ಆಕೆಯನ್ನು ತಡೆದವರು ಯಾರು? ಬಯಸಿದಂತ ಉಡುಪು ಧರಿಸಲಿ ಬಿಡಿ: ಕೃತಿ ಸನೋನ್‌ಗೆ ಕಂಗನಾ ರಣಾವತ್ ತಿರುಗೇಟು

ಆಭರಣ ಬ್ರ್ಯಾಂಡ್‌ನ 36 ಸೆಕೆಂಡುಗಳ 'ರಕ್ಷಾಬಂಧನ' ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಕೃತಿ ಸನೊನ್ ಅವರ ಉಡುಪಿನ ಬಗ್ಗೆ ಕಂಗನಾ ಕೂಡ ವಾಗ್ದಾಳಿ ನಡೆಸಿದ್ದರು.
Kangana Ranaut - Kriti Sanon
ಕಂಗನಾ ರಣಾವತ್ - ಕೃತಿ ಸನೋನ್
Updated on

ಬಿಕಿನಿ ಧರಿಸಿ ನಟಿ ಕೃತಿ ಸನೋನ್ ರಾಕಿ ಕಟ್ಟಿದ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮಹಿಳೆ ತಾನು ಬಯಸಿದ್ದನ್ನು ಧರಿಸಬಹುದು ಎಂಬ ಕೃತಿ ಸನೋನ್ ಹೇಳಿಕೆಗೆ ಸಂಸದೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.

ಬಯಸಿದ್ದನ್ನು ಧರಿಸದಂತೆ ಆಕೆಯನ್ನು ತಡೆದವರು ಯಾರು? ಕಂಗನಾ ಪ್ರಶ್ನಿಸಿದ್ದಾರೆ. ಜಿಸ್ ತರಹ್ ಕಿ ಫಿಲ್ಮೋಂ ಮೇ ಹಮ್ ಉನ್ಹೆ ದೇಖ್ತೆ ಹೈ, ಉನ್ಹೆ ಕೌನ್ ರೋಕ್ ರಹಾ ಹೈ ಕುಚ್ ಪೆಹ್ನ್ನೇ ಸೆ? ಕಿಸ್ ನೆ ಉನ್ಹೆ ರೋಕಾ ಹೈ, ಕಿಸ್ ಕೋ ಕ್ಯಾ ಪಡಿ ಹೈ?"

ಸಿನಿಮಾಗಳಲ್ಲಿ ಅವರು ಬಯಸಿದ್ದನ್ನು ಧರಿಸುವುದನ್ನು ಯಾರು ತಡೆದಿದ್ದಾರೆ? ಅವರ ಬಟ್ಟೆಗಳ ಆಯ್ಕೆಯೊಂದಿಗೆ ಯಾರಿಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಭಾವಿಸುತ್ತೇನೆ, ಎಂದು ಡಿಕೋಡ್ ಲೈವ್‌ನಲ್ಲಿ ಸುಧೀರ್ ಚೌಧರಿ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಕಂಗನಾ ಹೇಳಿದ್ದಾರೆ. ರಕ್ಷಾ ಬಂಧನದಲ್ಲಿಯೂ ಕೂಡ ಮಹಿಳೆ ಏನು ಬೇಕಾದರೂ ಧರಿಸಬಹುದು" ಎಂದು ಕಂಗನಾ ಹೇಳಿದರು.

ಆಭರಣ ಬ್ರ್ಯಾಂಡ್‌ನ 36 ಸೆಕೆಂಡುಗಳ 'ರಕ್ಷಾಬಂಧನ' ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಕೃತಿ ಸನೊನ್ ಅವರ ಉಡುಪಿನ ಬಗ್ಗೆ ಕಂಗನಾ ಕೂಡ ವಾಗ್ದಾಳಿ ನಡೆಸಿದ್ದರು. 'ಮಹಿಳೆಯೊಬ್ಬರು ಏನು ಧರಿಸುತ್ತಾರೆ ಎಂಬುದು ಅವರ ಆಯ್ಕೆ' ಎಂದು ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ನಟಿ ಕೃತಿ ಸನೊನ್ ಬರೆದುಕೊಂಡಿದ್ದರು. ವಿವಾದದ ನಂತರ ಜಾಹೀರಾತನ್ನು ರದ್ಧುಗೊಳಿಸಲಾಗಿದೆ.

Kangana Ranaut - Kriti Sanon
'ನಿಮಗೆಲ್ಲರಿಗೂ ಪ್ರೀತಿ ಮತ್ತು ಸಕಾರಾತ್ಮಕತೆ ಸಿಗಲಿ': ಕೃತಿ ಸನೋನ್ ಉಡುಪಿನ ಕುರಿತು ತೀವ್ರ ಟೀಕೆಗಳ ನಂತರ 'ರಕ್ಷಾ ಬಂಧನ' ಜಾಹೀರಾತು ಹಿಂಪಡೆದ GIVA

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com