

ಮುಂಬಯಿ: ಭಾರತ ಚಿತ್ರರಂಗ ಅಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ತೀವ್ರ ಕುತೂಹಲ ಮೂಡಿಸಿರುವ ‘ರಾಮಾಯಣ‘ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ.
ಟ್ರೇಲರ್ ಬಂದಾಗಿನಿಂದಲೂ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ಗಳ ಸುರಿಮಳೆಯೇ ಆಗುತ್ತಿದೆ. ಈ ಎಲ್ಲ ಟ್ರೋಲ್ ಹಾಗೂ ಮೀಮ್ಸ್ಗಳಿಗೆ ನಟ ರಣಬೀರ್ ಕಪೂರ್ ಪ್ರತಿಕ್ರಿಯಿಸಿದ್ದಾರೆ.
ಐಐಎಂಯುಎನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ರಣಬೀರ್ ಕಪೂರ್, ‘ಕುಛ್ ತೋ ಲೋಗ್ ಕಹೇಂಗೆ, ಲೋಗೋ ಕಾ ಕಾಮ್ ಹೈ ಕೆಹನಾ’ ಎಂಬ ಹಿಂದಿ ಗೀತೆಯ ಸಾಲನ್ನು ನೆನಪಿಸಿಕೊಂಡಿದ್ದಾರೆ. ಜನರು ಏನಾದರೂ ಹೇಳುತ್ತಲೇ ಇರುತ್ತಾರೆ. ಮಾತನಾಡುವುದು ಅವರ ಸ್ವಭಾವ, ಅದಕ್ಕೆ ತಲೆಕೆಡಿಸಿಕೊಳ್ಳಬಾರದು ಎನ್ನುವುದು ಜೀವನದ ಉತ್ತಮ ತತ್ವ. ನಿಮ್ಮ ಕೆಲಸ, ನಿಮ್ಮ ಉದ್ದೇಶ ಮತ್ತು ನಿಮ್ಮ ಒಳ್ಳೆತನವನ್ನು ಪ್ರೀತಿಸುವ ಜನರು ಮಾತ್ರ ನಿಮಗೆ ಮುಖ್ಯವಾಗಬೇಕು ಎಂದು ರಣಬೀರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಕೂಡ ಈ ಕುರಿತು ಮಾತನಾಡುತ್ತಾ, "ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದು, ನೀವು ನೂರರಷ್ಟು ಶ್ರಮ ಹಾಕಿದ್ದರೆ, ಇನ್ನೇನು ಬೇಕು?" ಎಂದು ಪ್ರಶ್ನಿಸಿದರು.
ರಾಮಾಯಣ'ದ ಕುರಿತಾದ ಟ್ರೋಲ್ಗಳು ಮತ್ತು ಮೀಮ್ಗಳ ಬಗ್ಗೆ ನಮಿತಾ ಮಲ್ಹೋತ್ರ ಪ್ರತಿಕ್ರಿಯಿಸಿದ್ದಾರೆ. "ನಿಜ ಹೇಳಬೇಕೆಂದರೆ, ಒಂದು ಹಂತದ ನಂತರ ನನಗಿದು ಹಾಸ್ಯದ ವಿಷಯವಾಗಿ ಕಾಣತೊಡಗಿತು, ಹಾಗಾಗಿ ನಗಲು ಶುರು ಮಾಡಿದೆ.
ಇವರೆಲ್ಲರೂ ಬೇರೊಬ್ಬರನ್ನು ಗುರಿಯಾಗಿಸಿಕೊಂಡು ಮಜಾ ನೋಡಲು ಬಯಸುತ್ತಾರೆ. ಇವತ್ತು ನಾನಿದ್ದರೆ, ನಾಳೆ ಇನ್ನೊಬ್ಬರು ಇರುತ್ತಾರೆ. ಸುದ್ದಿಯಲ್ಲಿರುವ ಯಾರನ್ನಾದರೂ ಹಿಡಿದುಕೊಂಡು ತಮಾಷೆ ಮಾಡುವುದು ಅವರಿಗೆ ಬೇಕಷ್ಟೇ. ಇವತ್ತು ಜಗತ್ತಿನ ಅತ್ಯುತ್ತಮ ವ್ಯಕ್ತಿಗಳೇ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಹಾಗಾಗಿ, ನಾನು ಇದನ್ನು ಸಹಜವಾಗಿ ಸ್ವೀಕರಿಸಿ ಆನಂದಿಸುತ್ತೇನೆ; ಏಕೆಂದರೆ ಇಂತಹ ಅವಕಾಶ ಮತ್ತೆ ಯಾವಾಗ ಸಿಗುತ್ತದೆ ಹೇಳಿ?" ಎಂದು ನಿರ್ಮಾಪಕರು ಹೇಳಿದರು.