ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ನಾನು ನಡು ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ: ಪ್ರೇಕ್ಷಕರಿಗೆ ನಟಿ ಶ್ವೇತಾ ಚಾಲೆಂಜ್; ವಿಡಿಯೋ ವೈರಲ್!

‘ತಮ್ಮ ಸಿನಿಮಾ ಇಷ್ಟವಾಗಲಿಲ್ಲವೆಂದರೆ ನಡು ರಸ್ತೆಯಲ್ಲೇ ನಿಂತುಕೊಂಡು ತಲೆ ಬೋಳಿಸಿಕೊಳ್ಳುತ್ತೇನೆ’ ಎಂದು ಸಿನಿಮಾದ ನಾಯಕಿಯೊಬ್ಬರು ಬಹಿರಂಗವಾಗಿಯೇ ಪ್ರೇಕ್ಷಕರಿಗೆ ಸವಾಲು ಹಾಕಿದ್ದಾರೆ.
 ನಟಿ ಶ್ವೇತಾ ಲಕ್ಷ್ಮಣ್ ಮತ್ತು ಶಿವಕುಮಾರ್ ಕಾಸರಂ
ನಟಿ ಶ್ವೇತಾ ಲಕ್ಷ್ಮಣ್ ಮತ್ತು ಶಿವಕುಮಾರ್ ಕಾಸರಂ
Updated on

ಇತ್ತೀಚಿನ ದಿನಗಳಲ್ಲಿ, ನಟರು ಮತ್ತು ನಿರ್ದೇಶಕರು ತಮ್ಮ ಚಿತ್ರಗಳ ಬಗ್ಗೆ ದಿಟ್ಟ ಹೇಳಿಕೆ ನೀಡುವುದು ಸಾಮಾನ್ಯ. ಆದರೆ ಸಿನಿಮಾದ ನಾಯಕಿಯೊಬ್ಬರು ತಮ್ಮ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

‘ತಮ್ಮ ಸಿನಿಮಾ ಇಷ್ಟವಾಗಲಿಲ್ಲವೆಂದರೆ ನಡು ರಸ್ತೆಯಲ್ಲೇ ನಿಂತುಕೊಂಡು ತಲೆ ಬೋಳಿಸಿಕೊಳ್ಳುತ್ತೇನೆ’ ಎಂದು ಸಿನಿಮಾದ ನಾಯಕಿಯೊಬ್ಬರು ಬಹಿರಂಗವಾಗಿಯೇ ಪ್ರೇಕ್ಷಕರಿಗೆ ಸವಾಲು ಹಾಕಿದ್ದಾರೆ.

ತೆಲುಗಿನ ‘ಸಹಾ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾನಲ್ಲಿ ನಟಿ ಶ್ವೇತಾ ಲಕ್ಷ್ಮಣನ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ನಟಿ ಶ್ವೇತಾ ಲಕ್ಷ್ಮಣನ್, ‘ನಮ್ಮ ಬಳಿ ಹಣ ಇರಲಿಲ್ಲ, ಆದರೆ ಸಿನಿಮಾದ ಮೇಲೆ ನಂಬಿಕೆ ಇತ್ತು. ಎಲ್ಲರೂ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ದಯವಿಟ್ಟು ಸಿನಮಾ ನೋಡಿ’ ಎಂದರು.

 ನಟಿ ಶ್ವೇತಾ ಲಕ್ಷ್ಮಣ್ ಮತ್ತು ಶಿವಕುಮಾರ್ ಕಾಸರಂ
'ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು': ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

‘ಈ ಸಿನಿಮಾ ನಿಮಗೆ ಖಂಡಿತ ನಿರಾಸೆ ಮಾಡುವುದಿಲ್ಲ. ಚಿತ್ರಮಂದಿರಕ್ಕೆ ಹೋಗಿ ನೀವು ಎಂಜಾಯ್ ಮಾಡಲಿಲ್ಲವೆಂದರೆ ನಾನು ಚಾಲೆಂಜ್ ಮಾಡುತ್ತೇನೆ, ಅಮೀರ್ ಪೇಟ್ ಸರ್ಕಲ್​​ನಲ್ಲಿ ನಿಂತು ತಲೆ ಬೋಳಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

‘ತೆಲುಗು ಪ್ರೇಕ್ಷಕರು ಒಳ್ಳೆಯ ಸಿನಿಮಾ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ನಾವು ಒಂದೊಳ್ಳೆ ಕಂಟೆಂಟ್ ತೆಗೆದುಕೊಂಡು ಬಂದಿದ್ದೇವೆ. ಒಳ್ಳೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ ಮತ್ತು ಕಡಿಮೆ ದರಕ್ಕೆ ಟಿಕೆಟ್ ಕೊಡುತ್ತಿದ್ದೇವೆ. ನಮ್ಮ ಸಿನಿಮಾ ಹಿಟ್ ಮಾಡುವುದು ನಿಮ್ಮ ಜವಾಬ್ದಾರಿ’ ಎಂದು ನಟಿ ಶ್ವೇತಾ ಹೇಳಿದ್ದು, ಅವರ ವಿಡಿಯೋ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com