

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶನಿವಾರ ಕೃಷಿ ಸಂಪ್ರದಾಯ, ಗ್ರಾಮೀಣ ಜೀವನ ಮತ್ತು ದನಗಳ ಪ್ರಾಮುಖ್ಯತೆಯನ್ನು ಆಧರಿಸಿದ ಗೋದಾನ್ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆಯಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
ಮನೋಜ್ ಜೋಶಿ, ಉಪಾಸನಾ ಸಿಂಗ್, ರಾಜೇಶ್ ಜೈಸ್ ಮತ್ತು ಸಾಹಿಲ್ ಆನಂದ್ ನಟಿಸಿರುವ ಈ ಚಿತ್ರವನ್ನು ವಿವೇಕ್ ಕುಮಾರ್ ಚೌಧರಿ ಮತ್ತು ಅಮೀತ್ ಪ್ರಜಾಪತಿ ನಿರ್ದೇಶಿಸಿದ್ದಾರೆ.
ಈ ಚಿತ್ರ ಫೆಬ್ರವರಿ 6 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಗೋವು ಧರ್ಮ ಮತ್ತು ನಂಬಿಕೆಯ ವಿಷಯವಲ್ಲ. ಆದರೆ ಭಾರತೀಯ ಸಂಸ್ಕೃತಿ, ಸಮಾಜ ಮತ್ತು ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಗೋದಾನ್‌ನಂತಹ ಚಲನಚಿತ್ರಗಳು ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಸೂಕ್ಷ್ಮತೆಯನ್ನು ಬೆಳೆಸುತ್ತವೆ ಮತ್ತು ಅಂತಹ ಚಲನಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಧಾಮಿ ತಿಳಿಸಿದ್ದಾರೆ.
Advertisement