ಥೂ..ಏನಿದು ಹಾಡಿನ ಸಾಲುಗಳು..: ‘KD: The Devil' ಚಿತ್ರದ ‘ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡಿಗೆ ನೆಟ್ಟಿಗರ ಆಕ್ರೋಶ

ಈ ಚಿತ್ರದ ‘ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡಿನ ಸಾಹಿತ್ಯ ವಿವಾದಕ್ಕೆ ಕಾರಣವಾಗಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯಿಸಿರುವ ಈ ವಿಶೇಷ ಹಾಡಿನ ಪದಗಳು “ಅಶ್ಲೀಲವಾಗಿವೆ, ಹೆಣ್ಣನ್ನು ತೀರಾ ಕೆಳಮಟ್ಟದಲ್ಲಿ ಬಣ್ಣಿಸಲಾಗಿದೆ.
Sanjay Dutt and Nora Fateri
‘ಸರ್ಸೆ ನಿನ್ನ ಸೆರಗಾ ಸರ್ಸೆ ಹಾಡಿನಲ್ಲಿ ಸಂಜಯ್ ದತ್ ಮತ್ತು ನೋರಾ ಫತೇರಿ
Updated on

ಟಿವಿಕೆ ಅಧ್ಯಕ್ಷ ವಿಜಯ್ ಅವರ ‘ಜನ ನಾಯಕನ್’ ಮತ್ತು ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಗಳ ನಿರ್ಮಾಣ ಸಂಸ್ಥೆಯಾದ KVN Productions ಈಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ. ಧ್ರುವ ಸರ್ಜಾ ನಟನೆಯ ಮತ್ತು ನಿರ್ದೇಶಕ ಪ್ರೇಮ್ ನಿರ್ದೇಶನದ ಕನ್ನಡ ಚಿತ್ರ ‘ಕೆಡಿ: ದ ಡೆವಿಲ್’ ಚಿತ್ರದ ಹಾಡಿನ ಬಗ್ಗೆ ಸಾಹಿತ್ಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.

ಈ ಚಿತ್ರದ ‘ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡಿನ ಸಾಹಿತ್ಯ ವಿವಾದಕ್ಕೆ ಕಾರಣವಾಗಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯಿಸಿರುವ ಈ ವಿಶೇಷ ಹಾಡಿನ ಪದಗಳು “ಅಶ್ಲೀಲವಾಗಿವೆ, ಹೆಣ್ಣನ್ನು ತೀರಾ ಕೆಳಮಟ್ಟದಲ್ಲಿ ಬಣ್ಣಿಸಲಾಗಿದೆ, ಬೇಡುವೆನು ವರವನ್ನು ಕೊಡುತಾಯಿ ಜನ್ಮವನು ಎಂದು ಸಾಹಿತ್ಯ ಬರೆದ ನಿರ್ದೇಶಕ ಪ್ರೇಮ್ ಅವರೇನಾ ಈ ಹಾಡಿನ ಸಾಲುಗಳನ್ನು ಬರೆದಿದ್ದು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ, ಈ ಹಾಡನ್ನು ಯೂಟ್ಯೂಬ್‌ನಲ್ಲಿ ಪ್ರೈವೆಟ್ ಮಾಡಲಾಗಿದೆ.

Sanjay Dutt and Nora Fateri
ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಚಿತ್ರ ಬಿಡುಗಡೆಗೆ ಹೊಸ ದಿನಾಂಕ ಘೋಷಣೆ

ಯೂಟ್ಯೂಬ್ ನಲ್ಲಿ ಪ್ರೈವೆಟ್, ಭಾಷಾ ಆವೃತ್ತಿ ತೆಗೆದುಹಾಕಲಾಗಿದೆ

ಈ ಹಾಡಿನ ವಿರುದ್ಧ ಆಕ್ರೋಶ, ಬೇಸರ ಹೊರಹಾಕಿರುವ ಕನ್ನಡ ಅಭಿಮಾನಿಗಳು, ಚಿ. ಉದಯ ಶಂಕರ್ ಮತ್ತು ಆರ್.ಎನ್. ಜಯಗೋಪಾಲ್ ಅವರಂತಹ ದಿಗ್ಗಜ ಗೀತರಚನಾಕಾರರ ಕಾಲವನ್ನು ನೆನೆದು, ಇಂದಿನ ಹಾಡುಗಳ ಗುಣಮಟ್ಟ ಕುಸಿದಿರುವುದಾಗಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಹಾಡಿನ ಪ್ರಚಾರ ವಿಡಿಯೋ ಮಾತ್ರ ಲಭ್ಯವಿದ್ದು, ಸಂಪೂರ್ಣ ಹಾಡಿನ ಎಲ್ಲ ಭಾಷಾ ಆವೃತ್ತಿಗಳನ್ನು ತೆಗೆದುಹಾಕಲಾಗಿದೆ.

ಇದಲ್ಲದೆ, ಈ ಹಾಡಿನ ಹಿಂದಿ ಆವೃತ್ತಿ ‘ಸರ್ಕೆ ಚುನರ್ ತೆರಿ ಸರ್ಕೆ’ ಇನ್ನಷ್ಟು ಟೀಕೆಗೆ ಗುರಿಯಾಗಿದೆ. ‘ಕೆಡಿ: ದ ಡೆವಿಲ್’ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಈ ಪ್ಯಾನ್-ಇಂಡಿಯಾ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ.

ಸೆನ್ಸಾರ್ ಮಂಡಳಿ ವಿರುದ್ಧ ಆಕ್ಷೇಪ

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಿಂದಿ ಸಾಹಿತ್ಯ ಮಹಿಳೆಯರನ್ನು ಅವಮಾನಿಸುತ್ತದೆ ಎಂದು ಟೀಕಿಸಿದ್ದು, ಸೆನ್ಸಾರ್ ಮಂಡಳಿ ಈ ಹಾಡನ್ನು ಹೇಗೆ ಅನುಮೋದಿಸಿತು ಎಂಬ ಪ್ರಶ್ನೆ ಕೂಡ ಎತ್ತಲಾಗಿದೆ. ಹಾಡಿನಲ್ಲಿರುವ ಅತಿಯಾದ ಲೈಂಗಿಕ ಪ್ರಚೋದನೆಗಳ ಸೂಚನೆಗಳ ಹಿನ್ನೆಲೆ, ಇದನ್ನು ತೆಗೆದುಹಾಕುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

ವಾಣಿಜ್ಯ ಗೀತರಚನೆ ಇಷ್ಟೊಂದು ಮಟ್ಟಕ್ಕೆ ಕುಸಿದಿರುವುದು ದುಃಖಕರ ಎಂದು ಹಿನ್ನಲೆ ಗಾಯಕ ಅರ್ಮಾನ್ ಮಲಿಕ್ ಹೇಳಿದ್ದಾರೆ. ನನಗೆ ಹೇಳಲು ನಿಜವಾಗಿಯೂ ಪದಗಳೇ ಇಲ್ಲ ಎಂದು ಅವರು X ನಲ್ಲಿ ಬರೆದಿದ್ದಾರೆ.

ಈ ವಿವಾದದಿಂದ KVN Productions ಮತ್ತೊಮ್ಮೆ ತಪ್ಪು ಕಾರಣಗಳಿಂದ ಸುದ್ದಿಯಲ್ಲಿದೆ. ಸಂಸ್ಥೆಯ ಬಹು ನಿರೀಕ್ಷಿತ ಚಿತ್ರ ‘ಜನ ನಾಯಕನ್’, ತಮಿಳು ಸೂಪರ್‌ಸ್ಟಾರ್ ವಿಜಯ್ ಅವರ ಕೊನೆ ಚಿತ್ರವೆಂದು ಹೇಳಲಾಗುತ್ತಿದ್ದು, ಇನ್ನೂ ಬಿಡುಗಡೆಯಾಗಿಲ್ಲ. ಸೆನ್ಸಾರ್ ಮಂಡಳಿ (CBFC) ಪ್ರಮಾಣೀಕರಣ ಬಾಕಿ ಇರುವುದರಿಂದ ಚಿತ್ರ ಅನಿಶ್ಚಿತಾವಧಿಗೆ ಮುಂದೂಡಲಾಗಿದೆ.

ಯಶ್ ನಿರ್ಮಾಣದಲ್ಲಿ ಭಾಗಿಯಾಗಿರುವ ಮತ್ತು KVN Productions ಸಹ ನಿರ್ಮಿಸಿರುವ ‘ಟಾಕ್ಸಿಕ್’ ಚಿತ್ರವನ್ನು ಜೂನ್ 4 ಕ್ಕೆ ಬಿಡುಗಡೆ ಮುಂದೂಡಲಾಗಿದೆ. ಗೀತು ಮೋಹನದಾಸ್ ನಿರ್ದೇಶನದ ಈ ಚಿತ್ರ ಇದೇ ಮಾರ್ಚ್ 19ರಂದು ಬಿಡುಗಡೆಯಾಗಬೇಕಾಗಿತ್ತು. ಟಾಕ್ಸಿಕ್ ಚಿತ್ರದ ಟೀಸರ್ ಕೂಡ ತೀವ್ರ ಟೀಕೆಗೆ ಗುರಿಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com