ಸುದೀಪ್ ಪ್ರೊಡ್ಯೂಸರ್ ಅಲ್ವಾ? ಕೈ-ಬಾಯಿ- ಕಚ್ಚೆ ಮೂರು ಚೆನ್ನಾಗಿರ್ಲಿ ಚಿನ್ನಾ; ಚಂದ್ರಚೂಡ್ ಕಾಂಡೋಮ್ ಸಪ್ಲೈ ಹೇಳಿಕೆಗೆ ಮಂಜು ಟಾಂಗ್
ಬೆಂಗಳೂರು: ಬಿರಿಯಾನಿ ಹಾಕಿಸಿ ಸಿನಿಮಾವನ್ನು ಜನರಿಗೆ ತೋರಿಸುತ್ತಿರುವ ನಿರ್ಮಾಪಕರು ಇದ್ದಾರೆ. ದಯವಿಟ್ಟು ಹೀಗೆಲ್ಲ ಮಾಡಬೇಡಿ, ಇದು ಬಹಳ ತಪ್ಪು ಎಂದು ನಿರ್ಮಾಪಕ ಕೆ ಮಂಜು ಹೇಳಿದ್ದಾರೆ.
ನಿರ್ಮಾಪಕರು ಕಾಂಡೋಮ್ ಸಪ್ಲೈ ಮಾಡುತ್ತಾರೆ ಅನ್ನೋದು ಅವರ ಆತ್ಮ ಗೌರವಕ್ಕೆ ಧಕ್ಕೆಯಾಗಿದ್ದು ಕಿಡಿ ಕಾರುತ್ತಿದ್ದಾರೆ. ಕೆ.ಮಂಜು ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಚಕ್ರವರ್ತಿ ಚಂದ್ರಚೂಡ್ ಎಚ್ಚರಿಕೆ ನೀಡಿದ್ದಾರೆ. "ಅವನು ಬ್ಯಾಡ್ ಅಂತೆ.. ನಾನು ವೆರಿ ಬ್ಯಾಡ್.. ನಾನೇನು ಆರ್ಡಿನರಿ ಅಲ್ಲ" ಎಂದು ಕೆ.ಮಂಜು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ₹5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾಗಿ ಹೇಳಿದ್ದಾರೆ.
ನನ್ನ ಮಕ್ಕಳಿಗೆ ನಾನು ಒಳ್ಳೆಯ ತಂದೆ" "ಕೆ ಮಂಜು ಏನು ಅಂತ ನನಗೆ ಗೊತ್ತು. ನನ್ನ ಮಕ್ಕಳಿಗೆ ಒಳ್ಳೆಯ ತಂದೆ. ಚಿತ್ರರಂಗದಲ್ಲಿ ಕೆ.ಮಂಜುಗೆ ಒಳ್ಳೆಯ ಸಂಬಂಧವಿದೆ. ಚಿತ್ರರಂಗಕ್ಕೆ ಒಳ್ಳೆಯ ನಿರ್ಮಾಪಕ. ಅವನೇನು ಅಂತ ಅವನ ಇತಿಹಾಸವನ್ನು ತೆಗೆದುಕೊಳ್ಳಿ. ಅದು ಅವನ ವೈಯಕ್ತಿಕ ಕೇಳುವುದಕ್ಕೆ ಹೋಗುವುದಿಲ್ಲ. ಆ ಮೇಲೆ ಅವನ ಮೇಲೆ ಹಗುರವಾಗಿ ಏನಾದರೂ ಮಾತಾಡಿದ್ದೇವಾ? ಪರ್ಸನಲ್ ಆಗಿ ಏನಾದರೂ ಮಾತಾಡಿದ್ದರೆ. ಯಾಕೆ ಎಂದು ಕೇಳುವುದರಲ್ಲಿ ಅರ್ಥವಿದೆ. ನಮಗೆ ಬೇಕಿಲ್ಲದ ವಿಷಯ. ನಮ್ಮ ಚಿತ್ರೋದ್ಯಮದ ಬಗ್ಗೆ ಮಾತಾಡಿದ್ದಕ್ಕೆ ಮಾತಾಡಿದ್ದೇನೆ." ಎಂದು ಕೆ.ಮಂಜು ಆಕ್ರೋಶ ಹೊರ ಹಾಕಿದ್ದಾರೆ.
ಯಾವ ಪ್ರೊಡ್ಯೂಸರ್ ಇವತ್ತು ದುಡ್ಡು ತೆಗೆದುಕೊಂಡು ಹೋಗಿದ್ದಾರೆ. ಅದು ನಮ್ಮ ಹಣೆಬರಹ. ನಾವು ಯಾರಿಗೂ ಏನನ್ನೂ ಹೇಳುವುದಕ್ಕೆ ಹೋಗಿಲ್ಲ. ನಮ್ಮನ್ನು ಯಾರಾದರೂ ಬಂದು ಸಿನಿಮಾ ಮಾಡಿ ಅಂತ ಕೇಳಿದ್ರಾ? ಇಲ್ಲ ಖಂಡಿತಾ ಯಾರೂ ಕೇಳಿಲ್ಲ. ನಿರ್ಮಾಪಕರಾಗಿ ನಾನು ಎತ್ತೆಚ್ಚಿಕೊಳ್ಳುವುದು ನಮ್ಮ ಧರ್ಮ. ನಾವು ಮತ್ತೆ ಬೇರೆ ಯಾರಿಗಾದರೂ ಮೋಸ ಮಾಡಿದ್ದೇವಾ? ಟೆಕ್ನಿಷಿಯನ್‌ಗೆ ಕಾಸು ಕೊಟ್ಟಿಲ್ಲ ಅನ್ನೋದನ್ನು ಇವನು ನೋಡಿದ್ದಾನಾ? ಟೆಕ್ನಿಷಿಯನ್ 50 ಸಾವಿರ ಕೊಡುವುದಕ್ಕೆ ಹೋಗಿರೋದು 25 ಸಾವಿರ ಕೊಟ್ಟಿದ್ದಾರಲ್ಲ. ಅದೇ ಆ ನಿರ್ಮಾಪಕನಿಗೆ 25 ರೂಪಾಯಿ ಬಂದಿರೋದಿಲ್ಲಎಂದು ಕಿಡಿಕಾರಿದ್ದಾರೆ.
ನಾನು ಕನ್ನಡ ನಿರ್ಮಾಪಕರಿಗೆ ಹೇಳಿಲ್ಲ. ತಮಿಳು ನಿರ್ಮಾಪಕರಿಗೆ ಹೇಳಿದ್ದು ಅಂತಾನೆ. ತಮಿಳು ನಿರ್ಮಾಪಕರೂ ನಿರ್ಮಾಪಕರೇ ಅಲ್ಲವೇ? ಇವತ್ತು ಪ್ಯಾನ್ ಇಂಡಿಯಾ ಸಿನಿಮಾ ಅಂತಿರುವಾಗ ತಮಿಳು, ತೆಲುಗು ಮಲಯಾಳಂ ಅಂತ ಯಾಕೆ ಬರುತ್ತೆ? ನಾವು ನಾಡು, ನುಡಿ ಭಾಷೆ ವಿಚಾರಕ್ಕೆ ಬಂದಾಗ ನಾವು ಕನ್ನಡಿಗರು ಅದರಲ್ಲಿ ಎರಡು ಮಾತಿಲ್ಲ.
ಕೊಬ್ಬರಿ ಮಂಜಂಗೆ ಕನ್ನಡ ಬರಲ್ಲ, ಇಂಗ್ಲಿಷ್ ಬರಲ್ಲ ಅಂತ ಹೇಳಿದ್ದಾನೆ. ಹೌದು ನಾನು ವಿದ್ಯಾವಂತ ಅಲ್ಲ. ನಾನು ವಿದ್ಯಾವಂತ ಆಗಿದ್ದರೆ, ನಿನ್ನ ಹಾಗೆ ಕೂತ್ಕೊಂಡು, ಪೆನ್ನು ತೆಗೆದುಕೊಂಡು ಯಾರಿಗೋ ಯಾಮಾರಿಸಿ ದುಡ್ಡು ಕಿತ್ತುಕೊಳ್ಳುತ್ತಿದ್ದೆ. ನಾನು ವಿದ್ಯಾವಂತ ಅಲ್ಲ. ನಾನೊಬ್ಬ ರೈತನ ಮಗ. ರೈತನ ಮಗನಾಗಿ ಬಂದು ನಾನು ಎಲ್ಲಿದ್ದೀನಿ ಇವತ್ತು. ನಿನ್ನನ್ನು ಎಲ್ಲಿ ಇಟ್ಟಿದ್ದಾನೆ? ನಾನು ವೀರ, ಶೂರ ಅಂದರೆ ಏನು.. ವಿವೇಕ ಇರಬೇಕು. ಅವಿವೇಕಿತರ ಮಾತಾಡಬಾರದು." ಎಂದು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಕೆ ಮಂಜು ಕಿಡಿಕಾರಿದ್ದಾರೆ.
ಅವನು ಬ್ಯಾಡ್ ಅಂತೆ.. ನಾನು ವೆರಿ ಬ್ಯಾಡ್.. ನಾನೇನು ಆರ್ಡಿನರಿ ಅಲ್ಲ. ಬಾಷಾ ಪಿಕ್ಚರ್ ನೋಡವ್ನಾ? ಕೋಟಿಗೊಬ್ಬ ನೋಡವ್ನಾ? ಅದರಲ್ಲಿ ಕೆ.ಮಂಜುದು ಫ್ಲ್ಯಾಶ್ ಬ್ಯಾಕ್ ಇದೆ. ನಾನು ಚಿತ್ರರಂಗಕ್ಕೆ ಬಂದಾಗ ವಿಷ್ಣುವರ್ಧನ್ ಅವರು ಒಂದೇ ಮಾತು ಹೇಳಿದ್ದು ಕೈ, ಬಾಯಿ ಕಚ್ಚೆ ಚೆನ್ನಾಗಿರಲಿ ಚಿನ್ನಾ. ಇದು ಮೂರು ಚೆನ್ನಾಗಿದ್ರೆ ಜೀವನ ಸರಿ ಇರುತ್ತೆ ಎಂದಿದ್ರು. ನಾನು ಸರಿಯಾಗಿದ್ದೇನೆ. ನೀನು ಬ್ಯಾಡ್ ಆದರೆ, ಐಯಾಮ್ ಯುವರ್ ಡ್ಯಾಡ್ ಎಂದಿದ್ದಾರೆ.

