BBK 13: 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಟಾರ್ಚರ್‌, ಭಾರಿ ಟ್ರೋಲ್, ಸಂಗೀತಾ ಸಮರ್ಥನೆ, ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’!

ಸಾಮಾನ್ಯ ವ್ಯಕ್ತಿಗಳು ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರ ನಡೆ ಕುರಿತು ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ
Agni Parikshe' audition
ಎರಡನೇ ಸುತ್ತಿಗೆ ಆಯ್ಕೆಯಾದ ಕಂಟೆಸ್ಟೆಂಟ್
Updated on

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನ ಆಯೋಜಿಸಲಾದ 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ನೀಡುತ್ತಿರುವ ಕಠಿಣ ಸವಾಲುಗಳು ಮತ್ತು ಟಾರ್ಚರ್‌ಗಳು ವೀಕ್ಷಕರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೊಳಗಾಗಿವೆ .ಫೋನ್ ಒಡೆಯುವುದು, ಬ್ಯಾಗ್ ನಾಶ ಮಾಡುವುದು ಮತ್ತು ಲೈವ್ ಕಾಲ್‌ನಲ್ಲಿ ಉದ್ಯೋಗಕ್ಕೆ ರಾಜೀನಾಮೆ ಕೊಡಿಸುವಂತಹ ಅತಿರೇಕದ ಸಾಹಸ ಪರೀಕ್ಷೆಗಳು ವಿವಾದಕ್ಕೆ ಕಾರಣವಾಗಿವೆ.

ಕೇವಲ ಮೂರು ತಿಂಗಳ ರಿಯಾಲಿಟಿ ಶೋಗಾಗಿ ವರ್ಷಗಳ ಉದ್ಯೋಗವನ್ನೇ ಬಿಡಿಸುವಂತಹ ಸವಾಲುಗಳು. ಹೊರಗಿನ ಜೀವನದಲ್ಲಿ ಯಾರೂ ಮಾಡದ ಅಸಹಜ ಕೆಲಸಗಳನ್ನು ಒತ್ತಡದಲ್ಲಿ ಮಾಡಿಸುವುದು.ಸಾಮಾನ್ಯ ವ್ಯಕ್ತಿಗಳು ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರ ನಡೆ ಕುರಿತು ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ

ಅಗ್ನಿಪರೀಕ್ಷೆ ಹೆಸರಿನಲ್ಲಿ ತಲೆ ಬೋಳಿಸುವಂತೆ ಮಾಡಿದ್ದು, ಸೆಗಣಿ ಮೆತ್ತಿಸಿದ್ದು, ಸಾಲದು ಎನ್ನುವುದಕ್ಕೆ ಗಿನ್ನೆಸ್​ ದಾಖಲೆಯನ್ನೇ ಹರಿಯುವಂತೆ ಮಾಡಿದ್ದು, ಒಬ್ಬಾಕೆಗೆ ಫೋನ್​ ಮಾಡಿ ಕೆಲಸ ಬಿಡುವಂತೆ ಹೇಳಿರುವುದು.ಇವೆಲ್ಲವೂ ಸಾಕಷ್ಟು ಟ್ರೋಲ್​ ಕೂಡ ಆಗುತ್ತಿದೆ.

ಗಿನ್ನೆಸ್​ ದಾಖಲೆಯಂಥ ಜೀವನ ಪರ್ಯಂತದ ದಾಖಲೆಯನ್ನು, ಒಂದು ಶೋಗಾಗಿ ಹರಿದ ಹಾಗೂ ಹರಿಸುವಂತೆ ಕೆಲಸ ಮಾಡಿರುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ನಿರೂಪಕರು ಹಾಗೂ ತೀರ್ಪುಗಾರರು ಇದು ಕೇವಲ ಆರಂಭಿಕ ಹಂತದ ಪರೀಕ್ಷೆಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಿಮವಾಗಿ ಸ್ಪರ್ಧಿಗಳ ಆಯ್ಕೆ ವೀಕ್ಷಕರ ವೋಟಿಂಗ್‌ ಮೇರೆಗೆ ಮಾತ್ರ ನಡೆಯಲಿದೆ. ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಜಕರು ಮತ್ತು ತೀರ್ಪುಗಾರರು, ನಕಾರಾತ್ಮಕ ಟೀಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಇದು ಅಗತ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಂಗೀತ ಶೃಂಗೇರಿ ಹೇಳಿದ್ದೇನು? ಇದೇನೂ ಕಾಮನ್​ಮ್ಯಾನ್​ಗೆ ಮಾತ್ರ ಮಾಡಿದ್ದಲ್ಲ. ಸೆಲೆಬ್ರಿಟಿಗಳಿಗೂ ಸಾಕಷ್ಟು ಟಫ್​ ಟಾಸ್ಕ್​ ನೀಡಲಾಗಿತ್ತು. ನನಗೆ ಕಣ್ಣಿಗೆ ಸಮಸ್ಯೆಯಾಗಿದ್ದು ಗೊತ್ತಿರಬಹುದು, ವಿನಯ್​ ಗೌಡ ಅವರು ಸಾಕಷ್ಟು ವರ್ಷದಿಂದ ಇದಕ್ಕಾಗಿ ಟ್ರೈ ಮಾಡಿದ್ದರು, ಆದ್ದರಿಂದ ಬಿಗ್​ಬಾಸ್​ಗೆ ಹೋಗುವಾಗ ಎಲ್ಲರಿಗೂ ಇದು ಕಾಮನ್​ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಸಂಗೀತ ಶೃಂಗೇರಿ ಹೇಳಿದ್ದಾರೆ.

ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್: ಇನ್ನೂ ಮೊದಲ ಸಂಚಿಕೆಯಲ್ಲಿ ಜಿ.ಕೆ. ಪೂರ್ಣಿಮಾ, ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್ ಮಂಜು ಭಾಗವಹಿಸಿದ್ದರು. “30 ಸೆಕೆಂಡ್ ಟೈಯರ್ ಎತ್ತುವ ಸವಾಲನ್ನು 45 ಸೆಕೆಂಡ್ ನಿರ್ವಹಿಸಿ, ನಟನಾ ಟಾಸ್ಕ್‌ನಲ್ಲಿ ನಾಲ್ಕೂ ಜ್ಯೂರಿಗಳ ಮನಗೆದ್ದ ಮಂಡ್ಯದ KSRTC ಮೆಕ್ಯಾನಿಕ್ ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’ ಆಗಿ ಹೊರಹೊಮ್ಮಿದ್ದಾರೆ.

Agni Parikshe' audition
BiggBoss ಖ್ಯಾತಿಯ Aravind KP- Divya Uruduga ಬ್ರೇಕಪ್​!; ಜಾಲತಾಣದಲ್ಲಿ ಪರಸ್ಪರ Unfollow; ನಿಜವಾಯ್ತಾ ಜೋತಿಷ್ಯ?

ನಾಲ್ವರು ಎರಡನೇ ಸುತ್ತಿಗೆ ಆಯ್ಕೆ: ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಹಾಗೂ ಜಿ.ಕೆ ಪೂರ್ಣಿಮಾ.

ಹೊಲ್ಡ್‌ನಲ್ಲಿರುವ ಇಬ್ಬರು ಸ್ಪರ್ಧಿಗಳು: ಕೆಲಸಕ್ಕೆ ರಾಜೀನಾಮೆ ನೀಡಿ ರಿಸ್ಕ್ ತೆಗೆದುಕೊಂಡು ಬಂದ ದೀಕ್ಷಾ ಆರ್. ಶೆಟ್ಟಿ. ತಂದೆ ಕೊಟ್ಟ ಪರ್ಸ್ ಹಾಳು ಮಾಡಲು ಸಿದ್ಧರಾಗಿ ಸವಾಲು ಸ್ವೀಕರಿಸಿದ ಇಶಾ ನವೀನ್.

ರಿಜೆಕ್ಟ್ ಆದ ಇಬ್ಬರು ಸ್ಪರ್ಧಿಗಳು: ಕಬಾಬ್ ಮಂಜು: ಕುದಿಯುವ ಎಣ್ಣೆಯಲ್ಲಿ ಕೈಹಾಕುವ ಸಾಹಸ ತೋರಿದರೂ, “ಕಳೆದುಹೋದ ತಾಯಿ-ತಮ್ಮನನ್ನು ಹುಡುಕಲು ಬಿಗ್ ಬಾಸ್‌ಗೆ ಬರಬೇಕು ಎಂದ ಅವರ ಉತ್ತರ ತೀರ್ಪುಗಾರರಿಗೆ ಸಮಾಧಾನ ನೀಡದ ಕಾರಣ ರಿಜೆಕ್ಟ್ ಆದರು. ಯೋಗಿತಾ-ಯೋಗಶ್ರೀ (ಅವಳಿ ಸಹೋದರಿಯರು): ತಂಗಿಗಾಗಿ ಅಕ್ಕ ಬಿಟ್ಟುಕೊಡಲು ಮುಂದಾದಾಗ, ಅಕ್ಕನನ್ನೇ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ, ಸನ್ನಿವೇಶ ಹ್ಯಾಂಡಲ್ ಮಾಡುವ ಪರಿಪಕ್ವತೆ (Maturity) ಇಲ್ಲವೆಂದು ರಿಜೆಕ್ಟ್ ಮಾಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com