'ಆತ ಹಾಗೆ ಹೇಳಬಾರದಿತ್ತು'..: ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದ ಕುರಿತು ಮೌನ ಮುರಿದ ನಟಿ Trisha Krishnan!

ಉದ್ಯಮಿ ವರುಣ್‌ ಮಣಿಯನ್‌ ಎಂಬುವವರನ್ನು ವರಿಸಲು ತ್ರಿಶಾ ನಿರ್ಧರಿಸಿದ್ದರು. ಅದರಂತೆ 2015ರಲ್ಲಿಯೇ ತ್ರಿಷಾ ನಿಶ್ಚಿತಾರ್ಥ ಜರುಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಎಂಗೇಜ್ಮೆಂಟ್‌ ಮುರಿದುಬಿತ್ತು. ಆಗ ಸಾಕಷ್ಟು ಸುದ್ದಿಯಾಗಿತ್ತು ಈ ವಿಚಾರ.
Trisha Krishnan
ನಟಿ ತ್ರಿಶಾ ಕೃಷ್ಣನ್
Updated on

ಚೆನ್ನೈ: ತಮಿಳು ನಟ ದಳಪತಿ ವಿಜಯ್ ದಾಂಪತ್ಯ ಜೀವನ ಮತ್ತು ವಿಚ್ಚೇಧನ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ನಟಿ ತ್ರಿಶಾ ಅವರು ತಮ್ಮ ವಿವಾಹ ನಿಶ್ಚಿತಾರ್ಥ ಮುರಿದುಬಿದ್ದ ಕುರಿತು ಮೊದಲ ಬಾರಿಗೆ ಮೌನಮುರಿದಿದ್ದಾರೆ.

ಉದ್ಯಮಿ ವರುಣ್‌ ಮಣಿಯನ್‌ ಎಂಬುವವರನ್ನು ವರಿಸಲು ತ್ರಿಶಾ ನಿರ್ಧರಿಸಿದ್ದರು. ಅದರಂತೆ 2015ರಲ್ಲಿಯೇ ತ್ರಿಷಾ ನಿಶ್ಚಿತಾರ್ಥ ಜರುಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಎಂಗೇಜ್ಮೆಂಟ್‌ ಮುರಿದುಬಿತ್ತು. ಆಗ ಸಾಕಷ್ಟು ಸುದ್ದಿಯಾಗಿತ್ತು ಈ ವಿಚಾರ.

ಆದರೆ, ಈ ಕುರಿತು ತ್ರಿಷಾ ಬಾಯಿಬಿಟ್ಟಿರಲಿಲ್ಲ. ಇದೀಗ ಬರೊಬ್ಬರಿ ಒಂದು ದಶಕದ ಬಳಿಕ ಕೊನೆಗೂ ನಟಿ ತ್ರಿಶಾ ವಿವಾಹ ನಿಶ್ಚಿತಾರ್ಥ ಮುರಿದುಬಿದ್ದ ಕುರಿತು ಮೌನ ಮುರಿದಿದ್ದಾರೆ.

ನಟಿ ತ್ರಿಶಾ ಹೇಳಿದ್ದೇನು?

ತಮಿಳಿನ ಶೋವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ನಟಿ ತ್ರಿಶಾ, 'ವರುಣ್ ಕುಟುಂಬದ ಅಸಮ್ಮತಿ ಹಾಗೂ ವೃತ್ತಿ ಬಿಡುವ ಒತ್ತಡದಿಂದ ಈ ಮದುವೆ ಮುರಿದುಬಿತ್ತು' ಎಂದು ಹೇಳಿದ್ದಾರೆ.

Trisha Krishnan
ತ್ರಿಶಾ ಪ್ರೀತಿಸುತ್ತಿರುವ ವ್ಯಕ್ತಿ ವಿಜಯ್ ಅಲ್ಲ: ವರುಣ್ ಮಣಿಯನ್ ಜೊತೆ ತ್ರಿಶಾ ಮದುವೆ ನಿಲ್ಲಲು ಕಾರಣ ಉದಯನಿಧಿ ಸ್ಟಾಲಿನ್!

'ನನಗೆ ಅಭಿನಯ, ಸಿನಿಮಾ ಬಹಳ ಮುಖ್ಯ. ಇದಕ್ಕೋಸ್ಕರವೇ ನನ್ನ ಮದವೆ ಮುರಿದಿದ್ದು, ಬ್ರೇಕ್ ಅಪ್ ಆಯ್ತು. ಆ ವ್ಯಕ್ತಿ ನನಗೆ ಮದುವೆ ನಂತರ ಸಿನಿಮಾದಲ್ಲಿ ನಟಿಸಬೇಡ ಎಂದ. ನಾನು ಸಿನಿಮಾ ಬಿಡುವುದಿಲ್ಲ, ನಿನ್ನೆ ಬಿಡುತ್ತೇನೆ ಎಂದು ಬ್ರೇಕ್‌ ಅಪ್‌ ಮಾಡಿಕೊಂಡೆ.

ನಾನು ನಟನೆಯಿಂದ ಬ್ರೇಕ್‌ ತಗೊಳ್ಳೋದು ಪ್ರೆಗ್ನೆಂಟ್‌ ಆದರೆ ಮಾತ್ರ. ಒಂದ್‌ ಗ್ಯಾಪ್‌ ನಂತರ ನನ್ನ ಇಮೇಜ್‌ಗೆ ತಕ್ಕ ಹಾಗೆ ಮತ್ತೆ ನಟನೆ ಮುಂದುವರೆಸುತ್ತೇನೆ. ನನ್ನ ಕೊನೆ ಉಸಿರು ಇರುವವರೆಗೂ ಅಭಿನಯ ಮಾಡುತ್ತೇನೆ' ಎಂದು ಹೇಳಿದ್ದಾರೆ.

ತ್ರಿಶಾ ಮದುವೆಗೆ ವರುಣ್ ಕುಟುಂಬಸ್ಥರ ವಿರೋಧ

ಮತ್ತೊಂದು ಮೂಲಗಳ ಪ್ರಕಾರ ತ್ರಿಶಾ ಮತ್ತು ವರಣ್ ಮದುವೆಗೆ ವರುಣ್ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ವರುಣ್ ಕುಟುಂಬ ಉದ್ಯಮದ ಹಿನ್ನೆಲೆ ಹೊಂದಿತ್ತು. ಅವರು ನಟಿಯನ್ನು ಮದುವೆ ಆಗುತ್ತಿರುವುದು ಕುಟುಂಬದವರಿಗೆ ಇಷ್ಟವೇ ಇರಲಿಲ್ಲವಂತೆ. ಹೀಗಾಗಿ, ಕುಟುಂಬದವರು ಅಸಮಾಧಾನ ಹೊರಹಾಕಿದ್ದರು.

Trisha Krishnan
ತ್ರಿಶಾ ಕೃಷ್ಣನ್ ಜೊತೆ ಕಾಣಿಸಿಕೊಂಡ ವಿಜಯ್; ಅದಕ್ಕೂ ಕೆಲವೇ ಗಂಟೆಗಳ ಮೊದಲು ನಟನ ಬಾಡಿಗಾರ್ಡ್ ರಹಸ್ಯ ಪೋಸ್ಟ್!

ಉದ್ಯಮ ಕುಟುಂಬದ ಹಿನ್ನೆಲೆ ಹೊಂದಿರುವವರನ್ನು ಮದುವೆ ಆಗುವಂತೆ ಕುಟುಂಬದವರು ಒತ್ತಾಯ ಹೇರಿದ್ದರು. ತ್ರಿಷಾಗೂ ವರುಣ ಅವರನ್ನು ಮದುವೆ ಆಗಿದ್ದರೆ ಸಾಕಷ್ಟು ತೊಂದರೆ ಆಗುತ್ತಿತ್ತಂತೆ. ಇದಕ್ಕೆ ಕಾರಣವೂ ಇದ್ದು ತ್ರಿಷಾ ಅವರನ್ನು ನಿಯಂತ್ರಿಸಲು ವರುಣ್ ಇಷ್ಟಪಡುತ್ತಿದ್ದರು. ಅಲ್ಲದೆ, ನಟನೆಯನ್ನು ತೊರೆಯುವಂತೆ ಅವರು ಒತ್ತಡ ಹೇರಿದ್ದರು ಎಂದು ವರದಿ ಆಗಿದೆ.

ಈ ಎರಡೂ ವಿಚಾರಕ್ಕೆ ಇಬ್ಬರ ಮಧ್ಯೆ ತಿಕ್ಕಾಟ ಆರಂಭ ಆಯಿತು. ಇದು ಬೇರೆಯದೇ ಹಂತಕ್ಕೆ ಹೋಗಿ ಇಬ್ಬರೂ ವಿವಾಹ ನಿಶ್ಚಿತಾರ್ಥ ಮುರಿದುಕೊಂಡರು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com