

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರ 'ಜೈಲರ್ 2' ಬಗ್ಗೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಗಳು ಹುಟ್ಟಿಕೊಂಡಿವೆ. 2023ರಲ್ಲಿ ಬಿಡುಗಡೆಯಾದ 'ಜೈಲರ್' ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.
ನಿನ್ನೆ ಮೊದಲಿಗೆ ಬಿಡುಗಡೆಯಾದ 'ಅಲಾ ಬೊಲೆಲೋ' (Ala Bolelo) ಹಾಡಿನ 32 ಸೆಕೆಂಡುಗಳ ಪ್ರೊಮೋದಲ್ಲಿ ಮಲಯಾಳಂ ಉಚ್ಚಾರಣೆಯು ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಇದೀಗ ಬಿಡುಗಡೆಯಾದ ಪೂರ್ಣ ಹಾಡನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಶಮ್ನಾ ಕಾಸಿಮ್ ಅವರ ಮಸ್ತ್ ಸ್ಟೆಪ್ ಹಾಗೂ ಅತ್ಯುತ್ತಮ ನೃತ್ಯ ಸಂಯೋಜನೆಯು ನೆಟ್ಟಿಗರ ಗಮನ ಸೆಳೆಯುತ್ತಿದೆ. ಕಾವಾಲಾ' ಮತ್ತು 'ಟೈಗರ್ ಮುತ್ತುವೇಲ್ ಪಾಂಡಿಯನ್ ಇನ್ವೆಸ್ಟಿಗೇಷನ್' ಹಾಡುಗಳಂತೆಯೇ, ಈ ಚಿತ್ರವೂ ಥಿಯೇಟರ್‌ಗಳಲ್ಲಿ ಭರ್ಜರಿ ಸಂಭ್ರಮವನ್ನು ಸೃಷ್ಟಿಸಲಿದೆ" ಎಂದು ನೆಟ್ಟಿಗರೊಬ್ಬರು ಬರೆದುಕೊಡಿದ್ದಾರೆ.
ಎಂತಹ ಉತ್ಸಾಹಭರಿತ ಹಾಡು! ಭವ್ಯವಾದ ನಿರ್ಮಾಣ ಮತ್ತು ಅದ್ಭುತ ದೃಶ್ಯ ವೈಭವ. ಇದು ಖಂಡಿತವಾಗಿಯೂ ಸೂಪರ್ ಹಿಟ್ ಆಗಲಿದೆ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಜನಿಕಾಂತ್ ಮತ್ತು ಶಮ್ನಾ ಕಾಸಿಮ್ ಅಭಿನಯದ 'ಅಲಾ ಬೊಲೆಲೋ' (Ala Bolelo) ಹಾಡಿನ 32 ಸೆಕೆಂಡುಗಳ ಪ್ರೊಮೋ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಪೂರ್ಣ ಹಾಡು ನಿನ್ನೆ ಬಿಡುಗಡೆಯಾಗಿದೆ. 'ಜೈಲರ್ 2' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಅರುಣರಾಜ ಕಾಮರಾಜ್, ನಿರಂಜನಾ ರಮಣ್, ಅಪರ್ಣಾ ಹರಿಕಮಾರ್ ಮತ್ತು ದೀಪ್ತಿ ಸುರೇಶ್ ಅವರೊಂದಿಗೆ ಸೇರಿ ಸಾಹಿತ್ಯವನ್ನು ಬರೆದಿದ್ದಾರೆ. ಶಮ್ನಾ ಕಾಸಿಮ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಇದರಲ್ಲಿ ರಜನಿಕಾಂತ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಸನದ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರವು 2026ರ ಅಕ್ಟೋಬರ್ 15 ರಂದು ತೆರೆಗೆ ಬರಲಿದೆ.