Dhurandhar: The Revenge: ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆ ಉಡೀಸ್; ಬಿಡುಗಡೆಯಾದ 11 ದಿನಗಳಲ್ಲಿ 1,365 ಕೋಟಿ ರೂ ಕಲೆಕ್ಷನ್!

ಜಾಗತಿಕ ಬಾಕ್ಸ್ ಆಫೀಸ್‌ನಿಂದ 342 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ರಸ್ತುತ ಭಾರತದ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹ 867 ಕೋಟಿ ರೂ. ಆಗಿದೆ.
Dhurandhar: The Revenge Poster
ಧುರಂಧರ: ದಿ ರಿವೆಂಜ್ ಸಿನಿಮಾ ಫೋಸ್ಟರ್
Updated on

ನವದೆಹಲಿ: ಆದಿತ್ಯ ಧರ್ ನಿರ್ದೇಶನದ "ಧುರಂಧರ: ದಿ ರಿವೆಂಜ್" ಬಿಡುಗಡೆಯಾದ 11 ದಿನಗಳಲ್ಲಿ ಭಾರತದಲ್ಲಿ 1,023 ಕೋಟಿ ರೂ. ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ.

ಜಾಗತಿಕ ಬಾಕ್ಸ್ ಆಫೀಸ್‌ನಿಂದ 342 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ರಸ್ತುತ ಭಾರತದ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹ 867 ಕೋಟಿ ರೂ. ಆಗಿದೆ.

ವಾರಾಂತ್ಯ ದಿನವಾದ ಶುಕ್ರವಾರ 42 ಕೋಟಿ ರೂ. ಶನಿವಾರದಂದು 64 ಕೋಟಿ ಮತ್ತು ಭಾನುವಾರದಂದು 71 ಕೋಟಿಗಳ ನಿವ್ವಳ ಗಳಿಕೆಯೊಂದಿಗೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕರು ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು Instagram ಹ್ಯಾಂಡಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಧುರಂಧರ್: ದಿ ರಿವೆಂಜ್" ಸಿನಿಮಾವನ್ನು ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ನಿರ್ಮಿಸಿದ್ದು, ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Dhurandhar: The Revenge Poster
3 ಗಂಟೆಗಳ ಬಕ್ವಾಸ್ ಚಿತ್ರ; ಅವಾಚ್ಯ ಭಾಷೆ ಬಿಟ್ಟರೇ ಮತ್ತೇನಿದೆ?: ಧುರಂಧರ್ 2 ಟೀಕಿಸಿದ ಅಸಾದುದ್ದೀನ್ ಓವೈಸಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com