

ಡಾ ರಾಜ್ಕುಮಾರ್ ಸಮಾಧಿಗೆ ಎರಡೂವರೆ ಎಕರೆ ಜಮೀನು ನೀಡುವ ಅಗತ್ಯವೇನಿದೆ ಎಂದು ನಟ ಚೇತನ್ ಅಹಿಂಸ ಅವರ ಮಾತಿಗೆ ಹಿರಿಯ ನಟ ಜಗ್ಗೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಾ ರಾಜ್ ಕುಮಾರ್ ಬಗ್ಗೆ ಗುಣಗಾನ ಮಾಡಿದ ಅವರು ಚೇತನ್ ತಮ್ಮ ಆಲೋಚನೆಯನ್ನು ತಿದ್ದಿಕೊಂಡರೆ ಸೂಕ್ತ ಎಂದು ಹೇಳಿದ್ದಾರೆ.
ಮೇರು ನಟ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು, ಮನಸ್ಸಿಗೆ ಬಹಳ ನೋವುಂಟು ಮಾಡಿತು. ಆತನಿಗೆ ನನ್ನ ಕಿವಿಮಾತು 1954ರಲ್ಲಿ ಕನ್ನಡ ಚಿತ್ರರಂಗಕ್ಕೆ ನೆಲೆ ಬೆಲೆ ಇಲ್ಲದ ಕಾಲ. ಇರಲು ಸೂರಿಲ್ಲಾ ಉದರಕ್ಕೆ ತೃಪ್ತ ಆಹಾರವಿಲ್ಲಾ ಅಂಥಹ ಸಮಯದಿಂದ ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿ ಅರಮನೆಯಂತೆ ಮಾಡಿ ಹೋಗಿದ್ದಾರೆ ಎಂದಿದ್ದಾರೆ ಜಗ್ಗೇಶ್.
ಇಂದು ಅದರ ಬೆಲೆ ಅರಿಯದೆ ಒಂದು ಅಥವ ಎರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಿ ಮಲೀನವಾಗೋ ಸಂಪ್ರದಾಯ ಹುಟ್ಟಿ ಹಿರಿಯರೆಲ್ಲಾ ಮೂರ್ಖರಂತೆ ಯಾರ ತಂಟೆ ಬೇಡವೆಂದು ಉಳಿದುಬಿಟ್ಟಿದ್ದಾರೆ. ದ್ವನಿ ಎತ್ತಿದರೆ ಸರ್ಕಾರ ಬದಲಾಗುತ್ತಿತ್ತು ಅದು ರಾಜಣ್ಣನ ತಾಕತ್ತು. ಅಂಥಹ ಸಾಧಕ ಹೋದಾಗ ಇಡಿ ಚಿತ್ರರಂಗ ಸರ್ಕಾರ ಒಟ್ಟುಗೂಡಿ ಅವರ ಶ್ರಮಕ್ಕೆ ಗೌರವ ನೀಡಲು ಅವರ ಕೊನೆಯ ಚಿರನಿದ್ರೆಗೆ ಕಲಾವಿದರ ರಂಗಸ್ಥಳವನ್ನು ಪ್ರೀತಿಯ ಹಾಸಿಗೆ ಮಾಡಿ ಮಲಗಿಸಿದ್ದಾರೆ ಎಂದಿದ್ದಾರೆ.
ಕಳೆದುಹೋದ ಸಮಯ ವಿಷಯ ಪ್ರಚಾರಕ್ಕಾಗಿ ಈಗ ಮಾತಾಡುವ ಚಿಕ್ಕಮನಸ್ಸು ಕಂಡು ಅಸಹ್ಯವಾಯಿತು. ಉತ್ತಮ ಚಿತ್ರಮಾಡಿ ಪ್ರೇಕ್ಷಕರ ರಂಜಿಸಿ ಹೆಸರುಮಾಡಿ, ಇಲ್ಲದಿದ್ದರೆ ಗಳಿಸಿದ ಅಲ್ಪ ಹೆಸರು ಮಾಸಿ ಜೀವನ ರೋಸಿ ಹೋಗುತ್ತದೆ ಎಂದು ನಟ ಜಗ್ಗೇಶ್ ಕಿವಿಮಾತನ್ನು ನಟ ಚೇತನ್ ಅಹಿಂಸಾ ಕುರಿತು ಹೇಳಿದ್ದಾರೆ.
Advertisement