

ಚೆನ್ನೈ: ಬಿಗ್ ಬಾಸ್ ಕನ್ನಡ ಸೀಸನ್ 12 ನಿರ್ಣಾಯಕ ಘಟ್ಟ ತಲುಪಿದ್ದು, ಟಿಕೆಟ್ ಟು ಫಿನಾಲೆ ಹಂತ ಆರಂಭವಾಗಿದೆ. ಅಂತೆಯೇ ಅತ್ತ ತಮಿಳು ಬಿಗ್ ಬಾಸ್ ಸೀಸನ್ 9 ಕೂಡ ನಿರ್ಣಾಯಕ ಹಂತದತ್ತ ಸಾಗಿರುವಂತೆಯೇ ಇಬ್ಬರು ಸ್ಪರ್ಧಿಗಳು ತಮ್ಮ ಪ್ರಮಾದದಿಂದಾಗಿ ರೆಡ್ ಕಾರ್ಡ್ ಪಡೆದು ಶೋನಿಂದಲೇ ಹೊರದಬ್ಬಿಸಿಕೊಂಡಿದ್ದಾರೆ.
ನಟ ವಿಜಯ್ ಸೇತುಪತಿ ನಡೆಸಿಕೊಡುವ ಬಿಗ್ ಬಾಸ್ ತಮಿಳು ಸೀಸನ್ 9 ನಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಮಹಿಳಾ ಸ್ಪರ್ಧಿ ಮೇಲೆ ಹಲ್ಲೆ ಮಾಡಿ, ಕಾಲಿನಿಂದ ಒದ್ದಿದ್ದ ಇಬ್ಬರು ಸ್ಪರ್ಧಿಗಳನ್ನು ರೆಡ್ ಕಾರ್ಡ್ ಕೊಟ್ಟು ಶೋನಿಂದಲೇ ಹೊರದಬ್ಬಲಾಗಿದೆ.
ಇಬ್ಬರು ಸ್ಪರ್ಧಿಗಳಿಗೆ ಏಕಕಾಲಕ್ಕೆ ರೆಡ್ ಕಾರ್ಡ್ ನೀಡಲಾಗಿದ್ದು, ಇದನ್ನು ನೋಡಿದ ಪ್ರೇಕ್ಷಕರು ಐಪಿಎಲ್ ಟ್ರೋಫಿ ಗೆದ್ದಷ್ಟೇ ಸಂಭ್ರಮಾಚರಣೆ ಮಾಡಿದ್ದಾರೆ.
ತಮಿಳು ಬಿಗ್ ಬಾಸ್ ಸೀಸನ್ 9 ಅಂತಿಮ ಹಂತದಲ್ಲಿದ್ದು, 'ಟಿಕೆಟ್ ಟು ಫಿನಾಲೆ'ಯ ಫಿಸಿಕಲ್ ಟಾಸ್ಕ್‌ನಲ್ಲಿ ಇಬ್ಬರು ಸ್ಪರ್ಧಿಗಳು ನಡೆದುಕೊಂಡ ಅಮಾನವೀಯ ವರ್ತನೆ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಶನಿವಾರದ ಎಪಿಸೋಡ್ ನಲ್ಲಿ ಕಾರ್ಯಕ್ರಮ ನಿರೂಪಕ ನಟ ವಿಜಯ್ ಸೇತುಪತಿ ಆ ಇಬ್ಬರೂ ಸ್ಪರ್ಧಿಗಳಾದ ವಿಜೆ ಪಾರು (ಪಾರ್ವತಿ) ಮತ್ತು ಕಮರುದ್ದೀನ್ ಅವರನ್ನು ರೆಡ್ ಕಾರ್ಡ್ ತೋರಿಸಿ ಶೋನಿಂದ ಹೊರದಬ್ಬಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಬಿಗ್ ಬಾಸ್ ತಮಿಳು ಸ್ಪರ್ಧಿಗಳಾದ ವಿಜೆ ಪಾರು (ಪಾರ್ವತಿ) ಮತ್ತು ಕಮರುದ್ದೀನ್ ಅವರು ಕಾರ್ ಟಾಸ್ಕ್ ಒಂದರಲ್ಲಿ ಸಹ-ಸ್ಪರ್ಧಿ ಸ್ಯಾಂಡ್ರಾ ಆಮಿ ಅವರೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದರು. ಟಾಸ್ಕ್ ವೇಳೆ ಕಾರಿನಲ್ಲಿದ್ದ ಸಾಂಡ್ರಾ ಅವರನ್ನು ಕಾಲಿನಿಂದ ಒದ್ದು ಹಲ್ಲೆ ಮಾಡಿ ಹೊರದಬ್ಬಿದ್ದರು. ಯಾರು ಎಷ್ಟು ಹೊತ್ತು ಕಾರ್ ಒಳಗಡೆ ಕೂರುತ್ತಾರೆ ಎನ್ನೋದು ಈ ಟಾಸ್ಕ್ ಆಗಿತ್ತು.
ಆದರೆ ವಿಜೆ ಪಾರು (ಪಾರ್ವತಿ) ಮತ್ತು ಕಮರುದ್ದೀನ್ ಸಾಂಡ್ರಾ ಅವರನ್ನು ಅತ್ಯಂತ ಕ್ರೂರವಾಗಿ ಹೊರದಬ್ಬಿದ್ದರು. ಇದರಿಂದ ಸ್ಯಾಂಡ್ರಾಗೆ ತೀವ್ರವಾಗಿ ಪ್ಯಾನಿಕ್ ಅಟ್ಯಾಕ್ (Panic Attack) ಆಗಿದೆ. ಆ ಸ್ಥಳದಲ್ಲಿ ಅವರು ಕುಸಿದು ಬಿದ್ದರು. ಮತ್ತೆ ತನ್ನ ಮೇಲೆ ಅಟ್ಯಾಕ್ ಮಾಡ್ತಾರೆ ಎಂಬ ಭಯಕ್ಕೆ ಅವರು ಬಿಗ್ ಬಾಸ್ ಶೋನಿಂದ ಕಳಿಸಿಕೊಡಿ ಎಂದು ಮನವಿ ಮಾಡಿದ್ದರು, ಇದು ವೀಕ್ಷಕರಿಗೆ ಬೇಸರ ಉಂಟು ಮಾಡಿತ್ತು.
ಬಿದ್ದು ನರಳಾಡಿದ ಸಾಂಡ್ರಾ
ಕಾರಿನಿಂದ ಹೊರ ಬಿದ್ದ ಸಾಂಡ್ರಾ ಬಿದ್ದು ಗಾಯಗೊಂಡು ನರಳಾಡುತ್ತಾರೆ. ಸಾಂಡ್ರಾ ಕಾರಿನಿಂದ ಬಿದ್ದಾಗ, ತಲೆಗೆ ತೀವ್ರ ಗಾಯವಾಯಿತು. ಸಾಂಡ್ರಾ ಕಾರಿನಿಂದ ಬಿದ್ದಾಗ, ತಲೆಗೆ ತೀವ್ರ ಗಾಯವಾಯಿತು. ಕೂಡಲೇ ವಿಕಲ್ಸ್ ವಿಕ್ರಮ್, ಶಬರಿನಾಥನ್ ಮತ್ತು ಗಾನಾ ವಿನೋದ್ ಪ್ರಥಮ ಚಿಕಿತ್ಸೆ ನೀಡಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ, ಅವರು ಚೇತರಿಸಿಕೊಳ್ಳಲಿಲ್ಲ.
ತಕ್ಷಣ ಮನೆಗೆ ಆಗಮಿಸಿದ ವೈದ್ಯಕೀಯ ತಂಡವು ಸಾಂಡ್ರಾಗೆ ಅಗತ್ಯ ಚಿಕಿತ್ಸೆ ನೀಡಿತು. ಪರಿಣಾಮವಾಗಿ, ಅವರು ಚೇತರಿಸಿಕೊಂಡರು. ಸಹಾಯ ಮಾಡಲು ಧಾವಿಸಿದ ಮೂವರಿಗೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆ ಅದಾಗನಿಂದ ಮನೆ ಹೊರಗೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಇಬ್ಬರನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಎಲ್ಲರು ಪಟ್ಟು ಹಿಡಿದ್ದರು.
ಸಾರ್ವಜನಿಕರ ಆಕ್ರೋಶ
ಈ ಟಾಸ್ಕ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಬಿಗ್ ಬಾಸ್ ಹಾಗೂ ನಿರೂಪಕ ವಿಜಯ ಸೇತುಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ಟಿಆರ್‌ಪಿಗಾಗಿ ಇಂತಹ ಹಿಂಸಾತ್ಮಕ ಟಾಸ್ಕ್ ಆಡಿಸೋದು, ಅದನ್ನು ಪ್ರೋತ್ಸಾಹಿಸುವುದು ಅಕ್ಷಮ್ಯ ಅಪರಾಧ" ಎಂದು ಹೇಳಿದರು. ಸ್ಪರ್ಧಿಗಳ ಸುರಕ್ಷತೆ ಬಗ್ಗೆ ವಾಹಿನಿ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪ ಮಾಡಲಾಗಿತ್ತು.
ವಿಜಯ್ ಸೇತುಪತಿ ಆಕ್ರೋಶ, ಸ್ಪರ್ಧಿಗಳಿಗೆ ರೆಡ್ ಕಾರ್ಡ್
ಇನ್ನು ಇದೇ ವಿಚಾರವಾಗಿ ವೀಕೆಂಡ್ ಎಪಿಸೋಡ್ ನಲ್ಲಿ ನಟ ವಿಜಯ್ ಸೇತುಪತಿ ಸ್ಪರ್ಧಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. "ಯಾವುದೇ ಮನರಂಜನೆಯು ಸ್ಪರ್ಧಿಯ ಸುರಕ್ಷತೆಗಿಂತ ದೊಡ್ಡದಲ್ಲ" ಎಂದು ಹೇಳಿದರು. ಅಲ್ಲದೆ ಟಾಸ್ಕ್‌ನ ನಿಯಮ ಉಲ್ಲಂಘಿಸಿದ ಕಮರುದ್ದೀನ್, ವಿಜೆ ಪಾರು ಇಬ್ಬರಿಗೂ 'ರೆಡ್ ಕಾರ್ಡ್' ನೀಡಿ ಈ ಸ್ಪರ್ಧೆಯಿಂದ ತಕ್ಷಣವೇ ಹೊರಹಾಕಿದ್ದಾರೆ. ನಿರೂಪಕ ವಿಜಯ್ ಸೇತುಪತಿ ಕೈಗೊಂಡ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ.
ಪ್ರಶಸ್ತಿ ಗೆಲ್ಲೋದಿರ್ಲಿ.. ಮಾಡಿರೋ ಷೋಗೆ ಹಣ ಕೂಡ ಸಿಗಲ್ಲ
ಇನ್ನು ಪ್ರಶಸ್ತಿ ಗೆಲ್ಲಬೇಕು ಎಂದು ಶೋಗೆ ಬಂದಿದ್ದ ವಿಜೆ ಪಾರು (ಪಾರ್ವತಿ) ಮತ್ತು ಕಮರುದ್ದೀನ್ ಈ ರೆಡ್ ಕಾರ್ಡ್ ಪಡೆಯುವ ಮೂಲಕ ಪ್ರಶಸ್ತಿ ಗೆಲ್ಲೋದಿರ್ಲಿ.. ಮಾಡಿರೋ ಷೋಗೆ ಹಣ ಕೂಡ ಸಿಗದಂತಾಗಿದೆ. 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರೂ ಕೂಡ ಯಾವುದೇ ಸಂಭಾವನೆ ಕೊಡೋದಿಲ್ಲ. ಅಲ್ಲದೆ ಮತ್ತೆ ಬಿಗ್ ಬಾಸ್ ಮನೆಯೊಳಗಡೆ ಕರೆಯೋದಿಲ್ಲ. ಫಿನಾಲೆ ವೇಳೆಯೂ ಇವರಿಗೆ ಪ್ರವೇಶವಿಲ್ಲ. ಬಿಗ್ ಬಾಸ್ ಶೋನ ಯಾವುದೇ ಆಚರಣೆಯಲ್ಲಿ ಭಾಗಿ ಆಗುವಂತಿಲ್ಲ. ಯಾವುದೇ ಸ್ಪಾನ್ಸರ್ ಬಹುಮಾನ ಕೂಡ ಸಿಗೋದಿಲ್ಲ.
ಪ್ರೇಕ್ಷಕರ ಸಂಭ್ರಮ
ಇವರಿಬ್ಬರಿಗೂ ರೆಡ್ ಕಾರ್ಡ್ ಸಿಕ್ಕಿದ್ದು ನೋಡಿ ಮನೆಯಲ್ಲಿದ್ದವರು, ಹೊರಗಡೆಯವರು ಕೂಡ ಖುಷಿಪಟ್ಟಿದ್ದಾರೆ. ಚೆನ್ನೈ ಐಪಿಎಲ್ ಗೆದ್ದಷ್ಟು ಸಂಭ್ರಮಿಸಿದ್ದಾರೆ. ಪಾರು ಮತ್ತು ಕಮರುದ್ದೀನ್ ಕೃತ್ಯ ವೀಕ್ಷಕರಲ್ಲಿ ಅಷ್ಟು ಮಟ್ಟಿಗೆ ಆಕ್ರೋಶ ಉಂಟು ಮಾಡಿತ್ತು. ಪಾರು ಅವರಿಂದ ಕಮರುದ್ದೀನ್ ಆಟ ಹಾಳಾಗಿದೆ ಎಂದು ವೀಕ್ಷಕರು, ಸ್ಪರ್ಧಿಗಳು ಕೂಡ ಹೇಳಿದ್ದಾರೆ.
ಕಾಲಿಗೆ ಬಿದ್ದು ಕ್ಷಮೆ ಕೇಳಿದ ಕಮರುದ್ದೀನ್
ಇನ್ನು ರೆಡ್ ಕಾರ್ಡ್ ಸಿಕ್ಕಿದಕೂಡಲೇ ಸ್ಪರ್ಧಿಗಳ ಜೊತೆ ಪಾರು ಜಗಳ ಆಡಿದ್ದಾರೆ. ಆಮೇಲೆ ಸ್ಯಾಂಡ್ರಾ ಅವರಿಗೆ ಪಾರು ಕ್ಷಮೆ ಕೇಳಿ, ದೊಡ್ಮನೆಯಿಂದ ಹೊರಟಿದ್ದಾರೆ. ಕಮರುದ್ದೀನ್ ಅವರು ಸ್ಯಾಂಡ್ರಾ ಕಾಲಿಗೆ ಬಿದ್ದು ಕ್ಷಮೆ ಕೇಳಿ ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ನೀನು ಯಾರ ಜೊತೆ ಬೇಕಿದ್ರೂ ಸ್ನೇಹ ಮಾಡು, ಆದರೆ ಪಾರು ಜೊತೆ ಸ್ನೇಹ ಮಾಡಬೇಡ ಎಂದು ಸಹಸ್ಪರ್ಧಿಗಳು ಬುದ್ಧಿ ಹೇಳಿ ಕಳಿಸಿದ್ದಾರೆ.
Advertisement