15 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ: ಡಿವೋರ್ಸ್ ಘೋಷಿಸಿದ ಸ್ಟಾರ್ ದಂಪತಿ, ಸಲ್ಮಾನ್ ಖಾನ್ ಆಪ್ತ-ಮುಸ್ಲಿಂ ವ್ಯಕ್ತಿಗೆ ಮನಸೋತಳಾ ನಟಿ..?

ಫೋಟೋಗಳಲ್ಲಿ, ನದೀಮ್ ತಾರಾಳನ್ನು ಎತ್ತಿಕೊಂಡಿರುವುದು ಕಂಡು ಬಂದಿದ್ದು, ಪೋಸ್ಟ್‌ನಲ್ಲಿ "ಜನ್ಮದಿನದ ಶುಭಾಶಯಗಳು ನನ್ನ ಅಬ್ಬಾ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಬರೆದಿದ್ದಾರೆ.
15 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ: ಡಿವೋರ್ಸ್ ಘೋಷಿಸಿದ ಸ್ಟಾರ್ ದಂಪತಿ, ಸಲ್ಮಾನ್ ಖಾನ್ ಆಪ್ತ-ಮುಸ್ಲಿಂ ವ್ಯಕ್ತಿಗೆ ಮನಸೋತಳಾ ನಟಿ..?
Updated on

ಮುಂಬೈ: ಹಿಂದಿ ಸೀರಿಯಲ್ ಗಳಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಮಾಹಿ ವಿಜ್ ಹಾಗೂ ಜಯ್ ಭಾನುಶಾಲಿ ಅವರ ವಿಚ್ಛೇದನ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಈ ನಡುವೆ ಮಾಹಿ ಅವರು ಸಲ್ಮಾನ್ ಖಾನ್ ಅವರ ಆತ್ಮೀಯ ಸ್ನೇಹಿತ ನದೀಮ್ ಖುರೇಷಿ ಅವರೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಾಹಿ ಅವರು ನದೀಮ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಅವರ ಮೇಲಿನ ಪ್ರೀತಿಯನ್ನು ಆ ಪೋಸ್ಟ್ ಮೂಲಕ ಹೇಳಿಕೊಂಡಿದ್ದರು. ಇದಲ್ಲದೆ, ತಮ್ಮ ಮಗಳು ತಾರಾ ಖಾತೆಯಿಂದಲೂ ನದೀಮ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಪೋಸ್ಟ್ ಅನ್ನು ಹಾಕಲಾಗಿತ್ತು. ಈ ಪೋಸ್ಟ್‌ನಲ್ಲಿ, ತಾರಾ ನದೀಮ್ ಅವರನ್ನು "ಅಬ್ಬಾ" ಎಂದು ಕರೆದಿರುವಂತೆ ಪೋಸ್ಟ್ ಮಾಡಲಾಗಿತ್ತು. ಇದೀಗ ಈ ಎರಡೂ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಫೋಟೋಗಳಲ್ಲಿ, ನದೀಮ್ ತಾರಾಳನ್ನು ಎತ್ತಿಕೊಂಡಿರುವುದು ಕಂಡು ಬಂದಿದ್ದು, ಪೋಸ್ಟ್‌ನಲ್ಲಿ "ಜನ್ಮದಿನದ ಶುಭಾಶಯಗಳು ನನ್ನ ಅಬ್ಬಾ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಬರೆದಿದ್ದಾರೆ. ಈ ಇನ್‌ಸ್ಟಾಗ್ರಾಮ್ ಖಾತೆಯನ್ನು ತಾಯಿ ಮಹಿ ವಿಜ್ ಹ್ಯಾಂಡಲ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಪೋಸ್ಟ್ ಮೂಲಕ ಮಾಹಿ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆಂದು ಹಲವರು ಕಮೆಂಟ್ ಮಾಡಿದ್ದಾರೆ.

ಟ್ರೋಲ್ ಮಾಡಿದವರ ವಿರುದ್ಧ ಮಾಹಿ ಕಿಡಿ

ಈ ನಡುವೆ ಮಾಹಿ ವಿಜ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಟ್ರೋಲ್ ಮಾಡಿದವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಎಲ್ಲರೂ ಟ್ರೋಲ್ ಬಗ್ಗೆ ಮಾತನಾಡಬೇಡಿ, ಅದನ್ನು ನಿರ್ಲಕ್ಷಿಸಿ ಎಂದು ನನಗೆ ಹೇಳಿದರು, ಆದರೆ, ನಾನು ಮಾತನಾಡಲೇಬೇಕಿದೆ. ಎಲ್ಲವರು ತಿಳಿದಿರುವವರು ಮಾಧ್ಯಮದವರು ಏನು ಮಾಡುತ್ತಿದ್ದಾರೆಂಬುದು ವಿಚಿತ್ರವೆನಿಸುತ್ತಿದೆ. ನಾವು ತುಂಬಾ ಗೌರವದಿಂದ ವಿಚ್ಛೇದನ ಪಡೆದ ಕಾರಣ, ನಿಮಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ವಿವಾದವನ್ನು ಬಯಸುತ್ತೀರಿ, ನೀವು ಕೊಳಕನ್ನು ಬಯಸುತ್ತೀರಿ.

15 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ: ಡಿವೋರ್ಸ್ ಘೋಷಿಸಿದ ಸ್ಟಾರ್ ದಂಪತಿ, ಸಲ್ಮಾನ್ ಖಾನ್ ಆಪ್ತ-ಮುಸ್ಲಿಂ ವ್ಯಕ್ತಿಗೆ ಮನಸೋತಳಾ ನಟಿ..?
ವಾಸಸ್ಥಳದ ಬಗ್ಗೆ ಭಿನ್ನಾಭಿಪ್ರಾಯ: ಮದುವೆಯಾದ 24 ಗಂಟೆಗಳಲ್ಲೇ ವಿಚ್ಛೇದನ ಪಡೆಯಲು ದಂಪತಿ ನಿರ್ಧಾರ!

ನದೀಮ್ ನನ್ನ ಆತ್ಮೀಯ ಸ್ನೇಹಿತ ಮತ್ತು ಯಾವಾಗಲೂ ನನ್ನ ಆತ್ಮೀಯ ಸ್ನೇಹಿತನಾಗಿರುತ್ತಾನೆ. ನಾನು ಆರು ವರ್ಷಗಳಿಂದ ಅವನ ಬಗ್ಗೆ ಪೋಸ್ಟ್ ಮಾಡುತ್ತಿದ್ದೇನೆ. ತಾರಾ ಅವರನ್ನು ಆರು ವರ್ಷಗಳಿಂದ ಅಬ್ಬಾ ಎಂದು ಕರೆಯುತ್ತಿದ್ದಾಳೆ. ಜಯ್ ಮತ್ತು ನಾನು ಅವಳು ನದೀಮ್ ಅಬ್ಬಾ ಎಂದು ಕರೆಯಬೇಕೆಂದು ನಿರ್ಧರಿಸಿದ್ದೆವು. ನೀವು ಅಬ್ಬಾ ಎಂಬ ಪದವನ್ನು ತುಂಬಾ ಕೊಳಕು ಮಾಡಿದ್ದೀರಿ. ನೀವು ಯಾವುದೇ ಮಟ್ಟಕ್ಕೆ ಇಳಿಯಬಹುದು. ನಿಮಗೆ ನಾಚಿಕೆಯಾಗಬೇಕು, ನಿಮಗೆ ನಾನು ಉಗಿಯುತ್ತೇನೆ.

ನನ್ನ ಬಗ್ಗೆ ಮತ್ತು ನದೀಮ್ ಬಗ್ಗೆ ಇಷ್ಟೊಂದು ಅಸಂಬದ್ಧವಾಗಿ ಬರೆದಿದ್ದಕ್ಕಾಗಿ ನಾನು ನಿಮಗೆ ಉಗಿಯುತ್ತಿದ್ದೇನೆ, ಅವರು ಕೇವಲ ನನ್ನ ಜೀವನದಲ್ಲಷ್ಟೇ ಗಾಡ್‌ಫಾದರ್ ಆಗಿಲ್ಲ, ತುಂಬಾ ಜನರಿಗೂ ಗಾಡ್ ಫಾದರ್ ಆಗಿದ್ದಾನೆ. ನೀವು ಯಾರೊಬ್ಬರ ಬಗ್ಗೆ ಅಷ್ಟು ಕೀಳು ಮಟ್ಟಕ್ಕೆ ಹೇಗೆ ಇಳಿಯುತ್ತೀರಿ. ನೀವು ನಿಮ್ಮ ಆತ್ಮೀಯ ಸ್ನೇಹಿತರಿಗೆ 'ಐ ಲವ್ ಯೂ' ಎಂದು ಹೇಳುವುದಿಲ್ಲವೇ? ನಿಮ್ಮ ಸಹೋದರನಿಗೆ 'ಐ ಲವ್ ಯೂ' ಎಂದು ಹೇಳುವುದಿಲ್ಲವೇ? ನಿಮ್ಮ ಸಹೋದರಿಗೆ 'ಐ ಲವ್ ಯೂ' ಎಂದು ಹೇಳುವುದಿಲ್ಲವೇ? ನಾನು ಓದುತ್ತಿರುವ ಕಾಮೆಂಟ್‌ಗಳು. ಅವರಲ್ಲಿ ಅರ್ಧದಷ್ಟು ಜನರು ನಕಲಿ ಫಾಲೋವರ್ಸ್ ಗಳಾಗಿದ್ದಾರೆ. ಆದ್ದರಿಂದ ಇದನ್ನೆಲ್ಲಾ ಯಾರು ಮಾಡುತ್ತಿದ್ದಾರೆಂಬುದು ನನಗೆ ತಿಳಿದಿಲ್ಲ. ನನ್ನ ಬಗ್ಗೆ ನೆಗೆಟಿವಿಟಿ ಹರಡಲು ನಾನು ನಿಮಗೆ ಅವಕಾಶ ನೀಡಲ್ಲ. ನಿಮಗೆ ನಾಚಿಕೆಯಾಗಬೇಕು. ನಿಮಗೆ ಉತ್ತಮ ಸ್ನೇಹಿತ ಎಂದರೇನು ಎಂದು ತಿಳಿದಿಲ್ಲದಿದ್ದರೆ, ನರಕಕ್ಕೆ ಹೋಗಿ. ಕರ್ಮ ನಿಮ್ಮನ್ನು ಎಂದಿಗೂ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಳೆದ ಒಂದು ವರ್ಷದಿಂದ, ಮಹಿ ಮತ್ತು ಜಯ್ ಭಾನುಶಾಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿವೆ ಎಂದ ಸುದ್ದಿಗಳು ವರದಿಯಾಗುತ್ತಲೇ ಇದ್ದವು. ಈ ಸ್ಟಾರ್ ದಂಪತಿಗಳು ಜಂಟಿ ಹೇಳಿಕೆಯನ್ನು ಕೂಡಾ ನೀಡಿದ್ದರು. ಇದು ವದಂತಿಗಳು ಹೇಳಿದ್ದರು. ಇದೀಗ ಇಬ್ಬರೂ ವಿಚ್ಛೇದನ ಘೋಷಿಸಿದ್ದು, ತಮ್ಮ ಮೂವರು ಮಕ್ಕಳನ್ನು ಒಟ್ಟಿಗೆ ಬೆಳೆಸುವುದನ್ನು ಮುಂದುವರಿಸುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com