

ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಕೊನೆ ಹಂತ ತಲುಪಿದ್ದು, ಈ ನಡುವಲ್ಲೇ ಎಲಿಮಿನೇಟ್ ಆಗಿ ಹೊರ ಹೋಗಿದ್ದ ಮಲ್ಲಮ್ಮ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಟ್ವಿಸ್ಟ್ ಕಂಡು ಪ್ರೇಕ್ಷಕರು ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಗೆ ಮಲ್ಲಮ್ಮ ರೀಎಂಟ್ರಿ ಕೊಟ್ಟಿದ್ದು, ಮನೆ ಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ. ಸಂಭ್ರಮದಿಂದ ಮಲ್ಲಮ್ಮನನ್ನ ಬರ ಮಾಡಿಕೊಂಡಿದ್ದಾರೆ.
ಮಲ್ಲಮ್ಮ ಬರ್ತಿದ್ದಂತೆ ಗಿಲ್ಲಿಯ ಕಾಲು ಎಳೆದಿದ್ದಾರೆ. ಏನ್ ಗಿಲ್ಲಿ ಮಾತೇ ಆಡ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಗಿಲ್ಲಿ ಕೂಡ ಏನ್ ಬ್ಯೂಟಿಪುಲ್ ಆಗಿದ್ಯಾ? ಹೊರಗೆ ಫುಲ್ ಫ್ಯಾನ್ಸಾ ಎಂದು ಕಾಮಿಡಿ ಮಾಡಿದ್ದಾರೆ. ಹೌದೌದು ಹೊರಗೆ ನನ್ನದೇ ಹವಾ ಎನ್ನುತ್ತಲೇ ಮಲ್ಲಮ್ಮ ಗಿಲ್ಲಿಗೆ ಕೌಂಟರ್ ಕೊಟ್ಟಿದ್ದಾರೆ.
ಈ ನಡುವೆ ಮಲ್ಲಮ್ಮ ಅವರೊಂದಿಗೆ ಮಾತನಾಡಿದ ಬಳಿಕ, ಅಶ್ವಿನಿ ಗೌಡ ಅವರೊಂದಿಗೆ ಮಾತನಾಡಿರುವ ಧ್ರುವಂತ್ ಮೊದಲಿನಂತೆ ಕ್ಲೋಸ್ನೆಸ್ ಈಗ ಉಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಮಲ್ಲಮ್ಮ ಅವರು ಧ್ರುವಂತ್ ಜೊತೆ ಹೆಚ್ಚು ಆತ್ಮೀಯರಾಗಿದ್ದರು. ಆದರೆ, ರೀ ಎಂಟ್ರಿ ವೇಳೆ ಆ ಆತ್ಮೀಯತೆ ಕಾಣುತ್ತಿಲ್ಲ ಎಂದು ಧ್ರುವಂತ್-ಅಶ್ವಿನಿ ಬಳಿ ಹೇಳಿದ್ದಾರೆ.
ಮಲ್ಲಮ್ಮ ಬರ್ತಿದ್ದಂತೆ ಧ್ರುವಂತ್ ಫುಲ್ ಖುಷ್ ಆದರು. ಕೂಡಲೇ ಆಕೆಯನ್ನ ಎತ್ತಿಕೊಂಡು ಸಂಭ್ರಮಿಸಿದರು. ಬಳಿಕ ಮಲ್ಲಮ್ಮನ ಬಳಿ ಮಾತಾಡಲು ಹೋಗಿದ್ದಾರೆ. ಆದರೆ, ಮಲ್ಲಮ್ಮ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಧ್ರುವಂತ್-ಅಶ್ವಿನಿ ಬಳಿ ಅಸಮಾಧಾನ ಹೊರಹಾಕಿದ್ದಾರೆ.
ಮಲ್ಲಮ್ಮ ಸರಿಯಾಗಿ ಮಾತಾಡುತ್ತಿಲ್ಲ. ಮೊದಲಿನ ಆತ್ಮೀಯತೆ ಈಗ ಕಾಣುತ್ತಿಲ್ಲಲ್ಲ. ಎಲ್ಲೋ ಜರ್ಕ್ ಕಾಣಿಸುತ್ತಿದೆ ಎಂದು ಧ್ರುವಂತ್ ಹೇಳಿಕೊಂಡಿದ್ದಾರೆ. ಇದಕ್ಕೆ ಅಶ್ವಿನಿ ಹೌದು ಹೌದು, ಇರಲಿ ಇಲ್ಲಿ ನನಗೆ ನೀನು-ನಿನಗೆ ನಾನು ಎಂದು ಹೇಳಿದ್ದಾರೆ.
Advertisement