'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಇನ್ನು ತಮ್ಮ ಪೋಸ್ಟ್ ನಲ್ಲಿ “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ” ಎಂಬ ಖಡಕ್ ಡೈಲಾಗ್ ಉಲ್ಲೇಖಿಸುವ ಮೂಲಕ, ಮುಂದಿನ ಬಿಗ್ ಪ್ರಾಜೆಕ್ಟ್‌ಗಳಿಗೆ ಸಜ್ಜಾಗುತ್ತಿರುವ ಬಗ್ಗೆ ಕಿಚ್ಚ ಸುದೀಪ್ ಅವರು ಸುಳಿವನ್ನು ನೀಡಿದ್ದಾರೆ.
Kichcha Sudeep
ಕಿಚ್ಚ ಸುದೀಪ್
Updated on

ರಿಯಾಲಿಟಿ ಶೋ ಬಿಗ್​ಬಾಸ್ ಸಿದ್ಧತೆಯಲ್ಲಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟುಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಅಭಿಮಾನಿಗಳಿಗಾಗಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

ಕಿಚ್ಚ ಸುದೀಪ್ ಅವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಸೆಪ್ಟೆಂಬರ್ 2 ರಂದು ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದು, ಆ ದಿನದಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ತಮ್ಮ ಪೋಸ್ಟ್ ನಲ್ಲಿ “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ” ಎಂಬ ಖಡಕ್ ಡೈಲಾಗ್ ಉಲ್ಲೇಖಿಸುವ ಮೂಲಕ, ಮುಂದಿನ ಬಿಗ್ ಪ್ರಾಜೆಕ್ಟ್‌ಗಳಿಗೆ ಸಜ್ಜಾಗುತ್ತಿರುವ ಬಗ್ಗೆ ಕಿಚ್ಚ ಸುದೀಪ್ ಅವರು ಸುಳಿವನ್ನು ನೀಡಿದ್ದಾರೆ.

Kichcha Sudeep
Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ಪೋಸ್ಟ್ ನಲ್ಲಿ ಏನಿದೆ?

ಆತ್ಮೀಯ ಸ್ನೇಹಿತರೇ, ನಮಸ್ಕಾರ, ಹೇಗಿದ್ದೀರಿ? 2ನೇ ಸೆಪ್ಟೆಂಬರ್ ಎಂಬುದು ಒಂದು ದಿನಾಂಕ ಅಷ್ಟೇ. ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ನಿಮ್ಮ ಅಭಿಮಾನ, ಹುಚ್ಚು ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕಳೆದ 30 ವರ್ಷಗಳಲ್ಲಿ ನಿಮ್ಮ ಚಪ್ಪಾಳೆ, ಶಿಳ್ಳೆಗಳಲ್ಲಿ ಇನ್ನು ಹೆಚ್ಚು ಹೆಚ್ಚು ಪ್ರೋತ್ಸಾಹ ಪ್ರೀತಿ ಕಂಡುಕೊಂಡಿದ್ದೇನೆ. ಪ್ರತಿ ಸಿನಿಮಾ ಇರಲಿ, BIGGBOSS ಇರಲಿ ಜೊತೆಗೆ ಯಾವುದೇ ಕಾರ್ಯಕ್ರಮಕ್ಕೆ ಮುಂದಾದಾಗ ನೀವು ತೋರಿಸಿದ ಪ್ರೀತಿ ಅಪರಿಮಿತ.. ಅದೇ ನನಗೆ ಶ್ರೀರಕ್ಷೆ ಎಂದು ಬರೆದಿದ್ದಾರೆ.

ನನ್ನ ಮತ್ತು ನಿಮ್ಮ ನಡುವಿನ ಸಂಬಂಧವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ, ಶೀಘ್ರದಲ್ಲೇ ನಾವೆಲ್ಲರೂ ಮುಖಾಮುಖಿ ಭೇಟಿಯಾಗೋಣ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಈ ಮೂಲಕ ಈ ವರ್ಷದ ಸೆಪ್ಟೆಂಬರ್ 2 ರಂದು ತಮ್ಮ ನಿವಾಸದ ಬಳಿ ನಡೆಯುತ್ತಿದ್ದ ಸಂಭ್ರಮಾಚರಣೆಗೆ ಕಿಚ್ಚ ಸುದೀಪ್ ಬ್ರೇಕ್ ಹಾಕಿದ್ದು, ತಮ್ಮ ಹೊಸ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗುತ್ತಿದ್ದಾರೆ.

ಮತ್ತೊ೦ದು ವಿಷಯ, 30 ವರ್ಷ... ಅಂದರೆ "ಬರೋಬ್ಬರಿ ಮೂವತ್ತು ವರ್ಷ" ಕನ್ನಡ ಚಿತ್ರರಂಗಕ್ಕೆ ಅರ್ಪಿಸಿಕೊಂಡವನಿಗೆ ಸಿನಿಮಾ ನನ್ನ ಪರಮ ಕಾಯಕ ಅನ್ನೋದು ಸ್ಪಷ್ಟ ಕೆಲವೊಮ್ಮೆ ತಡವಾಗಬಹುದು ಅದಕ್ಕೂ ಕಾರಣಗಳಿರುತ್ತವೆ ಎಂದು ಹೇಳಿದ್ದಾರೆ.

ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ

"ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ " ನೋಡಿ, ನನ್ನದೇ ಸಿನಿಮಾ ಸಂಭಾಷಣೆ ಹೀಗೆ ಈ ಪತ್ರದಲ್ಲಿ ನನ್ನ ಬಳಕೆಗೆ ಬರುತ್ತದೆ ಎಂದು ನಾನೂ ಅಂದುಕೊಂಡಿರಲಿಲ್ಲ. ಯಾವುದೇ ವೇದಿಕೆ, ಯಾವುದೇ ಕಾರ್ಯಕ್ರಮಕ್ಕೆ ಹೋದರು ಕನ್ನಡಿಗರನ್ನು ರಂಜಿಸಲು, ಕನ್ನಡವನ್ನು ಕುಣಿಸಲು, "ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ" ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com