

ಬೆಂಗಳೂರಿನ ಪ್ರತಿಷ್ಠಿತ ಎಎಂಬಿ ಸಿನಿಮಾಸ್ (AMB Cinemas), ಚಲನಚಿತ್ರ ಪ್ರೇಮಿಗಳಿಗಾಗಿ ವಿಶೇಷ ಯುಗಾದಿ ಕೊಡುಗೆಗಳನ್ನು ಘೋಷಿಸಿದೆ. ಈ ವಿಶೇಷ ಆಫರ್‌ಗಳು ಲವ್ ಮಾಕ್ಟೇಲ್ 3, ಧುರಂಧರ್ 2 ಮತ್ತು ಉಸ್ತಾದ್ ಭಗತ್ ಸಿಂಗ್ ಚಿತ್ರಗಳಿಗೆ ಅನ್ವಯವಾಗಲಿವೆ.
ಯುಗಾದಿ ವಿಶೇಷ ಕೊಡುಗೆಗಳು
ಬೆಳಗಿನ ಪ್ರದರ್ಶನಗಳ ಆಫರ್:
ಬೆಳಗ್ಗೆ 11 ಗಂಟೆಯೊಳಗಿನ ಪ್ರದರ್ಶನಗಳಿಗೆ ಟಿಕೆಟ್ ಕಾಯ್ದಿರಿಸುವ ಪ್ರೇಕ್ಷಕರಿಗೆ ಉಚಿತ ಪಾಪ್‌ಕಾರ್ನ್ ಮತ್ತು ಉಡುಗೊರೆಗಳನ್ನು ನೀಡಲಾಗುತ್ತಿದೆ. ಈ ಕೊಡುಗೆಯು ನಿನ್ನೆಯಿಂದ ಮಾರ್ಚ್ 26 ರವರೆಗೆ ಲಭ್ಯವಿರುತ್ತದೆ.
ಬುಕ್ ಮೈ ಶೋ (BookMyShow) ಆಫರ್
ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸುವ ಗ್ರಾಹಕರು ‘AMB100’ ಕೋಡ್ ಬಳಸುವ ಮೂಲಕ 100 ರೂ. ರಿಯಾಯಿತಿ ಪಡೆಯಬಹುದು.
ಕರ್ನಾಟಕದ ಮೊದಲ ‘ಡಾಲ್ಬಿ ಸಿನಿಮಾ’ ಅನುಭವ
ಎಎಂಬಿ ಸಿನಿಮಾಸ್ ಕರ್ನಾಟಕಕ್ಕೆ ಮೊದಲ ಬಾರಿಗೆ ‘ಡಾಲ್ಬಿ ಸಿನಿಮಾ’ ಮಾದರಿಯನ್ನು ಪರಿಚಯಿಸಿದೆ. ಇದು ಅತ್ಯಂತ ಸ್ಪಷ್ಟವಾದ ದೃಶ್ಯ ವೈಭವ, ಅದ್ಭುತ ಕಾಂಟ್ರಾಸ್ಟ್ ಮತ್ತು ತಲ್ಲೀನಗೊಳಿಸುವ ಧ್ವನಿ ವ್ಯವಸ್ಥೆಯನ್ನು ಹೊಂದಿದ್ದು, ಪ್ರೇಕ್ಷಕರಿಗೆ ಸಿನಿಮೀಯ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ.
ಐಷಾರಾಮಿ, ಕೈಗೆಟುಕುವ ದರದಲ್ಲಿ ಸಿನಿಮಾ ಅನುಭವ
ಎಎಂಬಿ ಸಿನಿಮಾಸ್ ಅತ್ಯಾಧುನಿಕ ಪ್ರೊಜೆಕ್ಷನ್ ತಂತ್ರಜ್ಞಾನ, ಸುಧಾರಿತ ಧ್ವನಿ ವ್ಯವಸ್ಥೆ ಮತ್ತು ಐಷಾರಾಮಿ ಆಸನಗಳೊಂದಿಗೆ ‘7-ಸ್ಟಾರ್’ ಅನುಭವವನ್ನು ನೀಡುತ್ತದೆ. ಐಷಾರಾಮಿ ಸೌಲಭ್ಯವಿದ್ದರೂ ಇಲ್ಲಿನ ಟಿಕೆಟ್ ದರಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ ಎಂಬುದು ವಿಶೇಷ. ಇಷ್ಟೇ ಅಲ್ಲದೆ, ಇಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಾಜಾವಾಗಿ ತಯಾರಿಸಿ ನೀಡಲಾಗುತ್ತದೆ.
Advertisement