ಇದು ಯಾವ ಪ್ರಾಣಿ ಪರಚಿರಬಹುದು? ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ ಗೌಡ, ಚೈತ್ರಾ ಪೋಸ್ಟ್‌ ವಾರ್‌!

ಅಶ್ವಿನಿ ಗೌಡ, ತಮ್ಮ ಕೈ ಮೇಲಿರುವ ಗಾಯದ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ‘ಇದು ಯಾವ ಪ್ರಾಣಿ ಪರಚಿರಬಹುದು? ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು.
Chitra Kundapura, Ashwini gowda
ಚೈತ್ರಾ ಕುಂದಾಪುರ, ಅಶ್ವಿನಿ ಗೌಡ
Updated on

ಬಿಗ್ ಬಾಸ್ ಸೀಸನ್ 12 ಮುಗಿದ್ದರೂ ಸ್ಪರ್ಧಿಗಳ ನಡುವಿನ ವಾರ್ ಮಾತ್ರ ನಿಂತಿಲ್ಲ. ಮಾಧ್ಯಮಗಳಲ್ಲಿ ಟಾಕ್ ವಾರ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವಾರ್ ಮುಂದುವರೆದಿದೆ. ಶೋನಲ್ಲಿ ವೈಲ್ಡ್​​ ಕಾರ್ಡ್ ಎಂಟ್ರಿ ನೀಡಿದ್ದ ಚೈತ್ರಾ ಹಾಗೂ ಅಶ್ವಿನಿ ನಡುವೆ ದೊಡ್ಡದಾದ ಜಗಳ ನಡೆದಿತ್ತು. ಇದು ಇದೀಗ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾರ್ದನಿಸಿದೆ. ಅಶ್ವಿನಿ ಗೌಡ ಮಾಡಿರುವ ಪೋಸ್ಟ್ ನಿಂದ, ಚೈತ್ರಾ ಕುಂದಾಪುರ ಕೆರಳಿ ಕೆಂಡವಾಗಿದ್ದಾರೆ.

ಅಂದಹಾಗೆ ಅಶ್ವಿನಿ ಗೌಡ, ತಮ್ಮ ಕೈ ಮೇಲಿರುವ ಗಾಯದ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ‘ಇದು ಯಾವ ಪ್ರಾಣಿ ಪರಚಿರಬಹುದು? ಸರಿಯಾದ ಉತ್ತರ ಹಾಗೂ ಉತ್ತಮ ಶೀರ್ಷಿಕೆ ನೀಡಿದವರಿಗೆ ಸೂಕ್ತ ಬಹುಮಾನವಿದೆ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು.

ಅಲ್ಲದೆ ಮಾಧ್ಯಮಗಳ ಮುಂದೆಯೂ ಮಾತನಾಡಿ, "ಚೈತ್ರಾ ಕುಂದಾಪುರ ನನಗೆ ಟಾಸ್ಕ್ ವೇಳೆ ಉಗುರಿನಿಂದ ಪರಚಿದ್ದರು ಎಂದು ಆರೋಪಿಸಿದ್ದಾರೆ.

ಅಶ್ವಿನಿ ಗೌಡ ಅವರ ಪೋಸ್ಟ್​ಗೆ ಚೈತ್ರಾ ಕುಂದಾಪುರ ಕೂಡ ತಿರುಗೇಟು ನೀಡಿದ್ದಾರೆ. ಕ್ಷಮಿಸಿ, ಇದನ್ನೆಲ್ಲಾ ಪ್ರಚಾರ ಮಾಡಲು ಮತ್ತು ಸಿಂಪತಿ ಗಿಟ್ಟಿಸಿಕೊಳ್ಳಲು ನನ್ನ ಬಳಿ ಪಿ.ಆರ್ (PR) ಟೀಮ್ ಇಲ್ಲ ಎಂದಿದ್ದಾರೆ.

ಘಟನೆಯ ಬಗ್ಗೆ ವಿವರಿಸಿರುವ ಚೈತ್ರಾ, ಆಟದ ವೇಳೆ ನನಗಿಂತ ಹೆಚ್ಚು ತೂಕವಿರುವ ವ್ಯಕ್ತಿ ನನ್ನ ಹೊಟ್ಟೆಯ ಮೇಲೆ ಕುಳಿತಿದ್ದರು. ಆ ಸಮಯದಲ್ಲಿ ನಾನು ಪೀರಿಯಡ್ಸ್ (ಮುಟ್ಟು) ಕೂಡ ಆಗಿದ್ದೆ. ಆದರೂ ಆಟ ಆಡಿದೆ. ನನ್ನ ಕತ್ತನ್ನು ಟ್ವಿಸ್ಟ್ ಮಾಡಲಾಗಿತ್ತು. ಟಿಂಚರ್ ಹಾಕಿದರೂ ನೋವು ಕಡಿಮೆ ಆಗಿರಲಿಲ್ಲ. ನನ್ನ ದೇಹದ ಮೇಲೂ ಕೂಡ ಉಗುರಿನ ಗುರುತುಗಳಿವೆ. ನನಗೂ ನೋವಾಗಿದೆ. ಆದರೆ ನನಗೆ ಆಟವನ್ನು ಆಟವಾಗಿಯೇ ನೋಡುವ ಮನಸ್ಥಿತಿ ಇದೆ ಎಂದು ತಿರುಗೇಟು ನೀಡಿದ್ದಾರೆ. ಚೈತ್ರಾ ಕುಂದಾಪುರ ಅಭಿಮಾನಿಗಳು ಕೂಡಾ ಅಶ್ವಿನಿ ಗೌಡಗೆ ಪೋಸ್ಟ್ ಮೂಲಕ ತಿರುಗೇಟು ನೀಡುತ್ತಿದ್ದಾರೆ.

Chitra Kundapura, Ashwini gowda
BBK12 ವೋಟ್​​​ ನಂಬರ್ ಆಚೆ ಬಂದರೆ ನಾನೇ ವಿನ್ನರ್: ಅಶ್ವಿನಿ ಗೌಡ ಸವಾಲು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com