'ಕಾಜಾಣ' ಮೂಲಕ ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ನಟಿ ಐಶಾನಿ ಶೆಟ್ಟಿ ಎಂಟ್ರಿ!

ಇದೊಂದು ಕೌಟುಂಬಿಕ ನಾಟಕ ಎಂದು ವಿವರಿಸಲಾಗಿದ್ದು, ಐಶಾನಿ ಅವರೇ ಸ್ವತಃ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
Aishani Shetty - Kaajana Poster
ಐಶಾನಿ ಶೆಟ್ಟಿ - ಕಾಜಾಣ ಚಿತ್ರದ ಪೋಸ್ಟರ್
Updated on

ವಾಸ್ತು ಪ್ರಕಾರ, ನಮ್ ಗಣಿ ಬಿ'ಕಾಂ ಪಾಸ್ ಮತ್ತು ಹೊಂದಿಸಿ ಬರೆಯಿರಿ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕೆ ಹೆಸರುವಾಸಿಯಾದ ಐಶಾನಿ ಶೆಟ್ಟಿ ಇದೀಗ ಕ್ಯಾಮೆರಾ ಹಿಂದೆಯೂ ಹೊಸ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದ್ದಾರೆ. ನಿರ್ದೇಶನ ಮಾಡುವ ಬಯಕೆಯ ಬಗ್ಗೆ ಬಹಳ ದಿನಗಳಿಂದ ಮಾತನಾಡುತ್ತಿದ್ದ ನಟಿ, ಕಾಜಾಣ ಎಂಬ ಚಿತ್ರದ ಮೂಲಕ ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವುದನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಅವರು 'ಕಾಜಿ' ಎಂಬ ಕಿರುಚಿತ್ರ ಸೇರಿದಂತೆ ಕಿರುಚಿತ್ರಗಳ ಮೂಲಕ ನಿರ್ದೇಶನ ಪ್ರಾರಂಭಿಸಿದರು ಮತ್ತು ಆ ಅನುಭವವು ಚಿತ್ರ ನಿರ್ದೇಶನ ಮಾಡುವ ಅವರ ಸಂಕಲ್ಪವನ್ನು ಬಲಪಡಿಸಿತು. 'ಕಾಜಾಣ' ಮೂಲಕ ಐಶಾನಿ ತಮ್ಮ ಚೊಚ್ಚಲ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಚಿತ್ರಕ್ಕೆ ಕಥೆಯನ್ನು ಅವರೇ ಬರೆದಿದ್ದಾರೆ. ಶೀರ್ಷಿಕೆಯು ರೂಪಕವಾಗಿದೆ ಮತ್ತು ನಾಯಕಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ವಿವರಿಸುತ್ತಾರೆ.

ಇದೊಂದು ಕೌಟುಂಬಿಕ ನಾಟಕ ಎಂದು ವಿವರಿಸಲಾಗಿದ್ದು, ಐಶಾನಿ ಅವರೇ ಸ್ವತಃ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರತಂಡವು ಸದ್ಯ ಉಳಿದ ಪಾತ್ರವರ್ಗವನ್ನು ಅಂತಿಮಗೊಳಿಸುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

'ಹುಡುಗಿಯ ಆಂತರಿಕ ಪ್ರಪಂಚವೇ ಕಾಜಾಣ ಕಥೆಯು ಕೇಂದ್ರಭಾಗವಾಗಿದೆ. ಇದೊಂದು ಆಳವಾಗಿ ಬೇರೂರಿರುವ ಕಥೆಯಾಗಿದ್ದು, ನಾವು ಹಿನ್ನೆಲೆಯನ್ನು ಅಥೆಂಟಿಕ್ ಆಗಿರಬೇಕೆಂದು ಬಯಸಿದ್ದೇವೆ. ಇಡೀ ಚಿತ್ರವನ್ನು ಮಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರೀಕರಿಸಲಾಗುವುದು' ಎಂದು ಐಶಾನಿ ಹೇಳುತ್ತಾರೆ.

ಕಾಜಾಣ ಚಿತ್ರವನ್ನು ಐಶಾನಿ ಅವರ ಸ್ವಂತ ಬ್ಯಾನರ್ ಶಾಕುಂತಲೆ ಸಿನಿಮಾಸ್ ಅಡಿಯಲ್ಲಿ ನಿರ್ಮಿಸಲಾಗುವುದು. ಶಾಖಾಹಾರಿ ಚಿತ್ರ ಖ್ಯಾತಿಯ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆಯಿದೆ.

'ಈ ಚಿತ್ರಕ್ಕಾಗಿ ಬಹು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಾನು ಉತ್ಸುಕಳಾಗಿದ್ದೇನೆ ಮತ್ತು ಚಿತ್ರದ ಸ್ವರ ಮತ್ತು ಭಾವನಾತ್ಮಕ ರಚನೆಯನ್ನು ಅರ್ಥಮಾಡಿಕೊಳ್ಳುವ ತಂಡದೊಂದಿಗೆ ಸಹಕರಿಸುತ್ತಿರುವುದು ನನ್ನ ಅದೃಷ್ಟ' ಎಂದು ಐಶಾನಿ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com