ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ರಶ್ಮಿಕಾ; ‘ದೇವರಕೊಂಡ’ ಸರ್‌ನೇಮ್ ಕೇಳಿ ಫ್ಯಾನ್ಸ್ ಫುಲ್ ಖುಷ್!

ತುಮ್ಮನ್‌ಪೇಟೆಗೆ ಆಗಮಿಸಿದ ನವಜೋಡಿಗೆ ಗ್ರಾಮಸ್ಥರು ಹೂಮಳೆಗರೆದು ಸ್ವಾಗತ ಕೋರಿದರು. ಈ ವೇಳೆ ವಿಜಯ್ ಮತ್ತು ರಶ್ಮಿಕಾ ಸ್ಥಳೀಯ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.
Rashmika Mandanna
ತಮ್ಮ ಕುಟುಂಬದೊಂದಿಗೆ ರಶ್ಮಿಕಾ ಮಂದಣ್ಣ
Updated on

ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ಒಂದಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ.

ಮದುವೆಯ ನಂತರ ಮೊದಲ ಬಾರಿಗೆ ವಿಜಯ್ ಅವರ ಹುಟ್ಟೂರಾದ ತೆಲಂಗಾಣದ ತುಮ್ಮನ್‌ಪೇಟೆಗೆ ಭೇಟಿ ನೀಡಿದ ಈ ಜೋಡಿ, ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಪಡೆದಿದ್ದು, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ತುಮ್ಮನ್‌ಪೇಟೆಗೆ ಆಗಮಿಸಿದ ನವಜೋಡಿಗೆ ಗ್ರಾಮಸ್ಥರು ಹೂಮಳೆಗರೆದು ಸ್ವಾಗತ ಕೋರಿದರು. ಈ ವೇಳೆ ವಿಜಯ್ ಮತ್ತು ರಶ್ಮಿಕಾ ಸ್ಥಳೀಯ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು. ಅಲ್ಲದೆ, ಗ್ರಾಮದ ಜನರೊಂದಿಗೆ ಬೆರೆತು ಮಾತನಾಡಿ, ಅವರ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ವಿಜಯ್ ದೇವರಕೊಂಡ ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಮತ್ತು ಬಹುಮಾನ ವಿತರಿಸಿದರು.

9 ಮತ್ತು 10ನೇ ತರಗತಿಯ ಸುಮಾರು 180 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತಾ, ದೊಡ್ಡ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿದರು.

Rashmika Mandanna
ವಿಜಯ್ ದೇವರಕೊಂಡಗೆ 37ನೇ ಹುಟ್ಟುಹಬ್ಬದ ಸಂಭ್ರಮ! ಈ ವರ್ಷದ ವಿಶೇಷತೆ ಏನು ಗೊತ್ತಾ?

ಆದರೆ, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದ್ದು ರಶ್ಮಿಕಾ ಅವರ ಮಾತು. ವೇದಿಕೆಯಲ್ಲಿ ಮಾತನಾಡುವ ವೇಳೆ ಅವರು ತಮ್ಮನ್ನು “ರಶ್ಮಿಕಾ ಮಂದಣ್ಣ ದೇವರಕೊಂಡ” ಎಂದು ಪರಿಚಯಿಸಿಕೊಂಡರು. ಈ ಮಾತು ಕೇಳುತ್ತಿದ್ದಂತೆಯೇ ಅಲ್ಲಿದ್ದ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಇದರ ವಿಡಿಯೊಗಳು ವೈರಲ್ ಆಗಿವೆ.

ರಶ್ಮಿಕಾ ತಮ್ಮ ಹೆಸರಿಗೆ ‘ದೇವರಕೊಂಡ’ ಎಂಬ ಸರ್‌ನೇಮ್ ಸೇರಿಸಿಕೊಂಡಿರುವ ವಿಚಾರ ಅಭಿಮಾನಿಗಳಲ್ಲಿ ಸಾಕಷ್ಟು ಸಂತಸ ಮೂಡಿಸಿದೆ. ವೇದಿಕೆಯಲ್ಲಿ ಇದ್ದ ವಿಜಯ್ ದೇವರಕೊಂಡ ಅವರ ಕುಟುಂಬದ ಸದಸ್ಯರು ಸಹ ಸಂತಸ ವ್ಯಕ್ತಪಡಿಸಿದರು.

ಇನ್ನೊಂದೆಡೆ, ರಶ್ಮಿಕಾ ತಮ್ಮ ಚಿತ್ರರಂಗದ ವೃತ್ತಿಜೀವನದಲ್ಲೂ ಬ್ಯುಸಿಯಾಗಿದ್ದು, ಹಲವು ಬಹುಭಾಷಾ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ವಿಜಯ್ ದೇವರಕೊಂಡ ಕೂಡ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಜೀವನದ ಬ್ಯುಸಿಯ ನಡುವೆಯೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಸಮಯ ಮೀಸಲಿಟ್ಟು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಈ ಜೋಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com