'ಗಿಲ್ಲಿ' ಜೋಡಿ ಬ್ರೇಕಪ್? ವಿಜಯ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ತ್ರಿಷಾ; Insta ದಲ್ಲಿ Unfollow ಮಾಡಿದ ನಟಿ!

ವಿಜಯ್ ಮತ್ತು ತ್ರಿಶಾ ಕೆಲವು ಸಮಯದಿಂದ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಯ ಹಿಂದೆ ತ್ರಿಶಾ ಹೆಸರೂ ಕೇಳಿಬಂದಿತ್ತು.
Trisha and vijay
ತ್ರಿಷಾ ಮತ್ತು ವಿಜಯ್
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಜನ್ಮದಿನದಂದು ನಟಿ ತ್ರಿಷಾ ಕೃಷ್ಣನ್ ಯಾವುದೇ ಶುಭಾಶಯದ ಪೋಸ್ಟ್ ಹಾಕದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಜೊತೆಗೆ ತ್ರಿಷಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಫಾಲೋ ಮಾಡುತ್ತಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದ್ದು, ಇದು ಸಿನಿಮಾ ರಂಗದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈ ಬಾರಿ, ಸಾಮಾಜಿಕ ಮಾಧ್ಯಮದಲ್ಲಿ ಒಂದೇ ಒಂದು ಪೋಸ್ಟ್, ಸ್ಟೋರಿ ಹಾಕದೇ ಇರುವುದು ಉದ್ಯಮದಲ್ಲಿ ಸಂಚಲನ ಮೂಡಿಸಿದೆ.

ವಿಜಯ್ ಮತ್ತು ತ್ರಿಶಾ ಕೆಲವು ಸಮಯದಿಂದ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಯ ಹಿಂದೆ ತ್ರಿಶಾ ಹೆಸರೂ ಕೇಳಿಬಂದಿತ್ತು. ನಿನ್ನೆ, ವಿಜಯ್ ಹುಟ್ಟುಹಬ್ಬದಂದು, ತ್ರಿಶಾ ಸಂಪೂರ್ಣವಾಗಿ ಮೌನವಾಗಿದ್ದಲ್ಲದೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ.

ಈ ಮೂಲಕ ತ್ರಿಶಾ ತಮ್ಮ ದೀರ್ಘಕಾಲದ ಸಂಬಂಧಕ್ಕೆ ಪೂರ್ಣವಿರಾಮ ಹಾಕುವುದರೊಂದಿಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಇದರ ನಡುವೆ, ವಿಜಯ್ ಹಾಗೂ ಸಂಗೀತಾ ಅವರ ವೈವಾಹಿಕ ಜೀವನದ ಸಂಸಾರ ಮತ್ತೆ ಸರಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ ಎಂಬ ಮಾತುಗಳು ಹರಿದಾಡುತ್ತಿವೆ.

Trisha and vijay
ಕೊಲ್ಲೂರು ಮೂಕಾಂಬಿಕ ದರ್ಶನದ ನಂತರ ತಮಿಳುನಾಡು ಸಿಎಂ ವಿಜಯ್ ದಾಂಪತ್ಯದಲ್ಲಿ ಸಿಹಿಸುದ್ದಿ; ಸಂಗೀತಾ ಜೊತೆಗೆ ರಾಜಿ?

ಕುಟುಂಬದ ಹಿರಿಯರ ಸಂಧಾನದ ಬೆನ್ನಲ್ಲೇ ವಿಜಯ್ ತಮ್ಮ ಸಂಸಾರವನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ, ಇದೇ ಕಾರಣಕ್ಕೆ ತ್ರಿಷಾ ಈಗ ವಿಜಯ್ ಅವರಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com