ವಿನಾಶ ಕಾಲೇ ವಿಪರೀತ ಬುದ್ಧಿ: ನಿಮ್ಮ ಶುಗರ್ ಡ್ಯಾಡಿ ಶ್ರೀಮಂತನಾಗಿದ್ದರೆ, ಸರಿಯಾದ ಬಟ್ಟೆ ಧರಿಸಲು ಕಲಿಯಿರಿ; ನಟ ಗೋವಿಂದ ಪತ್ನಿ ಛೀಮಾರಿ !

ಗೋವಿಂದಾ ತಮ್ಮ ಮುಂಬರುವ ಸಿನಿಮಾ ‘ರೂಪಾ’ ಚಿತ್ರದ ಸಹನಟಿ ಕೋಮಲ್ ರಾಣಿ ಸ್ವರ್ಣಕರ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸುನೀತಾ ಅಹುಜಾ ಕೆಂಡ ಕಾರಿದ್ದಾರೆ.
Govinda komal rani and sunitha
ನಟ ಗೋವಿಂದಾ ಮತ್ತು ಕೋಮಲ್ ರಾಣಿ ಹಾಗೂ ಸುನೀತಾ ಅಹುಜಾ
Updated on

ಮುಂಬಯಿ: ಒಂದು ಕಾಲದಲ್ಲಿ ಸ್ಟಾರ್ ಹೀರೋ ಆಗಿದ್ದ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ವೈಯಕ್ತಿಕ ಸಂಘರ್ಷ ಮತ್ತೊಮ್ಮೆ ಸಾರ್ವಜನಿಕವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇತ್ತೀಚೆಗೆ ನಟಿ ಕೋಮಲ್ ರಾಣಿ ಜೊತೆಗೆ ಗೋವಿಂದ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ, ಪತ್ನಿ ಸುನೀತಾ ಅವರು ತಮ್ಮ ಪತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗೋವಿಂದಾ ತಮ್ಮ ಮುಂಬರುವ ಸಿನಿಮಾ ‘ರೂಪಾ’ ಚಿತ್ರದ ಸಹನಟಿ ಕೋಮಲ್ ರಾಣಿ ಸ್ವರ್ಣಕರ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸುನೀತಾ ಅಹುಜಾ ಕೆಂಡ ಕಾರಿದ್ದಾರೆ. 'ಮಗಳ ವಯಸ್ಸಿನ ಹುಡುಗಿಯೊಂದಿಗೆ ಸುತ್ತಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಹರಿಹಾಯ್ದಿದ್ದಾರೆ.

ಮೊನ್ನೆಯಷ್ಟೇ ಸುನೀತಾ ಅಹುಜಾ ಕ್ಯಾಮರಾಗಳ ಮುಂದೆ ಕಾಣಿಸಿಕೊಂಡರು. ಈ ವೇಳೆ, ಗೋವಿಂದಾ ಮತ್ತು ಕೋಮಲ್ ರಾಣಿ ಸಿನಿಮಾ ಪ್ರಚಾರದ ಕುರಿತಾಗಿ ಪ್ರಶ್ನೆ ತೂರಿಬಂತು. ಆಗ ಕಟುವಾದ ಮಾತುಗಳನ್ನೇ ಆಡಿದ್ದಾರೆ ಸುನೀತಾ ಅಹುಜಾ.

Govinda komal rani and sunitha
37 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು! ಬಾಲಿವುಡ್ ನಟ ಗೋವಿಂದ, ಸುನೀತಾ ಅಹುಜಾ ವಿಚ್ಛೇದನಕ್ಕೆ ಮುಂದು! ಹುಳಿ ಹಿಂಡಿದ್ರಾ ಆ ನಟಿ?

'ಸಿನಿಮಾ ಮೊದಲು ನಿರ್ಮಾಣವಾಗಬೇಕು, ನಂತರ ಪ್ರಚಾರ ನಡೆಯಬೇಕು. ಆದರೆ ಇಲ್ಲಿ ಪ್ರಚಾರವೇ ಮೊದಲು ನಡೆಯುತ್ತಿರುವಂತಿದೆ. ಮಗಳ ವಯಸ್ಸಿನ ಹುಡುಗಿಯೊಂದಿಗೆ ಗೋವಿಂದಾ ಓಡಾಡುತ್ತಿದ್ದಾರೆ. ಅವರಿಗೆ ಸ್ವಲ್ಪವಾದರೂ ನಾಚಿಕೆ ಇರಬೇಕು'' ಎಂದು ಛೀಮಾರಿ ಹಾಕಿದ್ದಾರೆ ಸುನೀತಾ ಅಹುಜಾ.

ಇಷ್ಟಕ್ಕೇ ನಿಲ್ಲಿಸದ ಅವರು ಕೋಮಲ್ ರಾಣಿಯನ್ನು ಉದ್ದೇಶಿಸಿ, ‘ನಿಮ್ಮ ಶುಗರ್ ಡ್ಯಾಡಿ ಅಷ್ಟೊಂದು ಶ್ರೀಮಂತನಾಗಿದ್ದರೆ, ಮೊದಲು ಸರಿಯಾದ ಬಟ್ಟೆ ಧರಿಸುವುದನ್ನು ಕಲಿಯಿರಿ. ನಮ್ಮ ಶೈಲಿಯನ್ನು ನೋಡಿ ಕಲಿಯಿರಿ’ ಎಂದು ತಿರುಗೇಟು ನೀಡಿದ್ದಾರೆ.

ಗೋವಿಂದ ಅವರ ನಡವಳಿಕೆಯನ್ನು ಖಂಡಿಸಿದ ಸುನೀತಾ, ‘ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ನಾಣ್ಣುಡಿಯನ್ನು ನೀವು ಕೇಳಿರಬಹುದು. ಅವನ ಬುದ್ಧಿ ಭ್ರಷ್ಟವಾಗಿದೆ. ಅದಕ್ಕಾಗಿಯೇ ಇಂತಹ ಕೆಲಸಗಳನ್ನು ಮಾಡುತ್ತಿದ್ದಾನೆ’ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com