವುಗಳಲ್ಲಿ ಬಹುತೇಕವು ಕೇವಲ ವದಂತಿಗಳು ಎಂದು ಹೇಳಿದ್ದಾರೆ. ನನ್ನ ತಂದೆ ಮತ್ತು ನಮ್ಮ ಕುಟುಂಬದ ಬಗ್ಗೆ ಹೊರಗೆ ಬರುತ್ತಿರುವ ಹಲವು ವಿಚಾರಗಳು ರೂಮರ್ಸ್. ನಾವೆಲ್ಲರೂ ಜವಾಬ್ದಾರಿಯುತವಾಗಿ ನಮ್ಮ ಜೀವನವನ್ನು ನಡೆಸುತ್ತಿದ್ದೇವೆ. ನಮ್ಮ ಬಗ್ಗೆ ಅನಗತ್ಯವಾಗಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಆದರೆ ಅವೆಲ್ಲವನ್ನೂ ಮೀರಿ ನಾವು ನಮ್ಮ ಜೀವನವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com