ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು? ಮಾವ ತಂಬಿ ರಾಮಯ್ಯ ಹೇಳಿದ್ದೇನು?

ಅಂಜನಾ ಅವರ ಮದುವೆಯಲ್ಲಿ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ಅವರ ಮೊದಲ ಪುತ್ರಿ, ನಟಿ ಐಶ್ವರ್ಯಾ ಸಹ ಭಾಗಿ ಆಗಿದ್ದರು. ಆದರೆ ಅವರ ಪತಿ, ನಟ ಉಮಾಪತಿ ರಾಮಯ್ಯ ಅವರು ಈ ಮದುವೆಯಲ್ಲಿ ಭಾಗವಹಿಸಿಲ್ಲ.
Actor Arjun Sarja's daughter Aishwarya Sarja's marriage in trouble!?
ಐಶ್ವರ್ಯಾ ಸರ್ಜಾ - ಉಮಾಪತಿ
Updated on: 

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅವರ ಮದುವೆ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನಡೆದಿದ್ದು, ಇದರ ಬೆನ್ನಲ್ಲೇ ಅವರ ಮೊದಲ ಪುತ್ರಿ ಐಶ್ವರ್ಯಾ ಸರ್ಜಾ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಂಜನಾ ಅವರ ಮದುವೆಯಲ್ಲಿ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ಅವರ ಮೊದಲ ಪುತ್ರಿ, ನಟಿ ಐಶ್ವರ್ಯಾ ಸಹ ಭಾಗಿ ಆಗಿದ್ದರು. ಆದರೆ ಅವರ ಪತಿ, ನಟ ಉಮಾಪತಿ ರಾಮಯ್ಯ ಅವರು ಈ ಮದುವೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ದಂಪತಿಯ ನಡುವೆ ಎಲ್ಲವೂ ಸರಿಯಿಲ್ಲ. ಐಶ್ವರ್ಯಾ ಸರ್ಜಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ.

ಐಶ್ವರ್ಯಾ ಸರ್ಜಾ ಅವರು 2024ರಲ್ಲಿ ತಮಿಳು ನಟ ಉಮಾಪತಿ ಅವರನ್ನು ವಿವಾಹವಾಗಿದ್ದರು. ಆದರೆ ಈಗ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿಯ ಮದುವೆಯಲ್ಲಿ ಉಮಾಪತಿ ಭಾಗಿ ಆಗಿಲ್ಲ ಎನ್ನಲಾಗಿದ್ದು, ಚಿತ್ರಗಳಲ್ಲಿ ಸಹ ಉಮಾಪತಿ ಅವರು ಕಾಣಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಐಶ್ವರ್ಯಾ ಹಾಗೂ ಉಮಾಪತಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು.

Actor Arjun Sarja's daughter Aishwarya Sarja's marriage in trouble!?
ಅರ್ಜುನ್ ಸರ್ಜಾ ಪುತ್ರಿ ಮದುವೆಗೆ ಧ್ರುವ ದಂಪತಿಗೆ ಆಮಂತ್ರಣ; ಚಿರು ಪತ್ನಿಗಿಲ್ಲ ಆಹ್ವಾನ: ಸತ್ಯ ಬಿಚ್ಚಿಟ್ಟ ಮೇಘನಾ ರಾಜ್!

ಇದು ಕೇವಲ ವದಂತಿ ಎಂದ ಐಶ್ವರ್ಯ ಮಾವ

ಐಶ್ವರ್ಯ ಅವರ ಮಾವ, ಉಮಾಪತಿ ರಾಮಯ್ಯ ಅವರ ತಂದೆ ಖ್ಯಾತ ಹಾಸ್ಯನಟ ತಂಬಿ ರಾಮಯ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿಚ್ಛೇದನ ಸುದ್ದಿ ಹಬ್ಬಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉಮಾಪತಿ ಹಾಗೂ ಐಶ್ವರ್ಯಾ ಅವರು ಸಂತೋಷದಿಂದ ಇದ್ದಾರೆ. ಇಬ್ಬರೂ ಚೆನ್ನೈನ ನಿವಾಸದಲ್ಲಿ ಒಟ್ಟಿಗೆ ಇದ್ದಾರೆ. ಅವರ ದಾಂಪತ್ಯದ ಬಗ್ಗೆ ಯಾರೂ ಸುಳ್ಳು ಸುದ್ದಿಗಳನ್ನು ಹರಿಬಿಡಬಾರದು ಎಂದು ಮನವಿ ಮಾಡಿದ್ದಾರೆ. ತಂಬಿ ರಾಮಯ್ಯ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅವರು ಇತ್ತೀಚೆಗಷ್ಟೆ ಇಟಲಿಯಲ್ಲಿ ಇಸಾಯಾ ನಟ್ಟರ್ ಎಂಬ ಇಟಲಿ ಪ್ರಜೆಯನ್ನು ವಿವಾಹವಾಗಿದ್ದಾರೆ. ಇವರ ವಿವಾಹ ಇಟಲಿಯಲ್ಲೇ ನಡೆದಿದ್ದು, ಅರ್ಜುನ್ ಸರ್ಜಾ ಅವರ ಕುಟುಂಬ ವಿವಾಹದಲ್ಲಿ ಭಾಗಿ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X