ಬಾಕ್ಸ್ ಆಫೀಸ್​​ನಲ್ಲಿ ರಾಮಾಯಣ 1 ಅಬ್ಬರ: ಮೂರೇ ದಿನಕ್ಕೆ ₹375 ಕೋಟಿ ಬಾಚಿದ ಯಶ್ ನಟನೆಯ ಸಿನಿಮಾ

ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ: ಭಾಗ 1' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಸೃಷ್ಟಿಸಿದ್ದು, ಬಿಡುಗಡೆಯಾದ ಕೇವಲ 3 ದಿನಗಳಲ್ಲಿ ವಿಶ್ವಾದ್ಯಂತ ₹375.50 ಕೋಟಿ ಭರ್ಜರಿ ಗ್ರಾಸ್ ಕಲೆಕ್ಷನ್ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
'Ramayana: Part 1' trailer unveils grand battle between Ranbir Kapoor as Lord Rama and Yash as Ravana
ಬಾಕ್ಸ್ ಆಫೀಸ್​​ನಲ್ಲಿ ರಾಮಾಯಣ 1 ಅಬ್ಬರOnline Desk
Updated on: 

Ramayana Part 1 Box Office Collection: ಭಾರತೀಯ ಸಿನಿಮಾ ಅಂಗಳದಲ್ಲಿ ಈಗ ಎಲ್ಲೆಲ್ಲೂ ರಾಮಾಯಣ ಭಾಗ 1 ಸಿನಿಮಾದದ್ದೇ ಹವಾ. ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಸಣ್ಣದಾದ ಇಳಿಕೆ ಕಂಡರೂ, ವಾರಾಂತ್ಯದ ಶನಿವಾರದಂದು ಚಿತ್ರಮಂದಿರಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ನದಿಯಂತೆ ಹರಿದಿದೆ. ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಬ್ರಹ್ಮಾಂಡ ಚಿತ್ರವು ಕೇವಲ ಮೂರೇ ದಿನಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭರ್ಜರಿ ಕಮಾಯಿ ಮಾಡಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಮೂರನೇ ದಿನದ ಭರ್ಜರಿ ಜಂಪ್

ನವೆಂಬರ್ 5ರ ಗುರುವಾರ ಬಿಡುಗಡೆಯಾಗಿದ್ದ ಈ ಚಿತ್ರವು ಎರಡನೇ ದಿನ (ಶುಕ್ರವಾರ) ಗಳಿಕೆಯಲ್ಲಿ ಶೇ. 25.9 ರಷ್ಟು ಕುಸಿತ ಕಂಡಿತ್ತಾದರೂ, ಶನಿವಾರ (ಮೂರನೇ ದಿನ) ಬರೋಬ್ಬರಿ ಶೇ. 45.3 ರಷ್ಟು ಭಾರಿ ಜಿಗಿತ ಕಾಣುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಬಿಡುಗಡೆಯಾದ ಕೇವಲ 3 ದಿನಗಳಲ್ಲಿ ವಿಶ್ವಾದ್ಯಂತ ₹375.50 ಕೋಟಿ ಭರ್ಜರಿ ಗ್ರಾಸ್ ಕಲೆಕ್ಷನ್ ಮಾಡಿದೆ. ಅದರಂತೆ, ಶನಿವಾರ ಒಂದೇ ದಿನ ಭಾರತದಲ್ಲಿ 69.80 ಕೋಟಿ ರೂ. ನೆಟ್ ಗಳಿಕೆ ಮಾಡಿದೆ.

'Ramayana: Part 1' trailer unveils grand battle between Ranbir Kapoor as Lord Rama and Yash as Ravana
Yash ಹ್ಯಾಟ್ರಿಕ್ ಸಾಧನೆ: ಸತತ 3 ಚಿತ್ರಗಳು ಮೊದಲ ದಿನವೇ ₹140 ಕೋಟಿ ಗ್ರಾಸ್ ಕಲೆಕ್ಷನ್; ಭಾರತೀಯ ಚಿತ್ರರಂಗದ ಮೊದಲ ನಟ!

ವಿದೇಶಗಳಲ್ಲೂ ಅಬ್ಬರ

ಮುಂದುವರೆದು, ಮೂರು ದಿನಗಳಲ್ಲಿ ಚಿತ್ರ ಭಾರತದಲ್ಲಿ ಒಟ್ಟು 182.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದು, ಇದರ ಒಟ್ಟು ಗ್ರಾಸ್ ಮೊತ್ತ 218.25 ಕೋಟಿ ರೂ. ದಾಟಿದೆ. ಇದರೊಂದಿಗೆ, ಸಾಗರೋತ್ತರ ಮಾರುಕಟ್ಟೆಯಲ್ಲೂ ರಾಮಾಯಣ ಅಬ್ಬರಿಸುತ್ತಿದ್ದು, ಮೂರು ದಿನಗಳಿಂದ ವಿದೇಶಗಳಿಂದಲೇ ಬರೋಬ್ಬರಿ 157.25 ಕೋಟಿ ರೂ. ಬಾಚಿಕೊಂಡಿದೆ.

ಹಾಗಾದ್ರೆ, ಭಾಷಾವಾರು ಕಲೆಕ್ಷನ್ ಹೇಗಿದೆ?

ಚಿತ್ರಕ್ಕೆ ಹಿಂದಿ ಆವೃತ್ತಿಯಿಂದ ಅತಿ ಹೆಚ್ಚು (ಸುಮಾರು 74%) ಆದಾಯ ಬಂದಿದೆ. ಅದರಂತೆ, ಹಿಂದಿ ಆವೃತ್ತಿಯು ಸಿಂಹಪಾಲು ಅಂದರೆ ₹53 ಕೋಟಿ ಗಳಿಸಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಕ್ರೇಜ್‌ನಿಂದಾಗಿ ತೆಲುಗು ಆವೃತ್ತಿ ₹7.30 ಕೋಟಿ ಬಾಚಿಕೊಂಡಿದ್ದರೆ, ಕನ್ನಡ ಆವೃತ್ತಿಯು ಮೊದಲ ದಿನದಿಂದಲೇ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 3 ದಿನಗಳಲ್ಲಿ ಅಂದಾಜು ₹17 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಉಳಿದಂತೆ ತಮಿಳು ಹಾಗೂ ಮಲಯಾಳಂ ಆವೃತ್ತಿಗಳಿಂದಲೂ ಉತ್ತಮ ಗಳಿಕೆ ಹರಿದುಬಂದಿದೆ.

'Ramayana: Part 1' trailer unveils grand battle between Ranbir Kapoor as Lord Rama and Yash as Ravana
'₹4 ಸಾವಿರ ಕೋಟಿ ಬಜೆಟ್, VFX ಬದಿಗಿಡಿ, ರಾಮ-ಸೀತೆಯ ಬಗ್ಗೆ ಮಾತಾಡಿ; 'ಮಾತೃಭೂಮಿ' ಚಿತ್ರದ ಪಾತ್ರಕ್ಕೂ ಶ್ರೀರಾಮನ ಆದರ್ಶಗಳಿಗೂ ಹೋಲಿಕೆಯಿದೆ'

ಒಟ್ಟಾರೆಯಾಗಿ, ವೀಕೆಂಡ್‌ನ ಕೊನೆಯ ದಿನವಾದ ಭಾನುವಾರದ (ಇಂದು) ಗಳಿಕೆಯೂ ಸೇರಿದರೆ ಚಿತ್ರ ಕೇವಲ 4 ದಿನಗಳಲ್ಲಿಯೇ 450 ರಿಂದ 500 ಕೋಟಿ ರೂಪಾಯಿಗಳ ಮೈಲಿಗಲ್ಲನ್ನು ದಾಟುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X