ಕನ್ನಡಕ್ಕೆ ಮಾಧುರಿ ದೀಕ್ಷಿತ್ ಪದಾರ್ಪಣೆ: ಶಿವಣ್ಣನ 'ಎ ಫಾರ್ ಆನಂದ್' ಚಿತ್ರದಲ್ಲಿ 'ಧಕ್ ಧಕ್' ಬೆಡಗಿ?

ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ, 'ಎ ಫಾರ್ ಆನಂದ್' ಶಿವರಾಜ್‌ಕುಮಾರ್ ಮತ್ತು ಮಾಧುರಿ ದೀಕ್ಷಿತ್ ನಡುವಿನ ಮೊದಲ ತೆರೆಯ ಮೇಲಿನ ಸಹಯೋಗವಾಗಲಿದೆ,
Shivarajkumar and madhuri
ಶಿವರಾಜ್ ಕುಮಾರ್ ಮತ್ತು ಮಾಧುರಿ ದೀಕ್ಷಿತ್
Updated on: 

ಬೆಂಗಳೂರು: 'ಘೋಸ್ಟ್' ನಂತರ ನಿರ್ದೇಶಕ ಶ್ರೀನಿ ಮತ್ತು ಶಿವರಾಜ್‌ಕುಮಾರ್ ಮತ್ತೆ 'ಎ ಫಾರ್ ಆನಂದ್' ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಈ ಚಿತ್ರ ಹ್ಯಾಟ್ರಿಕ್ ಹೀರೋ ಅವರ ವೃತ್ತಿಜೀವನದಲ್ಲಿ ಅಪಾರ ಭಾವನಾತ್ಮಕ ಮೌಲ್ಯ ಹೊಂದಿರುವ ಶೀರ್ಷಿಕೆಯಾಗಿದೆ. ಆನಂದ್ ಶಿವರಾಜ್‌ಕುಮಾರ್ ಅಭಿನಯದ ಅವರ ಚೊಚ್ಚಲ ಚಿತ್ರವಾಗಿತ್ತು.

ಈಗ, ಗೀತಾ ಪಿಕ್ಚರ್ಸ್ ಈ ಪ್ರಾಜೆಕ್ಟ್ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಶ್ರೀನಿ ನಿರ್ದೇಶನದ 'ಎ ಫಾರ್ ಆನಂದ್' ಸಿನಿಮಾವನ್ನು ಇನ್ನಷ್ಟು ವಿಶೇಷವಾಗಿಸಲು ಹೆಚ್ಚುವರಿ ಪ್ರಯತ್ನ ಮಾಡುತ್ತಿರುವಂತೆ ತೋರುತ್ತಿದೆ. ಮೂಲಗಳ ಪ್ರಕಾರ, ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಚರ್ಚೆಗಳು ಸದ್ದಿಲ್ಲದೆ ನಡೆಯುತ್ತಿವೆ, ಆದರೆ ಇನ್ನೂ ಅಧಿಕೃತವಾಗಿ ಧೃಢೀಕರಿಸಿಲ್ಲ.

ಚಿತ್ರದ ತಾರಾಗಣವನ್ನು ಗೌಪ್ಯವಾಗಿಡಲಾಗಿದೆ. ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ, 'ಎ ಫಾರ್ ಆನಂದ್' ಶಿವರಾಜ್‌ಕುಮಾರ್ ಮತ್ತು ಮಾಧುರಿ ದೀಕ್ಷಿತ್ ನಡುವಿನ ಮೊದಲ ತೆರೆಯ ಮೇಲಿನ ಸಹಯೋಗವಾಗಲಿದೆ, ತಲೆಮಾರುಗಳಿಂದ ನಿರಂತರ ಜನಪ್ರಿಯತೆಯನ್ನು ಅನುಭವಿಸಿರುವ ಇಬ್ಬರು ತಾರೆಯರನ್ನು ಒಟ್ಟುಗೂಡಿಸುತ್ತದೆ.

ಮಾಧುರಿ ದೀಕ್ಷಿತ್ ದಕ್ಷಿಣದಾದ್ಯಂತ ಚಲನಚಿತ್ರ ನಿರ್ಮಾಪಕರಿಂದ ಹಲವು ಆಫರ್‌ಗಳನ್ನು ಪಡೆದಿದ್ದಾರೆ, ಆದರೆ ಯಾರ ಸಿನಿಮಾದಲ್ಲಿಯೂ ಆಕೆ ಇನ್ನೂ ನಟಿಸಿಲ್ಲ. ಬಾಲಿವುಡ್ ಐಕಾನ್ ಅನ್ನು ಕನ್ನಡ ಚಿತ್ರರಂಗಕ್ಕೆ ತರುವಲ್ಲಿ ಶ್ರೀನಿ ಯಶಸ್ವಿಯಾಗುತ್ತಾರೆಯೇ ಎಂದು ಈಗ ನೋಡಬೇಕಾಗಿದೆ.

Shivarajkumar and madhuri
'ಮನೆಯ ಆರ್ಥಿಕ ಸಮಸ್ಯೆಗಳಿಂದಾಗಿಯೇ ನಾನು ನಟನಾದೆ': 'ವಿಶ್ವನಾಥ್ ಅಂಡ್ ಸನ್ಸ್' ನಟ ಸೂರ್ಯ

ಎ ಫಾರ್ ಆನಂದ್ ಬಗ್ಗೆ ಮಾತನಾಡಿದ ಶ್ರೀನಿ ಈ ಚಿತ್ರವನ್ನು ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯದ ಕಥೆ ಎಂದು ಬಣ್ಣಿಸಿದ್ದಾರೆ, ಶಿವರಾಜ್‌ಕುಮಾರ್ ಅವರ ಆತ್ಮೀಯತೆ ಮತ್ತು ವಿಶಿಷ್ಟ ಪರದೆಯ ಉಪಸ್ಥಿತಿಯು ಆನಂದ್ ಪಾತ್ರಕ್ಕೆ ಅವರು ಸೂಕ್ತ ಆಯ್ಕೆಯನ್ನಾಗಿ ಮಾಡಿದೆ ಎಂದು ಹೇಳಿದರು. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿರುವ ಈ ಚಿತ್ರವು ಕಳೆದ ತಿಂಗಳು ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅನಾವರಣಗೊಳಿಸಿತು ಮತ್ತು ಶೀಘ್ರದಲ್ಲೇ ತೆರೆಗೆ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com