ನಟಿ ಐಶ್ವರ್ಯಾ ಅರ್ಜುನ್ - ಉಮಾಪತಿ ಸಂಸಾರದಲ್ಲಿ ಬಿರುಕು? ಅರ್ಜುನ್ ಸರ್ಜಾ ಮಗಳ ವಿಚ್ಛೇದನ ವದಂತಿ ಬಗ್ಗೆ ತಂಬಿ ರಾಮಯ್ಯ ಹೇಳಿದ್ದೇನು?

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ನಟಿ ಐಶ್ವರ್ಯಾ ಅರ್ಜುನ್ ಹಾಗೂ ನಟ ಉಮಾಪತಿ ರಾಮಯ್ಯ ಅವರ ವೈವಾಹಿಕ ಜೀವನದ ಬಗ್ಗೆ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಉಮಾಪತಿ ಅವರ ತಂದೆ ತಂಬಿ ರಾಮಯ್ಯ ಅವರು ಅಧಿಕೃತವಾಗಿ ಬ್ರೇಕ್ ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Actor Thambi Ramaiah Clarifies Rumours Regarding Aishwarya Arjun and Umapathy Ramaiah Marriage
ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯಾ ಅರ್ಜುನ್ - ಉಮಾಪತಿ ಸಂಸಾರದಲ್ಲಿ ಬಿರುಕು?Online Desk
Updated on: 

ಚೆನ್ನೈ (ತಮಿಳುನಾಡು): ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯ ಅರ್ಜುನ್ ಹಾಗೂ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರ ವೈವಾಹಿಕ ಜೀವನದ ಕುರಿತು ಹಬ್ಬಿದ್ದ ವಿಚ್ಛೇದನದ ವದಂತಿಗಳಿಗೆ ನಟ ತಂಬಿ ರಾಮಯ್ಯ ಅಧಿಕೃತವಾಗಿ ಸ್ಪಷ್ಟನೆ ನೀಡುವ ಮೂಲಕ ಬ್ರೇಕ್ ಹಾಕಿದ್ದಾರೆ. ಮಗ ಮತ್ತು ಸೊಸೆಯ ಸಂಸಾರ ಚೆನ್ನಾಗಿದೆ ಎಂದು ಹೇಳಿರುವ ಅವರು, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ವದಂತಿ ಹುಟ್ಟಿಕೊಳ್ಳಲು ಕಾರಣವೇನು?

ದೂರದ ಇಟಲಿಯ ಟುಸ್ಕಾನಿ ನಗರದಲ್ಲಿ ಇತ್ತೀಚೆಗಷ್ಟೇ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರ ಅದ್ಧೂರಿ ವಿವಾಹ ನೆರವೇರಿತ್ತು. ಈ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಮದುವೆಯ ಯಾವುದೇ ಫೋಟೋಗಳಲ್ಲೂ ಅರ್ಜುನ್ ಸರ್ಜಾ ಅವರ ಹಿರಿಯ ಅಳಿಯ ನಟ ಉಮಾಪತಿ ರಾಮಯ್ಯ ಕಾಣಿಸಿಕೊಂಡಿರಲಿಲ್ಲ. ನಾದಿನಿಯ ಮದುವೆಯಲ್ಲೇ ಅಳಿಯ ನಾಪತ್ತೆಯಾಗಿದ್ದನ್ನು ಗಮನಿಸಿದ ನೆಟ್ಟಿಗರು, ಐಶ್ವರ್ಯಾ ಮತ್ತು ಉಮಾಪತಿ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದ್ದರು.

Actor Thambi Ramaiah Clarifies Rumours Regarding Aishwarya Arjun and Umapathy Ramaiah Marriage
ಅರ್ಜುನ್ ಸರ್ಜಾ ಪುತ್ರಿ ಮದುವೆಗೆ ಧ್ರುವ ದಂಪತಿಗೆ ಆಮಂತ್ರಣ; ಚಿರು ಪತ್ನಿಗಿಲ್ಲ ಆಹ್ವಾನ: ಸತ್ಯ ಬಿಚ್ಚಿಟ್ಟ ಮೇಘನಾ ರಾಜ್!

ಮದುವೆಗೆ ಹೋಗದಿರಲು ಕಾರಣ ಬಿಚ್ಚಿಟ್ಟ ತಂಬಿ ರಾಮಯ್ಯ

ಈ ಬಗ್ಗೆ ಮೌನ ಮುರಿದಿರುವ ಉಮಾಪತಿ ತಂದೆ ನಟ ತಂಬಿ ರಾಮಯ್ಯ ಅವರು, "ಕೇವಲ ಮದುವೆಗಾಗಿ ಸುಮಾರು 12 ದಿನಗಳ ಕಾಲ ಇಟಲಿಗೆ ಹೋಗಿ ಸಮಯ ಮತ್ತು ಹಣ ಎರಡನ್ನೂ ವ್ಯರ್ಥ ಮಾಡುವುದು ಬೇಡ ಎಂಬ ಕಾರಣಕ್ಕಷ್ಟೇ ನಾವು ಹೋಗಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಶೀಘ್ರದಲ್ಲೇ ಚೆನ್ನೈನಲ್ಲಿ ನವದಂಪತಿಗಾಗಿ ಅದ್ದೂರಿಯಾದ ರಿಸೆಪ್ಷನ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆ ಸಮಾರಂಭದಲ್ಲಿ ನಾವೆಲ್ಲರೂ ಭಾಗಿಯಾಗಲಿದ್ದೇವೆ ಎಂದ ರಾಮಯ್ಯ, ಕೇವಲ ಒಂದು ಫೋಟೋದಲ್ಲಿ ಕಾಣಿಸಿಕೊಂಡಿಲ್ಲ ಎಂದಮಾತ್ರಕ್ಕೆ ದಂಪತಿಗಳು ದೂರವಾಗುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ತಮಿಳಿನ ಖ್ಯಾತ ಪಿ.ಆರ್.ಒ ವಿತಗನ್ ಅವರು, "ನಟ ಅರ್ಜುನ್ ಅವರ ಎರಡನೇ ಮಗಳ ಮದುವೆ ಇಟಲಿಯಲ್ಲಿ ನಡೆದಾಗ, ಆ ಸಮಾರಂಭದಲ್ಲಿ ಉಮಪತಿ ಅಥವಾ ತಂಬಿ ರಾಮಯ್ಯ ಅವರ ಕುಟುಂಬದವರು ಯಾರು ಕೂಡ ಭಾಗವಹಿಸಿರಲಿಲ್ಲ. ಶ್ರೀಮಂತ ಕುಟುಂಬದವರಾದ ಇವರಿಗೆ ಇಟಲಿಗೆ ಹೋಗುವುದು ದೊಡ್ಡ ವಿಷಯವಲ್ಲದಿದ್ದರೂ, ಶೂಟಿಂಗ್ ಇಲ್ಲದಿದ್ದರೂ ಕನಿಷ್ಠ ಪಕ್ಷ ಒಂದು ಶುಭ ಹಾರೈಸುವ ವೀಡಿಯೊವನ್ನು ಕೂಡ ಬಿಡುಗಡೆ ಮಾಡದಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಏತನ್ಮಧ್ಯೆ, ಐಶ್ವರ್ಯ ಅರ್ಜುನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಳೆದ ಪೊಂಗಲ್ ಹಬ್ಬದ ನಂತರ ಉಮಪತಿ ಜೊತೆ ಇರುವ ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ. ಇಬ್ಬರೂ ಪ್ರತ್ಯೇಕವಾಗಿಯೇ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದ್ದಾರೆ ಎಂದು ವಿತಗನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X