ಬರ್ತ್ ಡೇ ಬಾಯ್ ಕರಿಕಾಡ ನಟರಾಜ್ ಗೆ ಡಬಲ್ ಖುಷಿ!

ಕರಿಕಾಡ‌ ಚಿತ್ರದ ನಟನೆಯಿಂದ ಜನಪ್ರಿಯರಾದವರು ಕಾಡ‌ ನಟರಾಜ್. ಜೂನ್ 6ರಂದು ಸಂಭ್ರಮದ ಜನ್ಮದಿನ ಆಚರಿಸಿಕೊಂಡಿದ್ದಾರೆ.
Nataraj
ನಟ ನಟರಾಜ್
Updated on

ಕರಿಕಾಡ‌ ಚಿತ್ರದ ನಟನೆಯಿಂದ ಜನಪ್ರಿಯರಾದವರು ಕಾಡ‌ ನಟರಾಜ್. ಜೂನ್ 6ರಂದು ಸಂಭ್ರಮದ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿ ಸಿನಿಮಾಸ್ ಜತೆಗೆ ಮಾತನಾಡಿದ ನಟರಾಜ್ ಅವರು ತಮ್ಮ ಖುಷಿ ದ್ವಿಗುಣಗೊಂಡಿರುವುದರ ಕಾರಣವನ್ನು ಹಂಚಿಕೊಂಡಿದ್ದಾರೆ.

ಕಾಡ ನಟರಾಜ್ ನಾಯಕರಾಗಿ ನಟಿಸಿ ಜನ ಮನಸೂರೆಗೊಂಡ ಚಿತ್ರ ಕರಿಕಾಡ. ಗಿಲ್ಲಿ ವೆಂಕಟೇಶ್ ನಿರ್ದೇಶನದ ಈ ಚಿತ್ರದಲ್ಲಿ ಕರಿಕಾಡನಾಗಿ ನಟರಾಜ್ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ದೊರಕಿತ್ತು. ಅದರಲ್ಲೂ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸಾದ ಬಳಿಕ ನಟರಾಜ್ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ತಮ್ಮ ಅಭಿನಯಕ್ಕೆ ದೊರಕುತ್ತಿರುವ ಪಾಸಿಟಿವ್ ಪ್ರತಿಕ್ರಿಯೆಯ ಖುಷಿಯನ್ನು ನಟರಾಜ್ ತಮ್ಮ ಬರ್ತ್ ಡೇ ಸಂಭ್ರಮದಲ್ಲಿ ಹಂಚಿಕೊಂಡು ಡಬಲ್ ಧಮಾಕದಂತಾಗಿದೆ ಎಂದಿದ್ದಾರೆ.

Nataraj
ನಟಿ ಸುಕನ್ಯಾಗೆ ಅಕ್ರಮ ಸಂಬಂಧ; ವೀರಪ್ಪನ್ ಹೇಳಿಕೆ: 10 ಲಕ್ಷ ಪರಿಹಾರ ನೀಡುವಂತೆ Sun Tvಗೆ ಹೈಕೋರ್ಟ್ ನಿರ್ದೇಶನ!

ಕರಿಕಾಡ ಚಿತ್ರದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅದ್ಭುತ ನಟನೆ ನೀಡಿದ್ದರು.‌ ಮೊದಲ ಚಿತ್ರದಲ್ಲೇ ನಟನೆಯೊಂದಿಗೆ ಸಾಹಸ ಸನ್ನಿವೇಶಗಳಲ್ಲಿ ಕೂಡ ಸ್ವತಃ ಭಾಗಿಯಾಗಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಇಂಥದೊಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಸಹೋದ್ಯೋಗಿಗಳಿಂದ ಹಿಡಿದು ಪರಿಚಿತ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ ಪಾತ್ರಕ್ಕೆ ನ್ಯಾಯ ಸಲ್ಲಿಸಿರುವ ರೀತಿಗೆ ಈಗ ವ್ಯಾಪಕ ಮೆಚ್ಚುಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರವನ್ನು ಕಾಡ ನಟರಾಜ್ ಅವರೇ ನಿರ್ಮಿಸಿದ್ದರು. ಐಟಿಯಲ್ಲಿ ಕೆಲಸ ಮಾಡುತ್ತಲೇ ಸಿನಿಮಾದಲ್ಲೂ ನಾಯಕರಾದ ನಟರಾಜ್ ಅವರ‌ ಜೊತೆಯಾಗಿ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ಕರಿಕಾಡದಲ್ಲಿ ಬಲರಾಜ್ ವಾಡಿ, ಯಶ್ ಶೆಟ್ಟಿ, ವಿಜಯ್ ಚೆಂಡೂರ್ ಮೊದಲಾದವರ ಪಾತ್ರಗಳು ಕೂಡ ಚಿತ್ರದ ಹೈಲೈಟ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com