

ಬೆಂಗಳೂರು: ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ವಿನ್ನರ್ ಯಾರು ಎಂಬುದರ ಕುರಿತು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಈ ನಡುವಲ್ಲೇ ಕಿಚ್ಚ ಸುದೀಪ್ ಅವರು ಅಚ್ಚರಿಯ ಪೋಸ್ಟ್'ವೊಂದನ್ನು ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, . ಬಿಗ್ ಬಾಸ್ ಬಗ್ಗೆ ತಮಗೆ ಅನಿಸಿರೋದನ್ನ ಬರೆದಿದ್ದಾರೆ. ಇಡೀ ಬಿಗ್ ಬಾಸ್‌ಗಾಗಿಯೇ ದುಡಿದವರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಇಂದು ಬಿಗ್ ಬಾಸ್ ಸೀಸನ್ -12 ಗ್ರ್ಯಾಂಡ್ ಫಿನಾಲೆ ಇದೆ. ಇದು ನಿಜಕ್ಕೂ ಅದ್ಭುತ ಸೀಸನ್, ವೀಕ್ಷಕರಿಗೆ, ಇಡೀ ತಂಡಕ್ಕೆ ಧನ್ಯವಾದ ಹೇಳಿಗಳು. ಸೂರ್ಯಾಸ್ತದ ಹೊತ್ತಿಗೆ ಬಿಗ್ ಬಾಸ್ ಸೀಸನ್ -12 ಮುಕ್ತಾಯವಾಗಲಿದೆ. ಈ ಒಂದು ಶೋಗೆ ಬೆಂಬಲ ನೀಡಿದ ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ ಗೆದ್ದ ವಿಜೇತರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಕಾರಣರಾದ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಇದ್ರೆ ಬಿಗ್ ಬಾಸ್ ಇಲ್ಲ ಎಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 13 ಶುರು ಆಗುವ ತನಕ ಬಿಗ್ ಬಾಸ್ ವಿಶ್ರಾಂತಿ ಪಡೆಯಲಿ. ಈ ಸೂರ್ಯಾಸ್ತದ ವೇಳೆಗೆ ನಾವು ಬಾಗಿಲುಗಳನ್ನು ಗೌರವದಿಂದ ಮುಚ್ಚುತ್ತೇನೆ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರ ಈ ಪೋಸ್ಟ್ ವೈರಲ್ ಆಗಿದೆ.
Advertisement