10 ವರ್ಷಗಳ ದಾಂಪತ್ಯ ಜೀವನ ಅಂತ್ಯ: Reality show ವೇದಿಕೆಯಲ್ಲೇ Divorce ಘೋಷಣೆ, ನನ್ನ ಸ್ವಾತಂತ್ರ್ಯ ಆನಂದಿಸಬೇಕೆಂದ ಖ್ಯಾತ ನಟಿ..!

ತಮ್ಮ ವೈವಾಹಿಕ ಜೀವನದ ಬಗ್ಗೆ ಇದುವರೆಗೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. "ನಾನು ಮತ್ತು ಗೌರವ್ ವಿಚ್ಛೇದನ ಪಡೆಯುತ್ತಿದ್ದೇವೆ. ಹೌದು, ಕಳೆದ ಒಂದು ವರ್ಷದಿಂದ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಇದನ್ನು ಇದುವರೆಗೆ ಯಾರಿಗೂ ಹೇಳಿರಲಿಲ್ಲ. ಇದೇ ನನ್ನ ಜೀವನದ ದೊಡ್ಡ ರಹಸ್ಯ.
Akanksha Chamola and Gaurav Khanna
ಆಕಾಂಕ್ಷಾ ಚಮೋಲಾ ಮತ್ತು ಗೌರವ್ ಖನ್ನಾ
Updated on

ಮುಂಬೈ: ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಅಕಾಂಕ್ಷಾ ಚಮೋಲಾ ಮತ್ತು ಗೌರವ್ ಖನ್ನಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ರಿಯಾಲಿಟಿ ಶೋ 'ಲಾಕ್ ಅಪ್: ಸಚ್ ಯಾ ಸಜಾ 2' ವೇದಿಕೆಯಲ್ಲಿ ಅಕಾಂಕ್ಷಾ ತಮ್ಮ ವೈಯಕ್ತಿಕ ಜೀವನದ ದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದು, ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಇದಷ್ಟೇ ಅಲ್ಲ, ವಿಚ್ಛೇದನದ ಬಳಿಕ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳುವ ಯಾವುದೇ ಯೋಜನೆ ಇಲ್ಲ, ಸದ್ಯಕ್ಕೆ ತಮ್ಮ ಸ್ವಾತಂತ್ರ್ಯದ ಜೀವನವನ್ನು ಆನಂದಿಸಲು ಬಯಸುತ್ತಿರುವುದಾಗಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಕಾರ್ಯಕ್ರಮದ ನಿರೂಪಕರಾದ ಫರಾ ಖಾನ್ ಮತ್ತು ರಿತೇಶ್ ದೇಶ್ಮುಖ್ ಅವರೊಂದಿಗೆ ಮಾತನಾಡಿದ ಅಕಾಂಕ್ಷಾ, ತಮ್ಮ ವೈವಾಹಿಕ ಜೀವನದ ಬಗ್ಗೆ ಇದುವರೆಗೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. "ನಾನು ಮತ್ತು ಗೌರವ್ ವಿಚ್ಛೇದನ ಪಡೆಯುತ್ತಿದ್ದೇವೆ. ಹೌದು, ಕಳೆದ ಒಂದು ವರ್ಷದಿಂದ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಇದನ್ನು ಇದುವರೆಗೆ ಯಾರಿಗೂ ಹೇಳಿರಲಿಲ್ಲ. ಇದೇ ನನ್ನ ಜೀವನದ ದೊಡ್ಡ ರಹಸ್ಯ," ಎಂದು ಭಾವುಕರಾಗಿ ಹೇಳಿದ್ದಾರೆ.

ಇದೇ ವೇಳ ವಿಚ್ಛೇದನದ ಹಿಂದಿನ ಕಾರಣಗಳ ಬಗ್ಗೆ ಮಾತನಾಡಿರುವ ಅಕಾಂಕ್ಷಾ, ಇದು ಯಾವುದೇ ಜಗಳ ಅಥವಾ ವೈಮನಸ್ಸಿನ ಪರಿಣಾಮವಲ್ಲ. ಜೀವನದಲ್ಲಿ ಇಬ್ಬರ ಆಲೋಚನೆಗಳು ಮತ್ತು ಭವಿಷ್ಯದ ಗುರಿಗಳು ವಿಭಿನ್ನವಾಗಿರುವ ಕಾರಣ, ಪರಸ್ಪರ ಗೌರವದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಈ ವಿಚಾರವನ್ನು ನಮ್ಮೊಳಗೆ ಇಟ್ಟುಕೊಂಡಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ದ್ವೇಷವಿಲ್ಲ. ಈಗಲೂ ಮಾತನಾಡುತ್ತೇವೆ. ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಆದರೆ, ಜೀವನದಲ್ಲಿ ನಾವು ಬಯಸುವ ಭವಿಷ್ಯ ವಿಭಿನ್ನವಾಗಿದೆ. ನಾವು ಒಳ್ಳೆಯ ಸ್ನೇಹಿತರಾಗಿರಬಹುದು. ಆದರೆ, ಜೀವನ ಸಂಗಾತಿಗಳಾಗಿ ಹೊಂದಾಣಿಕೆ ಇಲ್ಲ ಎಂಬುದನ್ನು ಅರಿತುಕೊಂಡಿದ್ದೇವೆ. ಆದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.

Akanksha Chamola and Gaurav Khanna
ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ ಮೊಹ್ಸಿನ್ ಅಖ್ತರ್ ಮತ್ತೊಂದು ಮದುವೆ!

ಬಿಗ್ ಬಾಸ್ ಸಮಯದಲ್ಲೇ ದೂರವಾಗಿತ್ತು ಸಂಬಂಧ

ಕಾರ್ಯಕ್ರಮದ ವೇಳೆ ರಿತೇಶ್ ದೇಶ್ಮುಖ್, "ಗೌರವ್ ಬಿಗ್ ಬಾಸ್‌ನಲ್ಲಿ ಇದ್ದ ಸಮಯದಲ್ಲೇ ನಿಮ್ಮಿಬ್ಬರ ನಡುವೆ ದೂರ ಶುರುವಾಯಿತೇ?" ಎಂದು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಅಕಾಂಕ್ಷಾ, "ಹೌದು. ಅದೇ ಸಮಯದಲ್ಲಿ ನಾವು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೆವು. ಕೆಲ ಸಮಯ ದೂರವಿದ್ದರೆ ಎಲ್ಲವೂ ಸರಿಯಾಗಬಹುದು ಎಂದು ನಮ್ಮ ಕುಟುಂಬದವರು ಭಾವಿಸಿದ್ದರು.

ನಾವು ಪ್ರತಿದಿನ ಮಾತನಾಡುತ್ತಿದ್ದೆವು. ಕುಟುಂಬದ ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗುತ್ತಿದ್ದೆವು. ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಬೆಂಬಲ ನೀಡುತ್ತಿದ್ದೆವು. ಹೊರಗಿನಿಂದ ನೋಡಿದವರಿಗೆ ನಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇಲ್ಲವೆನ್ನಿಸುತ್ತಿತ್ತು. ಆದರೆ, ನಮ್ಮೊಳಗೆ ಗಂಡ-ಹೆಂಡತಿಯಾಗಿ ಬದುಕುತ್ತಿರುವ ಭಾವನೆ ಕಳೆದುಹೋಗಿತ್ತು. ಎಲ್ಲವೂ ಸಹಜವಾಗುತ್ತದೆ ಎಂದು ನಾವು ಕೂಡ ಕಾಯುತ್ತಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಮುಂದುವರಿದು, "ಈ ವಿಚಾರವನ್ನು ಈಗ ಸಾರ್ವಜನಿಕವಾಗಿ ಹೇಳುತ್ತಿರುವುದರಿಂದ ನಮ್ಮ ಕುಟುಂಬಕ್ಕೂ ಇದು ದೊಡ್ಡ ಸುದ್ದಿಯಾಗಬಹುದು. ಆದರೆ ಸತ್ಯವನ್ನು ಮರೆಮಾಚುವುದಕ್ಕಿಂತ ಹೇಳುವುದು ಉತ್ತಮ ಎಂದು ಭಾವಿಸಿದ್ದೇವೆ," ಎಂದರು.

'ಈಗ ನನಗೆ ಸ್ವಾತಂತ್ರ್ಯದ ಜೀವನ ಬೇಕು'

ಇತ್ತೀಚಿನ ಸಂಚಿಕೆಯಲ್ಲಿ ಸ್ಪರ್ಧಿ ಶ್ರೇಯಾ ಕಲ್ರಾ, "ಮತ್ತೆ ಪ್ರೀತಿಯಲ್ಲಿ ಬೀಳುವ ಯೋಚನೆ ಇದೆಯೇ?" ಎಂದು ಕೇಳಿದಾಗ ಅಕಾಂಕ್ಷಾ. "ಸದ್ಯಕ್ಕೆ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳುವ ಯೋಚನೆ ಇಲ್ಲ. ನಾನು ಈಗ ನನ್ನ ಸ್ವಾತಂತ್ರ್ಯವನ್ನು ಆನಂದಿಸಲು ಬಯಸುತ್ತೇನೆ. ನಾನು ಕೇವಲ 24ನೇ ವಯಸ್ಸಿನಲ್ಲಿ ಮದುವೆಯಾದೆ. ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳಾಗಿದ್ದೆ. ಕಳೆದ ಹತ್ತು ವರ್ಷಗಳಿಂದ ವೈವಾಹಿಕ ಜೀವನದಲ್ಲಿದ್ದೆ. ಈಗ ಮೊದಲ ಬಾರಿಗೆ ನನ್ನ ಜೀವನವನ್ನು ನನ್ನ ರೀತಿಯಲ್ಲಿ ಬದುಕುವ ಅವಕಾಶ ಸಿಕ್ಕಿದೆ. ಹೊಸ ಅನುಭವಗಳನ್ನು ಪಡೆಯಬೇಕು, ನನ್ನನ್ನು ನಾನು ಅರಿತುಕೊಳ್ಳಬೇಕು. ಆದ್ದರಿಂದ ಈಗ ಮತ್ತೊಂದು ಸಂಬಂಧಕ್ಕೆ ಹೋಗುವ ಮನಸ್ಸಿಲ್ಲ," ಎಂದು ಹೇಳಿದ್ದಾರೆ.

ಅಕಾಂಕ್ಷಾ ಮತ್ತು ಗೌರವ್ ಖನ್ನಾ ಜೋಡಿ ಹಲವು ವರ್ಷಗಳಿಂದ ಕಿರುತೆರೆಯ ಜನಪ್ರಿಯ ದಂಪತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಇಬ್ಬರೂ ಪರಸ್ಪರ ಬೆಂಬಲಿಸುತ್ತಿರುವುದು, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದ್ದರಿಂದ ಅವರ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.

ಆದರೆ, ಯಾವುದೇ ಆರೋಪ-ಪ್ರತ್ಯಾರೋಪಗಳಿಲ್ಲದೆ, ಪರಸ್ಪರ ಗೌರವ ಉಳಿಸಿಕೊಂಡೇ ಈ ಸಂಬಂಧವನ್ನು ಮುಕ್ತಾಯಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಅಕಾಂಕ್ಷಾ ಸ್ಪಷ್ಟಪಡಿಸಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸ್ಟಾರ್ ಸ್ಪರ್ಧಿಗಳೊಂದಿಗೆ ಆರಂಭವಾದ ಲಾಕ್ ಅಪ್ 2

ಜೂನ್ 27ರಂದು ನೆಟ್‌ಫ್ಲಿಕ್ಸ್ ಇಂಡಿಯಾನಲ್ಲಿ ಪ್ರಾರಂಭವಾದ 'ಲಾಕ್ ಅಪ್: ಸಚ್ ಯಾ ಸಜಾ' ಎರಡನೇ ಆವೃತ್ತಿಯಲ್ಲಿ ಹಲವು ಜನಪ್ರಿಯ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ.

ಸುನೀತಾ ಅಹುಜಾ, ರಾಮ್ ಕಪೂರ್, ಶಿವಾಂಗಿ ಜೋಶಿ, ಅಕಾಂಕ್ಷಾ ಚೌಧರಿ, ಯೋಗೇಶ್ ರಾವತ್, ರಿಯಾಜ್ ಅಲಿ, ಧೀರಜ್ ಧೂಪರ್, ಶ್ರೇಯಾ ಕಲ್ರಾ, ಸೂಫಿ ಮೊತಿವಾಲಾ ಸೇರಿದಂತೆ ಅನೇಕ ಮಂದಿ ಈ ಬಾರಿಯ ರಿಯಾಲಿಟಿ ಶೋನಲ್ಲಿ ತಮ್ಮ ನಿಜ ಜೀವನದ ಅನುಭವಗಳು ಮತ್ತು ರಹಸ್ಯಗಳನ್ನು ಹಂಚಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com