

ಇತ್ತೀಚಿಗೆ ಬಿಡುಗಡೆಯಾದ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಅಭಿನಯದ ಬಹುನಿರೀಕ್ಷಿತ ಅದ್ಧೂರಿ ಚಿತ್ರ 'ಪೆದ್ದಿ' ಈಗ ಭಾರಿ ವಿವಾದದ ಕೇಂದ್ರಬಿಂದುವಾಗಿದೆ.
ಕ್ರೀಡಾ ಆಧಾರಿತ ಚಿತ್ರದ ಕಥೆ ಅಥವಾ ಪಾತ್ರವರ್ಗದ ಬಗ್ಗೆ ಚರ್ಚೆಯಾಗುತ್ತಿಲ್ಲ. ಬದಲಿಗೆ ನಾಯಕಿ ಜಾನ್ವಿ ಕಪೂರ್ ನಿರ್ವಹಿಸಿರುವ 'ಅಚ್ಚಿಯಮ್ಮ' (Achiyyamma) ಪಾತ್ರವನ್ನು ತೋರಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜಾನ್ವಿ ಕಪೂರ್ ಪಾತ್ರದ ಭಾವನೆಗಳು, ಪ್ರೇರಣೆ ಅಥವಾ ಪಾತ್ರಕ್ಕಿಂತಲೂ ಹೆಚ್ಚಿನ ಆಕೆಯ ದೇಹ ಸೌಂದರ್ಯವನ್ನು ಪದೇ ಪದೇ ತೋರಿಸಲಾಗಿದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯವಾಹಿನಿ ಸಿನಿಮಾಗಳಲ್ಲಿ ಮಹಿಳೆಯರ ಸಮ್ಮತಿ ಮತ್ತು ಅವರ ಪಾತ್ರದ ಘನತೆಯ ಕುರಿತಾದ ಚರ್ಚೆ ಈ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.
ಆನ್‌ಲೈನ್‌ನಲ್ಲಿ ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆ, ಹಲವಾರು ಬಳಕೆದಾರರು ಚಿತ್ರದ ಬಗ್ಗೆ ವಿವರವಾದ ಟೀಕೆಗಳನ್ನು ಹಂಚಿಕೊಂಡರು. ಚುನಾವಣಾ ಪ್ರಚಾರದ ನಡುವೆ ಗುಂಡಾ ಒಬ್ಬ ಜಾನ್ವಿಕಪೂರ್ ಅವರನ್ನು ನಾಚಿಕೆಪಡಿಸಲು ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ನಗಲು ಪ್ರಾರಂಭಿಸುತ್ತಾನೆ. ಆಕೆಯನ್ನು ಯಾವಾಗಲೂ ನಿಂದಿಸುವ ನಾಯಕನನ್ನು ಹಿರೋ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
'ನಾಯಕ ನಟ ಚಿತ್ರದಲ್ಲಿ ನಾಯಕಿಯ ಕಣ್ಣು ಹಾಗೂ ತುಟಿಗಳನ್ನು ಹೊಗಳುತ್ತಾ ವರ್ಣಿಸುತ್ತಾನೆ. ಆದರೆ ಕ್ಯಾಮೆರಾ ಮಾತ್ರ ಆಕೆಯ ಎದೆ ಮತ್ತು ಸೊಂಟದ ಭಾಗದ ಮೇಲೆ ಕಟ್ ಆಗುತ್ತದೆ. ಕಣ್ಣು ಎಲ್ಲಿರುತ್ತೆ, ತುಟಿ ಎಲ್ಲಿರುತ್ತೆ ಅಂತ ಗೊತ್ತಿಲ್ಲದಷ್ಟು ನಮ್ಮ ಎಡಿಟರ್ ಮದ್ದಬುದ್ದಿಯವರೇ' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಜಾನ್ವಿಯನ್ನು ಕೇವಲ ಆಕೆಯ ದೇಹ ಸೌಂದರ್ಯವನ್ನು ಪ್ರದರ್ಶಿಸಲು ಮಾತ್ರ ಬಳಕೆ ಮಾಡಿಕೊಳ್ಳುತ್ತಿರುವುದು ಕಣ್ಣೆದುರೇ ಕಾಣಿಸುತ್ತಿದೆ. ಕೇವಲ ಈ ಸಿನಿಮಾ ಮಾತ್ರವಲ್ಲ ಜಾನ್ವಿ ನಟಿಸಿರುವ ಯಾವುದೇ ಸಿನಿಮಾ ನೋಡಿದರು ಅದರಲ್ಲಿ ಆಕೆ ಒಬ್ಬ ನಟಿ ಎನ್ನಿವುದಕ್ಕಿಂತ ಐಟಂ ಗರ್ಲ್ ರೀತಿಯಲ್ಲಿಯೇ ಕಾಣಿಸುವಂತೆ ಮಾಡಲಾಗಿದೆ ಎಂದು ಮತ್ತೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
Advertisement