

ಬೆಂಗಳೂರು: ಬಾಸ್ ಚಿತ್ರತಂಡಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಈ ಸಂಬಂಧ ನಟ ದರ್ಶನ್ ಪರ ವಕೀಲರು ದೂರು ದಾಖಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಥಾಹಂದರ ಹೊಂದಿರುವ 'ಬಾಸ್' ವಿರುದ್ಧ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಸತ್ಯಾಸತ್ಯತೇ ತಿಳಿಯದೇ ಸಿನಿಮಾ ಮೂಲಕ ಘಟನೆಯನ್ನು ವೈಭವೀಕರಿಸುವುದು ಸರಿಯಲ್ಲ ಎಂದು ದರ್ಶನ್ ಪರ ವಕೀಲರು ವಾದಿಸಿದರು. ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ ಎನ್ನಲಾದ ಬಾಸ್ ಚಿತ್ರದ ಬಿಡುಗಡೆಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ದರ್ಶನ್ ಪರ ವಕೀಲರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
Advertisement