

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರೇಕ್ಷಕರ ಗಮನ ಸೆಳೆದಿದ್ದ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ 'ಪ್ರೇಮದ ಊರಲಿ' ಇದೀಗ ಒಟಿಟಿ ಅಂಗಳಕ್ಕೆ ಲಗ್ಗೆ ಇಟ್ಟಿದೆ.
ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ, ಆರಂಭದಲ್ಲಿ ಅತ್ಯಂತ ಸಾಧಾರಣವಾಗಿ ಚಿತ್ರಮಂದಿರಗಳಿಗೆ ಆಗಮಿಸಿ, ತದನಂತರ ಬೆಳ್ಳಿಪರದೆಯ ಮೇಲೆ ಸೃಷ್ಟಿಸಿದ ಇತಿಹಾಸ ಹಾಗೂ ಕಲೆಕ್ಷನ್ ಸೌಂಡ್ ಸಣ್ಣದೇನಲ್ಲ.
ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿ ಪ್ರೇಕ್ಷಕರ ನೆಚ್ಚಿನ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಹೊರಹೊಮ್ಮಿದ ಈ ಚಿತ್ರ, ಇದೀಗ ಡಿಜಿಟಲ್ (OTT) ಪ್ಲಾಟಫಾರ್ಮನಲ್ಲಿ ಕಾಣಿಸಿಕೊಳ್ಳಲಿದೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಯಶಸ್ಸು ಕಂಡಿದ್ದ ಈ ಸಿನಿಮಾ ಬರೊಬ್ಬರಿ 150ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.
ಪ್ರೈಮ್ ವಿಡಿಯೋದಲ್ಲಿ ನವೆಂಬರ್ 17 ರಿಂದ ಜಾಗತಿಕ ಪ್ರದರ್ಶನ!
ಬೆಳ್ಳಿಪರದೆಯ ಮೇಲೆ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ 'ಪ್ರೇಮದ ಊರಲಿ' ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಾಗತಿಕ ಮಟ್ಟದ ಮುಂಚೂಣಿ ಒಟಿಟಿ ಸಂಸ್ಥೆಯಾದ ಪ್ರೈಮ್ ವಿಡಿಯೋ ಅತ್ಯುತ್ತಮ ಮೊತ್ತಕ್ಕೆ ಪಡೆದುಕೊಂಡಿದೆ.
ಮುಂಬರುವ ನವೆಂಬರ್ 17 ರಿಂದ ಈ ಸಿನಿಮಾ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದವರಿಗೂ ಹಾಗೂ ಒಟಿಟಿ ವೀಕ್ಷಕರಿಗೂ ಮನೆಯಲ್ಲಿಯೇ ಕುಳಿತು ಈ ಅದ್ಭುತ ಪ್ರಣಯ ಕಥೆ ಆನಂದಿಸುವ ಸುವರ್ಣ ಅವಕಾಶ ದೊರೆತಂತಾಗಿದೆ.
ಅಮೆಜಾನ್ ಪ್ರೈಮ್ ನಲ್ಲಿ ಪ್ರದರ್ಶನ
ನವೆಂಬರ್ 17ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಯಾವುದೇ ದೊಡ್ಡ ಮುನ್ಸೂಚನೆ ಇಲ್ಲದೆ ಸಿನಿಮಾ ಒಟಿಟಿಗೆ ಬಂದಿರುವುದು ಸಿನಿಪ್ರಿಯರಿಗೆ ಅಚ್ಚರಿ ಮೂಡಿಸಿದೆ.
ಪ್ರೇಮ, ಭಾವನೆ ಮತ್ತು ಸಂಬಂಧಗಳ ಸುತ್ತ ಹೆಣೆದಿರುವ 'ಪ್ರೇಮದ ಊರಲಿ' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದವರು ಮನೆಯಲ್ಲೇ ಕುಳಿತು ವೀಕ್ಷಿಸುವ ಅವಕಾಶ ಸಿಕ್ಕಿದೆ.
ಇಂದಿನಿಂದಲೇ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರರು ಈ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು. ಕನ್ನಡ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯ ನಡುವೆಯೇ 'ಪ್ರೇಮದ ಊರಲಿ' ಡಿಜಿಟಲ್ ಬಿಡುಗಡೆಯಾಗಿದೆ.
ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಸಾಧ್ಯವಾಗದವರು ಹಾಗೂ ಮತ್ತೊಮ್ಮೆ ಸಿನಿಮಾ ವೀಕ್ಷಿಸಲು ಬಯಸುವವರು ಇದೀಗ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ತಮ್ಮ ಮನೆಯಲ್ಲೇ ಸಿನಿಮಾ ಆನಂದಿಸಬಹುದು.