ಮೈಕ್ರೋ ಸರಣಿ 'Love Punch'ಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ 'ರಾಮಾಚಾರಿ' ಮನದರಸಿ ಮೌನ ಗುಡ್ಡೆಮನೆ, Video!

ರಾಮಾಚಾರಿ ಧಾರಾವಾಹಿಯಲ್ಲಿ ಸೀರೆಯುಟ್ಟು ಅಪ್ಪಟ ಮನೆ ಮಗಳಂತೆ ಕಾಣಿಸಿಕೊಂಡಿದ್ದ ಮೌನ ಗುಡ್ಡೆಮನೆ ಇದೀಗ ರಗಡ್ ಲುಕ್ ತಳೆದಿದ್ದಾರೆ. ಹೌದು.. ಸದಾ ಸೀರೆ ಉಟ್ಟು ಸಾಂಪ್ರಾದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಬಿಕಿನಿ ಧರಿಸಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.
mouna guddemane
ಮೌನ ಗುಡ್ಡೆಮನೆ
Updated on

ರಾಮಾಚಾರಿ ಧಾರಾವಾಹಿಯಲ್ಲಿ ಸೀರೆಯುಟ್ಟು ಅಪ್ಪಟ ಮನೆ ಮಗಳಂತೆ ಕಾಣಿಸಿಕೊಂಡಿದ್ದ ಮೌನ ಗುಡ್ಡೆಮನೆ ಇದೀಗ ರಗಡ್ ಲುಕ್ ತಳೆದಿದ್ದಾರೆ. ಹೌದು.. ಸದಾ ಸೀರೆ ಉಟ್ಟು ಸಾಂಪ್ರಾದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಬಿಕಿನಿ ಧರಿಸಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.

ಹೊಸ ಮೈಕ್ರೋ ಸರಣಿ ಲವ್ ಪಂಚ್ ನಲ್ಲಿ ನಟಿ ಬೋಲ್ಡ್ ಲುಕ್ ಆಗಿ ಕಾಣಿಸಿಕೊಂಡಿದ್ದಾರೆ. ಲವ್ ಪಂಚ್ ಬುಲೆಟ್ ಮೈಕ್ರೋಡ್ರಾಮಾ ಅಪ್ಲಿಕೇಶನ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇತ್ತೀಚೆಗೆ ನಿಧನರಾದ ದಿಲೀಪ್ ರಾಜ್ ನಿರ್ದೇಶನದ ಈ ಸರಣಿಯಲ್ಲಿ ಮೌನ ಮತ್ತು ಶರತ್, ನಂದಿನಿ ಹಾಗೂ ಪ್ರೀತಮ್ ಎಂಬ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

mouna guddemane
ಶ್ರೀಲೀಲಾ- ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್?: 'ಇದು ಅನ್ಯಾಯ' ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದ ನಟಿ ತಾಯಿ!

ಇದೊಂದು ಕಾಲೇಜು ಜೀವನದ ಕಥೆಯಾಗಿದ್ದು ವಿಭಿನ್ನ ಮನಸ್ಥಿತಿ ಹೊಂದಿರುವ ಪ್ರೀತಮ್ ಮತ್ತು ನಂದಿನಿ ಸುತ್ತ ಕಥೆ ಹೆಣೆಯಲಾಗಿದೆ. ಮೊದಲಿಗೆ ಒಬ್ಬರನ್ನು ಕಂಡರೇ ಒಬ್ಬರಿಗೆ ಆಗುವುದಿಲ್ಲ. ಕಾಲಾನಂತರ ಇಬ್ಬರು ಪ್ರೀತಿಯಲ್ಲಿ ಬೀಳುತ್ತಾರೆ. ನಂದಿನಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಾಗ ಪ್ರೀತಮ್ ಅದನ್ನು ತಿರಸ್ಕರಿಸುತ್ತಾನೆ. ಮುಂದೇ ಏನಾಗುತ್ತದೆ ಎಂಬ ಕುತೂಹಲ ಹುಟ್ಟಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com