'ರುಕ್ಮಿಣಿ ರಾಧಾಕೃಷ್ಣ': ನನ್ನ ತಾಯಿಯ ಸಲಹೆ ಮೇರೆಗೆ ರಾಧೆಯಾಗಿ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಆಯ್ಕೆ- ಭರತ್ ಕುಮಾರ್

ಭರತ್ ಕುಮಾರ್ ನೀಡಿದ ಒಂದು ಸಾಲಿನ ಕಥಾ ಹಂದರದ ಆಧಾರದ ಮೇಲೆ ನಿರ್ದೇಶಕ ಪ್ರಾಣ್ ಸುವರ್ಣ ಅವರು ಚಿತ್ರಕಥೆಯನ್ನು ಬರೆದಿದ್ದಾರೆ.
Stills from Rukmini Radhakrishna
ರುಕ್ಮಿಣಿ ರಾಧಾಕೃಷ್ಣ ಚಿತ್ರದ ಸ್ಟಿಲ್
Updated on

'ಪಾರು' ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಕಿರುತೆರೆ ನಟಿ ಹಾಗೂ 'ಬಿಗ್ ಬಾಸ್' ಕನ್ನಡದ ಮಾಜಿ ಸ್ಪರ್ಧಿ ಮೋಕ್ಷಿತಾ ಪೈ, ಭರತ್ ಕುಮಾರ್ ನಟನೆಯ 'ರುಕ್ಮಿಣಿ ರಾಧಾಕೃಷ್ಣ' ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಉಮೇಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡು ಪ್ರಾಣ್ ಸುವರ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು, ಕೃಷ್ಣ, ರುಕ್ಮಿಣಿ ಮತ್ತು ರಾಧೆ ನಡುವಿನ ಸಂಬಂಧವನ್ನು ಹೊಸ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುತ್ತದೆ. ರುಕ್ಮಿಣಿ ಕೃಷ್ಣನ ಸಂಗಾತಿಯಾಗಿದ್ದರೂ, ರಾಧೆ ಅವನ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾಳೆ ಎಂಬ ಪರಿಕಲ್ಪನೆಯ ಸುತ್ತ ಈ ಕಥೆ ಸಾಗುತ್ತದೆ.

ಮುಖ್ಯ ಪಾತ್ರದಲ್ಲಿ ನಟಿಸಿರುವ ಭರತ್ ಕುಮಾರ್, ಈ ಚಿತ್ರದಲ್ಲಿ 'ರಾಧಾ' ಪಾತ್ರವು ಮಹತ್ವದ್ದಾಗಿದ್ದು, ತಮ್ಮ ತಾಯಿಯ ಸಲಹೆಯ ಮೇರೆಗೆ ಆ ಪಾತ್ರಕ್ಕಾಗಿ ಮೋಕ್ಷಿತಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರವು ಕೃಷ್ಣ ಮತ್ತು ರಾಧೆ ನಡುವಿನ ಬಾಂಧವ್ಯವನ್ನು ವಿಭಿನ್ನ ದೃಷ್ಟಿಕೋನದಿಂದ ಅನಾವರಣಗೊಳಿಸುತ್ತದೆ' ಎಂದು ತಿಳಿಸಿದರು.

ಕಥೆಯನ್ನು ವಿವರಿಸಿದಾಗ ತಮಗೆ ಅದರೊಂದಿಗೆ ಭಾವನಾತ್ಮಕ ನಂಟು ಏರ್ಪಟ್ಟಿತು ಮತ್ತು ರಾಧೆ ಪಾತ್ರವನ್ನು ನಿರ್ವಹಿಸಲು ನಿರ್ಧರಿಸಿದೆ ಎಂದು ಮೋಕ್ಷಿತಾ ಹೇಳುತ್ತಾರೆ. ಈ ಚಿತ್ರದಲ್ಲಿ ನಟಿ ಹಾಗೂ ಮಾಡೆಲ್ ರಿಯಾ ಸಚ್‌ದೇವ್ ಅವರು ರುಕ್ಮಿಣಿ ಪಾತ್ರದಲ್ಲಿ ನಟಿಸಿದ್ದಾರೆ.

ಭರತ್ ಕುಮಾರ್ ನೀಡಿದ ಒಂದು ಸಾಲಿನ ಕಥಾ ಹಂದರದ ಆಧಾರದ ಮೇಲೆ ನಿರ್ದೇಶಕ ಪ್ರಾಣ್ ಸುವರ್ಣ ಅವರು ಚಿತ್ರಕಥೆಯನ್ನು ಬರೆದಿದ್ದಾರೆ. ತಮಿಳುನಾಡಿನ ಕುಂಭಕೋಣಂ ಸುತ್ತಮುತ್ತ ಚಿತ್ರೀಕರಣಗೊಂಡಿರುವ ಈ ಚಿತ್ರವು, ತನ್ನ ಹಿನ್ನೆಲೆ ಮತ್ತು ಸಂಗೀತದ ಮೂಲಕ ಕನ್ನಡ ಹಾಗೂ ತಮಿಳು ಸಾಂಸ್ಕೃತಿಕ ಅಂಶಗಳನ್ನು ಒಗ್ಗೂಡಿಸುತ್ತದೆ.

Stills from Rukmini Radhakrishna
'ಮಿಡಲ್ ಕ್ಲಾಸ್ ರಾಮಾಯಣ' ಚಿತ್ರದ ಮೂಲಕ ಬೆಳ್ಳಿತೆರೆಗೆ ಮೋಕ್ಷಿತಾ ಪೈ ಪದಾರ್ಪಣೆ!

ಚಿತ್ರದ ನಿರ್ಮಾಣ ಕಾರ್ಯವು ಸದ್ಯ ಅಂತಿಮ ಹಂತದಲ್ಲಿದ್ದು, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಇವುಗಳಲ್ಲಿ ಗೀತರಚನೆಕಾರ ಕೆ. ಕಲ್ಯಾಣ್ ಅವರು ಬರೆದಿರುವ ಕನ್ನಡ-ತಮಿಳು ಸಮ್ಮಿಶ್ರಣದ (ಫ್ಯೂಷನ್) ಹಾಡೊಂದೂ ಸೇರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com