

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ನಿರ್ಣಾಯಕ ಘಟ್ಟ ತಲುಪಿದ್ದು, ಎಲ್ಲ ಆಟಗಾರರೂ ಪ್ರಶಸ್ತಿಗಾಗಿ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಗಿಲ್ಲಿನಟ ತಮ್ಮ ಕ್ರಮಗಳಿಂದಾಗಿ ಮನೆಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದು, ಇದೇ ವಿಚಾರವಾಗಿ ನಟ ಕಿಚ್ಚಾ ಸುದೀಪ್ ಕೂಡ ಮಾತನಾಡಿದ್ದಾರೆ.
ಹೌದು.. ಈ ಬಾರಿ ಗಿಲ್ಲಿ ನಟ ಅವರೇ ಬಿಗ್ ಬಾಸ್ (Bigg Boss Kannada Season 12) ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಬಹುತೇಕರಿಗೆ ಇದೆ. ಆ ಅಭಿಪ್ರಾಯಕ್ಕೆ ತಕ್ಕಂತೆಯೇ ಗಿಲ್ಲಿ ಕೂಡ ಆಟ ಆಡುತ್ತಿದ್ದಾರೆ.
ಅನೇಕ ಸೆಲೆಬ್ರಿಟಿಗಳು ಕೂಡ ಈಗಾಗಲೇ ಗಿಲ್ಲಿ (Gilli Nata) ಅವರ ಆಟವನ್ನು ಮೆಚ್ಚಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೂ ಗಿಲ್ಲಿ ಆಟ ಇಷ್ಟ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ.
ಈ ನಡುವೆ ಗಿಲ್ಲಿ ಆಟದ ಬಗ್ಗೆ ನಟ ಕಿಚ್ಚಾ ಸುದೀಪ್ ಕೂಡ ಮಾತನಾಡಿದ್ದು ಅವರ ಮಾತುಗಳು ಈ ಎಲ್ಲ ಊಹಾಪೋಹಗಳಿಗೆ ಇಂಬು ನೀಡುವಂತಿದೆ.
ನಿನ್ನೆ ಅಂದರೆ ಶನಿವಾರದ (ಜನವರಿ 3) ಬಿಗ್ ಬಾಸ್ ಸಂಚಿಕೆಯಲ್ಲಿ ಈ ರೀತಿಯ ಮಾತುಕತೆ ನಡೆದಿದೆ. ಕಳೆದ ವಾರ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದರು. ಗಿಲ್ಲಿ ಕ್ಯಾಪ್ಟೆನ್ಸಿ ಸರಿ ಇರಲಿಲ್ಲ ಎಂದು ಇಡೀ ಮನೆಯ ಸದಸ್ಯರು ಆರೋಪ ಮಾಡಿದ್ದರು. ಆದರೆ ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ಇದಕ್ಕೆ ಬೇರೆಯದೇ ಆಯಾಮ ಬಂತು.
ಗಿಲ್ಲಿ ಹೇಳುವುದಕ್ಕೂ ಮುನ್ನವೇ ಎಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಕೆಲಸವನ್ನು ಮಾಡಿ ಮುಗಿಸಿದ್ದರು. ಅದರಿಂದ ಗಿಲ್ಲಿಗೆ ಪ್ಲಸ್ ಆಯಿತು. ಬೇರೆ ಎಲ್ಲರಿಗಿಂತ ಗಿಲ್ಲಿ ಅವರೇ ಬಿಗ್ ಬಾಸ್ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಸುದೀಪ್ ಒತ್ತಿ ಹೇಳಿದರು.
ಕಿಚ್ಚನ ಮುಂದೆ ಗಿಲ್ಲಿ ಕುರಿತು ಮನೆ ಮಂದಿ ದೂರುಗಳ ಸರಮಾಲೆ
ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಬಿಗ್‌ಬಾಸ್ ಮನೇಲಿ ತಮ್ಮ ಅಸ್ತಿತ್ವಕ್ಕಾಗಿ ಜೋರು ಜಗಳ, ಕದನ, ಕಿತ್ತಾಟ ಸಹಜವಾಗಿಯೇ ತಾರಕಕ್ಕೇರಿವೆ. ಅದ್ರಲ್ಲೂ ಗಿಲ್ಲಿ ಹಾಗೂ ಅಶ್ವಿನಿ ಹಾವು ಮುಂಗುಸಿಯಂತೆ ಕಿತ್ತಾಟಕ್ಕಿಳಿದಿದ್ದಾರೆ. ಹಾಗಾಗಿ ರೋಚಕ ವಾತಾವರಣವೇ ಸೃಷ್ಟಿಯಾಗಿದೆ. ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಹಲವಾರು ವಿಚಾರಗಳು ಚರ್ಚೆಯ ವಿಷಯವಾಗಿವೆ.
ಆದ್ರಲ್ಲೂ ಗಿಲ್ಲಿಯ ನಿಭಾಯಿಸಿದ ಕ್ಯಾಪ್ಟನ್ಸಿ ಮೇಲೆ ಎಲ್ಲರೂ ದೂರಿದ್ದಾರೆ. ಕಳೆದ ವಾರ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಗಿಲ್ಲಿ ನಟನ ಮೇಲೆ ಮನೆಮಂದಿ ಸಾಲು ಸಾಲು ಆರೋಪ ಹೊರಿಸಿದ್ದಾರೆ. ಕಿಚ್ಚ ಸುದೀಪ್ ಮುಂದೆ ಬಿಗ್‌ಬಾಸ್ ಸ್ಪರ್ಧಿಗಳು ಗಿಲ್ಲಿ ಕ್ಯಾಪ್ಟನ್ ಆದ ವಾರ ಮನೆ ಹೇಗಿತ್ತು ಎನ್ನುವ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಗಿಲ್ಲಿ ಬೇಜವಾಬ್ದಾರಿ ಎಂದೂ, ಅಹಂ ತೋರಿಸಿದ್ದಾರೆ ಎಂದು, ಪಕ್ಷಪಾತ ಮಾಡಿದ್ದಾರೆ ಎಂದು ಹೀಗೆ ಒಬ್ಬರ ಬಳಿಕ ಒಬ್ಬರು ದೂರುಗಳನ್ನು ಹೇಳಿದ್ದಾರೆ.
ಗಿಲ್ಲಿಯಷ್ಟ ಚೆನ್ನಾಗಿ ಬೇರಾರು ಅರ್ಥ ಮಾಡಿಕೊಂಡಿಲ್ಲ
ಅಂತೆಯೇ ಈ ಹಿಂದೆ ಪ್ರಥಮ್ ಮತ್ತು ಹನುಮಂತ ಅವರು ‘ಬಿಗ್ ಬಾಸ್’ ಟ್ರೋಫಿ ಗೆದ್ದಿದ್ದರು. ಈಗ ಗಿಲ್ಲಿ ನಟ ಆಡುತ್ತಿರುವ ಆಟದಲ್ಲಿ ಕೂಡ ಪ್ರಥಮ್ ಮತ್ತು ಹನುಮಂತ ಅವರ ಛಾಯೆ ಕಾಣುತ್ತಿದೆ. ಅದನ್ನು ಕಿಚ್ಚ ಸುದೀಪ್ ಅವರು ಗಮನಿಸಿದ್ದಾರೆ. ‘ಗಿಲ್ಲಿ ನಟ ಬಿಗ್ ಬಾಸ್ ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ಲ’ ಎಂದು ಸುದೀಪ್ ಅವರು ಹೇಳಿದ್ದಾರೆ.
ಗಿಲ್ಲಿ ನಟ ಅವರು ಈ ಹಿಂದಿನ ಎಲ್ಲ ಬಿಗ್ ಬಾಸ್ ಸೀಸನ್ಗಳನ್ನು ನೋಡಿಕೊಂಡು ಬಂದಿದ್ದಾರೆ. ಪ್ರಥಮ್ ಮತ್ತು ಹನುಮಂತ ವಿನ್ ಆದ ಸೀಸನ್ಗಳನ್ನು ಹೆಚ್ಚು ಗಮನಿಸಿಕೊಂಡು ಬಂದಿದ್ದಾರೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ತಿಳಿದುಕೊಂಡು ಬಂದಿದ್ದಾರೆ. ಈ ಎಲ್ಲ ವಿಷಯವನ್ನು ಅವರು ಸುದೀಪ್ ಎದುರು ಬಾಯಿಬಿಟ್ಟಿದ್ದಾರೆ.
ಹಾಕಿದ್ದು ಬನಿಯನ್.. ಬಾಳ್ತಾ ಇರೋದು ರಾಜನ ಬಾಳು
ಇದೇ ವೇಳೆ ನಟ ಸುದೀಪ್ ಗಿಲ್ಲಿ ನಟ ಅವರ ಆಟದ ವೈಖರಿ ಕುರಿತು ಮಾತನಾಡಿ 'ಗಿಲ್ಲಿ ಹಾಕಿರುವುದು ಬನಿಯನ್ ಇರಬಹುದು. ಆದರೆ ಬಾಳುತ್ತಿರುವ ಬಾಳು ರಾಜಂದು'.. ಗಿಲ್ಲಿ ಪಾತ್ರದಲ್ಲಿ ಒಂದು ಸ್ವಲ್ಪ ಹನುಮಂತ, ಒಂದು ಸ್ವಲ್ಪ ಪ್ರಥಮ್ ಇದ್ದಾರೆ. ಎಷ್ಟು ಸಲ ನಾನು ಈ ಸುಳಿವನ್ನು ಪರೋಕ್ಷವಾಗಿ ಕೊಟ್ಟಿದ್ದೆ. ಗಿಲ್ಲಿ ರೀತಿ ತಯಾರಿ ಮಾಡಿಕೊಂಡು ಬರುವುದು ಖಂಡಿತಾ ತಪ್ಪಲ್ಲ. ಎಲ್ಲ ಸೀಸನ್ ನೋಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
Advertisement