ತಮಿಳು ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲು; ಬೆದರಿಕೆಯೊಡ್ಡಿದ ಆರೋಪ!

ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಬಾಡಿಗೆಯ ಒಟ್ಟು ಮೊತ್ತವು ₹2.12 ಕೋಟಿಗಳಷ್ಟಿತ್ತು. ಅದನ್ನು ಪಾವತಿಸುವಂತೆ ಪದೇ ಪದೆ ಕೇಳಿದರೂ ₹1.80 ಕೋಟಿಗಿಂತಲೂ ಹೆಚ್ಚಿನ ಮೊತ್ತ ಬಾಕಿ ಉಳಿದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
Arya in a still from Ananthan Kaadu
ನಟ ಆರ್ಯ
Updated on

ಮಲಯಾಳಂ ಚಿತ್ರ 'ಅನಂತನ್ ಕಾಡು' ಚಿತ್ರೀಕರಣಕ್ಕಾಗಿ ಬಾಡಿಗೆಗೆ ಪಡೆದ ಚಿತ್ರೀಕರಣ ಸಲಕರಣೆಗಳ ಬಾಕಿ ಪಾವತಿಸದ ಆರೋಪದ ಮೇಲೆ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಫೆಬ್ರುವರಿ 2025ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಹೈದರಾಬಾದ್ ಮೂಲದ ತಾಹೆರ್ ಸಿನಿ ಟೆಕ್ನಿಕ್ಸ್ ಪ್ರತಿನಿಧಿಗಳು ಚಿತ್ರ ನಿರ್ಮಾಣಕ್ಕೆ ಉನ್ನತ ದರ್ಜೆಯ ಡಿಜಿಟಲ್ ಕ್ಯಾಮೆರಾಗಳು ಮತ್ತು ಲೈಟಿಂಗ್ಸ್ ಉಪಕರಣಗಳನ್ನು ಬಾಡಿಗೆಗೆ ನೀಡಲಾಗಿದೆ. ಕಂಪನಿಯು ಹೈದರಾಬಾದ್‌ನಿಂದ ಕೇರಳದ ಚಿತ್ರೀಕರಣದ ಸ್ಥಳಗಳಿಗೆ ತನ್ನ ಸ್ವಂತ ಖರ್ಚಿನಲ್ಲಿ ಉಪಕರಣಗಳನ್ನು ಸಾಗಿಸಿದೆ ಎಂದು ದೂರಿನಲ್ಲಿ ಹೇಳಿದೆ.

ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಬಾಡಿಗೆಯ ಒಟ್ಟು ಮೊತ್ತವು ₹2.12 ಕೋಟಿಗಳಷ್ಟಿತ್ತು. ಅದನ್ನು ಪಾವತಿಸುವಂತೆ ಪದೇ ಪದೆ ಕೇಳಿದರೂ ₹1.80 ಕೋಟಿಗಿಂತಲೂ ಹೆಚ್ಚಿನ ಮೊತ್ತ ಬಾಕಿ ಉಳಿದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕಂಪನಿಯ ಅಕೌಂಟೆಂಟ್ ಜಾವೇದ್ ಅಲಿ ಸಲ್ಲಿಸಿದ ದೂರಿನಲ್ಲಿ, ಚಿತ್ರ ಬಿಡುಗಡೆಗೆ ಮುನ್ನ ಬಾಕಿ ಇರುವ ಎಲ್ಲ ಹಣವನ್ನು ಪಾವತಿಸಲು ಮತ್ತು ಸಲಕರಣೆ ಪೂರೈಕೆದಾರರಿಂದ no-dues ಪ್ರಮಾಣಪತ್ರ ಪಡೆಯಲು ನಿರ್ಮಾಣ ತಂಡ ಒಪ್ಪಿಕೊಂಡಿದೆ. ಪಾವತಿ ಮಾಡುವಂತೆ ಪದೇ ಪದೆ ಮಾಡಿದ ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳಿಗೆ ಉತ್ತರಿಸಿಲ್ಲ ಎಂದು ಆರೋಪಿಸಲಾಗಿದೆ.

ಬಾಕಿ ಮೊತ್ತದ ಬಗ್ಗೆ ವಿಚಾರಿಸಲು ತೆರಳಿದ್ದ ಕಂಪನಿಯ ವ್ಯವಸ್ಥಾಪಕರಿಗೆ ನಟ ಆರ್ಯ, ನಿರ್ಮಾಪಕ ವಿನೋದ್ ಸದರು ಮತ್ತು ಆರ್ಯ ಅವರ ಆಪ್ತ ಸಹಾಯಕ ಕಿಶೋರ್ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅಲ್ಲದೆ, ವಿವಾದಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸದೆಯೇ ಕೇರಳದ ನ್ಯಾಯಾಲಯವೊಂದರಿಂದ ಮಧ್ಯಂತರ ಆದೇಶಗಳನ್ನು ಪಡೆಯಲಾಗಿದೆ ಎಂದೂ ಅವರು ದೂರಿದರು.

Arya in a still from Ananthan Kaadu
ನನ್ನ ಆ ಒಂದು ತಪ್ಪು ನಿರ್ಧಾರದಿಂದ ನಿಮಗೆ ನೋವಾಗಿದೆ, ಮಂಡಿಯೂರಿ ಕ್ಷಮೆಯಾಚಿಸುತ್ತೇನೆ: ನಟ ರವಿ ಮೋಹನ್

ದೂರಿನ ಆಧಾರದ ಮೇಲೆ, ಜುಬಿಲಿ ಹಿಲ್ಸ್ ಪೊಲೀಸರು ಆರ್ಯ, ವಿನೋದ್ ಸದರು ಮತ್ತು ಕಿಶೋರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವಿಷಯದ ಕುರಿತು ತನಿಖೆ ನಡೆಯುತ್ತಿದೆ.

ಆರ್ಯ ಮುಂದೆ ಪಾ ರಂಜಿತ್ ನಿರ್ದೇಶನದ 'ವೆಟ್ಟುವಮ್' (Vettuvam) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಆರ್ ದಿನೇಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com