

ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಹೊರಬಂದ ನಂತರ ಡಾಗ್ ಸತೀಶ್ ಗಿಲ್ಲಿ ನಟನ ವಿರುದ್ಧ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಮೊದ ಮೊದಲು ಗಿಲ್ಲಿ ನಟ ಗಲೀಜು, ಕೊಳಕ ಎಂದೆಲ್ಲಾ ಸತೀಶ್ ಆರೋಪ ಮಾಡಿದ್ದರು. ತದ ನಂತರ ಗಿಲ್ಲಿ ನಟ ಬಿಗ್ ಬಾಸ್ ಗೆಲ್ಲೋದೆ ಇಲ್ಲ ಎಂದು ಹೇಳಿದ್ದರು. ಆದರೆ ಗಿಲ್ಲಿ ನಟ ಬಿಗ್ ಬಾಗ್ ಇತಿಹಾಸದಲ್ಲೇ ಮೊದಲು ಎಂಬಂತೆ ಬರೋಬ್ಬರಿ 45 ಕೋಟಿ ಮತಗಳನ್ನು ಪಡೆದು ಜಯಶಾಲಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದ ಮೂಲಕ ಗಿಲ್ಲಿ ನಟ ಕರ್ನಾಟಕ ಜನತೆಯ ಮನ ಗೆದ್ದಿದ್ದರು.
ಇನ್ನು ವಿನಾಃ ಕಾರಣ ಗಿಲ್ಲಿ ನಟನ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡುತ್ತಿದ್ದ ಡಾಗ್ ಸತೀಶ್ ವಿರುದ್ಧ ಗಿಲ್ಲಿ ಅಭಿಮಾನಿಗಳು ತಿರುಗಿಬಿದ್ದಿದ್ದರು. ಇದೇ ವಿಚಾರವಾಗಿ ಡಾಗ್ ಸತೀಶ್ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಗಿಲ್ಲಿ ನಟನ ಅಭಿಮಾನಿಗಳು ನನಗೆ ಜೀವ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಪ್ರಕರಣ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಾಗ್ ಸತೀಶ್ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸತೀಶ್ ತನ್ನ ವಿರುದ್ಧ ಅವಾಚ್ಯವಾಗಿ ನಿಂದಿಸಿದವರ ವಿರುದ್ಧ 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
Advertisement