ಪ್ರತಿ ವ್ಯಕ್ತಿ ತನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಹೇಳಲು ಬಯಸುವುದಿಲ್ಲ": ವಿವಾಹ ವದಂತಿಗೆ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ...

ಇತ್ತೀಚೆಗೆ ಸ್ಟಾರ್ ನಾಯಕಿ ಅನುಷ್ಕಾ ಶೆಟ್ಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಇತ್ತೀಚಿನ ಪ್ರಕಟವಾದ ಸುದ್ದಿಗಳು...
Anushka shetty
ಅನುಷ್ಕಾ ಶೆಟ್ಟಿ online desk
Updated on

ಬೆಂಗಳೂರು: ಇತ್ತೀಚೆಗೆ ನಟಿ ಅನುಷ್ಕಾ ಶೆಟ್ಟಿ ವಿವಾಹದ ಕುರಿತ ಸುದ್ದಿಗಳು ಪ್ರಕಟವಾಗಿದ್ದವು. ಬೆಂಗಳೂರು ಮೂಲದ ಉದ್ಯಮಿಯನ್ನು ಅವರು ವರಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಈ ವದಂತಿಗಳ ಬಗ್ಗೆ ಸ್ವತಃ ಅನುಷ್ಕಾ ಶೆಟ್ಟಿ ತಂಡ ಸ್ಪಷ್ಟನೆ ನೀಡಿದೆ. ಮಾಧ್ಯಮಗಳಲ್ಲಿ ಅನುಷ್ಕಾ ಶೆಟ್ಟಿ ವಿವಾಹಕ್ಕೆ ಸಂಬಂಧಿಸಿದಂತೆ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ, ತಂಡ ಸ್ಪಷ್ಟನೆ ನೀಡಿದೆ.

ಇತ್ತೀಚೆಗೆ ಸ್ಟಾರ್ ನಾಯಕಿ ಅನುಷ್ಕಾ ಶೆಟ್ಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಇತ್ತೀಚಿನ ಪ್ರಕಟವಾದ ಸುದ್ದಿಗಳಲ್ಲಿ ಸತ್ಯವಿಲ್ಲ ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ.

ಈ ಹಿಂದೆಯೂ ಅನುಷ್ಕಾ ಶೆಟ್ಟಿ ವಿವಾಹದ ವಿಷಯವಾಗಿ ಸಾಕಷ್ಟು ಊಹಾಪೋಹಗಳು ಉಂಟಾಗಿದ್ದವು. ಅನುಷ್ಕಾ ಅಂತಹ ವದಂತಿಗಳಿಗೆ ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ. ಈಗ ಅವರ ತಂಡ ಅನುಷ್ಕಾ ಅವರ ಮದುವೆಯ ಸುದ್ದಿಯನ್ನು ನಿರಾಕರಿಸುವ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

Anushka shetty
ಸೋಶಿಯಲ್ ಮೀಡಿಯಾದಿಂದ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ದೂರ, ದೂರ! ಕಾರಣವೇನು?

ಊಹಾಪೋಹ ಮಾಡುವುದು, ಭವಿಷ್ಯ ನುಡಿಯುವುದು ಮತ್ತು ಅನಧಿಕೃತ ಮಾಹಿತಿಯನ್ನು ಪದೇ ಪದೇ ಪ್ರಕಟಿಸುವುದು ಸರಿಯಲ್ಲ’ ಎಂದು ಅನುಷ್ಕಾ ತಂಡ ಹೇಳಿದೆ.

ಅನುಷ್ಕಾ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತಾರೆ. ಅಂತಹ ಮಹಿಳೆಯನ್ನು ಈ ರೀತಿ ಗುರಿಯಾಗಿಸಿಕೊಳ್ಳುವುದು ತಪ್ಪು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಹೇಳಲು ಬಯಸುವುದಿಲ್ಲ. ಪ್ರತಿಯೊಬ್ಬರೂ ಆ ನಿರ್ಧಾರವನ್ನು ಗೌರವಿಸಬೇಕು. ಮದುವೆ ವೈಯಕ್ತಿಕ ವಿಷಯ. ಇದು ಬ್ರೇಕಿಂಗ್ ನ್ಯೂಸ್ ಅಲ್ಲ ಅನುಷ್ಕಾ ತಂಡ ಬಲವಾದ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com